ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ ಅನುಭವ: ಜನರಲ್ಲಿ ಮೂಡಿದ ಆತಂಕ
ಶಿವಮೊಗ್ಗ ನಗರದಲ್ಲಿ ಎರಡು ಬಾರಿ ಸ್ಫೋಟದ ಶಬ್ದ ಕೇಳಿಬಂದಿರುವ ಘಟನೆ ವರದಿಯಾಗಿದೆ. ಜೊತೆಗೆ, ನಗರದಲ್ಲಿ ಸ್ಥಳೀಯರಿಗೆ ಭೂಮಿ ಕಂಪಿಸಿರುವ ಅನುಭವ ಸಹ ಉಂಟಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.
ಶಿವಮೊಗ್ಗ ನಗರದಲ್ಲಿ ಎರಡು ಬಾರಿ ಸ್ಫೋಟದ ಶಬ್ದ ಕೇಳಿಬಂದಿರುವ ಘಟನೆ ವರದಿಯಾಗಿದೆ. ಜೊತೆಗೆ, ನಗರದಲ್ಲಿ ಸ್ಥಳೀಯರಿಗೆ ಭೂಮಿ ಕಂಪಿಸಿರುವ ಅನುಭವ ಸಹ ಉಂಟಾಗಿದೆ.
ಹಾಗಾಗಿ, ಭಯದಿಂದ ಜನರು ತಮ್ಮ ಮನೆಯಿಂದ ಹೊರಗೆ ಓಡಿಬಂದಿರುವುದು ಸಹ ವರದಿಯಾಗಿದೆ. ಕೇವಲ ನಗರ ಮಾತ್ರವಲ್ಲದೆ ಶಿವಮೊಗ್ಗ ಜಿಲ್ಲೆಯ ಸಾಗರ, ಭದ್ರಾವತಿ, ತೀರ್ಥಹಳ್ಳಿ, ರಿಪ್ಪನಪೇಟೆ ಸೇರಿ ಹಲವೆಡೆ ಭೂಮಿ ಕಂಪಿಸಿರುವ ಅನುಭವ ಉಂಟಾಗಿದೆ.
ಇತ್ತ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಜಿಲ್ಲೆಯ ಕೊಪ್ಪ, N.R.ಪುರ ತಾಲೂಕಿನಲ್ಲಿ ಸ್ಥಳೀಯರಿಗೆ ಭೂಮಿ ಕಂಪಿಸಿದ ಅನುಭವ ಎದುರಾಗಿದೆ. ಹಾಗಾಗಿ, ಭಾರಿ ಶಬ್ದಕ್ಕೆ ಹೆದರಿ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಾತ್ರಿ 10.20-10.25ರ ನಡುವೆ ಭೂಮಿ 2 ಬಾರಿ ಕಂಪಿಸಿದ ಅನುಭವ ಉಂಟಾಗದೆ.
ಇದರ ಜೊತೆ, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭೂಕಂಪನದ ಅನುಭವ ಸಹ ಆಗಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೆಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇತರೆ ಜಿಲ್ಲೆಗಳಂತೆ ರಾತ್ರಿ 10.30ರ ಸುಮಾರಿಗೆ ಭೂಮಿ 2 ಬಾರಿ ಕಂಪಿಸಿದ ಅನುಭವವಾಗಿದೆ.
ಇದಲ್ಲದೆ, ದಾವಣಗೆರೆ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಜಿಲ್ಲೆಯ ಚೀಲೂರು, ಜೋಳದಾಳು ಗ್ರಾಮದಲ್ಲಿ ಸ್ಥಳೀಯರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲೂರು, ಚನ್ನಗಿರಿ ತಾಲೂಕಿನ ಜೋಳದಾಳದಲ್ಲಿ ಭಾರಿ ಶಬ್ದಕ್ಕೆ ಹೆದರಿ ಜನರು ಮನೆಯಿಂದ ಹೊರಗೆ ಓಡಿಬಂದಿರುವುದು ವರದಿಯಾಗಿದೆ.
ಇತ್ತ, ಗಾಳಿಯಲ್ಲಿ ಸ್ಫೋಟದಿಂದ ಶಬ್ದ ಕೇಳಿಬರುವ ಸಾಧ್ಯತೆ ಇದೆ ಎಂದು ಟಿವಿ9ಗೆ ಭೂಗರ್ಭ ಶಾಸ್ತ್ರಜ್ಞ H.S.M.ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ, ಅಧ್ಯಯನ ಮಾಡಲು ಸಮಯಾವಕಾಶ ಬೇಕಾಗುತ್ತೆ. 2 ದಿನಗಳಿಂದ ಬಿಸಿಲು ಹೆಚ್ಚಾಗಿದ್ದರಿಂದ ಹೀಗಾಗಿರಬಹುದು ಎಂದು ಟಿವಿ9ಗೆ ಭೂಗರ್ಭ ಶಾಸ್ತ್ರಜ್ಞ H.S.M.ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.
ಇದು ವಾತಾವರಣದಲ್ಲಿನ ಬದಲಾವಣೆಯಿಂದ ಆಗಿರಬಹುದು. ಈ ಹಿಂದೆ ಬೆಂಗಳೂರಿನಲ್ಲೂ ಇದೇ ರೀತಿ ಆಗಿತ್ತು. ಇದು ನೂರಕ್ಕೆ ನೂರರಷ್ಟು ಗಾಳಿಯಲ್ಲಿನ ಸ್ಫೋಟದ ಶಬ್ದ ಎಂದು ಪ್ರಕಾಶ್ ಹೇಳಿದ್ದಾರೆ.
ಶಿವಮೊಗ್ಗ: ಕಲ್ಲು ಗಣಿಗಾರಿಕೆಗೆಂದು.. ಕಾರಿನಲ್ಲಿ ಸಾಗಿಸುತ್ತಿದ್ದ ಡೈನಮೈಟ್ ಸ್ಫೋಟ
Published On - 11:31 pm, Thu, 21 January 21