AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಶ್ರೀಕೃಷ್ಣನ ಅವತಾರದಲ್ಲಿದ್ದಾರೆ; ಸಿದ್ದರಾಮಯ್ಯ ಮೂರ್ಖರ ರೀತಿ ಮಾತಾಡ್ತಾರೆ: ಶ್ರೀರಾಮುಲು‌

ಅಗ್ನಿಪಥ್ ಯೋಜನೆ ವಿರುದ್ದ ಕಾಂಗ್ರೆಸ್ ಷಡ್ಯಂತ್ರ ಮಾಡ್ತಿದೆ. ದೇಶದ ಸೈನಿಕನಾದ್ರೆ ಅವನಿಗೆ ಅವನದೇ ಆದ ಕ್ರೆಡಿಬಿಲಿಟಿ ಬರುತ್ತೆ ಎಂದು ರಾಮುಲು ಹೆಮ್ಮೆಪಟ್ಟಿದ್ದಾರೆ. ಇನ್ನು, ಸಿದ್ದರಾಮಯ್ಯ ಬಾಗಲಕೋಟೆ DCಗೆ ತರಾಟೆ ತೆಗೆದುಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮುಲು ಸಿದ್ದರಾಮಯ್ಯ ಸಂಸ್ಕಾರ ಇಲ್ಲದ ವ್ಯಕ್ತಿ ಎಂದರು.

ಪ್ರಧಾನಿ ಮೋದಿ ಶ್ರೀಕೃಷ್ಣನ ಅವತಾರದಲ್ಲಿದ್ದಾರೆ; ಸಿದ್ದರಾಮಯ್ಯ ಮೂರ್ಖರ ರೀತಿ ಮಾತಾಡ್ತಾರೆ: ಶ್ರೀರಾಮುಲು‌
ಪ್ರಧಾನಿ ಮೋದಿ ಶ್ರೀಕೃಷ್ಣನ ಅವತಾರದಲ್ಲಿದ್ದಾರೆ; ಸಿದ್ದರಾಮಯ್ಯ ಮೂರ್ಖರ ರೀತಿ ಮಾತಾಡ್ತಾರೆ: ಶ್ರೀರಾಮುಲು‌
TV9 Web
| Edited By: |

Updated on: Jun 21, 2022 | 3:41 PM

Share

ಕೊಪ್ಪಳ: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸರಣಿ ಟ್ವೀಟ್ ಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ( B Sriramulu) ಟಾಂಗ್ ನೀಡಿದ್ದು ಸಿದ್ದರಾಮಯ್ಯ (Siddaramaiah) ಮೂರ್ಖರ ರೀತಿ ಮಾತಾಡ್ತಾರೆ ಎಂದು ವ್ಯಾಖ್ಯಾನಿಸಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ಸಾರಿಗೆ ಸಚಿವ ಶ್ರೀರಾಮುಲು‌ ಈ ಬಗ್ಗೆ ಮಾತನಾಡಿದ್ದು ಮೋದಿಯನ್ನು ಹಾಡಿ ಹೊಗಳಿದ್ದಾರೆ. ನರೇಂದ್ರ ಮೋದಿ (Narendra Modi) ಶ್ರೀ ಕೃಷ್ಣನ ಅವತಾರದಲ್ಲಿದ್ದಾರೆ. ಮಹಾಭಾರತದಲ್ಲಿ ಶ್ರೀ ಕೃಷ್ಣ ಹೇಗೆ ಪಾತ್ರ ವಹಿಸಿದ್ದರೋ ಹಾಗೇ ಭಾರತದ ಪ್ರಗತಿಯಲ್ಲಿ ಮೋದಿ ಶ್ರೀಕೃಷ್ಣನ ಅವತಾರದಲ್ಲಿದ್ದಾರೆ. ನವ ಭಾರತ ನಿರ್ಮಾಣಕ್ಕೆ ಮೋದಿ ಬಹಳ ಶ್ರಮಿಸುತ್ತಾರೆ. ಮೋದಿ ಜನಪ್ರಿಯತೆ ಸಹಿಸದೆ ಸಿದ್ದರಾಮಯ್ಯ ಮೂರ್ಖರ ರೀತಿ ಮಾತಾಡ್ತಾರೆ ಎಂದು ಹೇಳಿದ್ದಾರೆ.

ಮೋದಿಜಿಯವರ ಬಗ್ಗೆ ಟೀಕೆ ಮಾಡೋದಕ್ಕೆ ಮೋದಿ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ‌. ಅಧಿಕಾರಕ್ಕೆ ಬರಲ್ಲ ಅನ್ನೋ ಹತಾಶೆ ಕಾಂಗ್ರೆಸ್ ನಾಯಕರಿಗಿದೆ ಎಂದ ರಾಮುಲು ನಿಮ್ಮ ಪ್ರಧಾನಿ ಮನ್ ಕೀ ಬಾತ್ ಮಾಡಿದ ಉದಾಹರಣೆ ಇದೆಯಾ? ಕಾಂಗ್ರೆಸ್ ಪ್ರಧಾನಿ ದೆಹಲಿಗೆ ಸೀಮಿತವಾಗಿದ್ದರು. ನಮ್ಮ ಪ್ರಧಾನಿ ಹಳ್ಳಿ ಹಳ್ಳಿಗೂ ತಲುಪಿದ್ದಾರೆ ಎಂದು ಹೇಳಿದ್ದಾರೆ. ಮೋದಿಜಿಯವರು 2006-2007 ರಿಂದಲೂ ನನಗೂ ಪರಿಚಯ. ಬಹಳ ಪ್ರೀತಿ ಇಂದ ನನ್ನ ನೋಡಿಕೊಳ್ತಾರೆ. ನನ್ನ ಮೇಲೆ ವಿಶೇಷ ಪ್ರೀತಿ ಇದೆ. ದೆಹಲಿಗೆ ಯಾಕೆ ಬಂದಿಲ್ಲ ಅಂತಾ ಕೇಳಿದ್ರು, ಬರ್ತಿನಿ ಅಂತಾ ಹೇಳಿದ್ದೇನೆ ಎಂದು ರಾಮುಲು ಹೇಳಿದರು.

ಅಗ್ನಿಪಥ್ ಯೋಜನೆ ವಿರುದ್ದ ಕಾಂಗ್ರೆಸ್ ಷಡ್ಯಂತ್ರ ಮಾಡ್ತಿದೆ. ದೇಶದ ಸೈನಿಕನಾದ್ರೆ ಅವನಿಗೆ ಅವನದೇ ಆದ ಕ್ರೆಡಿಬಿಲಿಟಿ ಬರುತ್ತೆ ಎಂದು ರಾಮುಲು ಹೆಮ್ಮೆಪಟ್ಟಿದ್ದಾರೆ. ಇನ್ನು, ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲಾಧಿಕಾರಿಗೆ ತರಾಟೆ ತೆಗೆದುಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ರಾಮುಲು ಸಿದ್ದರಾಮಯ್ಯ ಸಂಸ್ಕಾರ ಇಲ್ಲದ ವ್ಯಕ್ತಿ. ನಾನು ಅವರ ಬಗ್ಗೆ ಮಾತನಾಡಲ್ಲ ಎಂದರು. ಪ್ರೋಟೋಕಾಲ್ ಪ್ರಕಾರ ಹೆಸರು ಬರಬೇಕಾಗತ್ತೆ ಎಂದ ರಾಮುಲು ಇದೀಗ ಹೆಸರು ಹಾಕಬೇಡಿ ಎಂದಿದ್ದಾರೆ. ಬದಾಮಿ ಜನ ಸಿದ್ದರಾಮಯ್ಯ ರನ್ನ ತಿರಸ್ಕಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕ್ಷೇತ್ರ ಹುಡುಕುತ್ತಾ ಹೋಗ್ತಾರೆ ಎಂದು ವ್ಯಂಗ್ಯವಾಡಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ