Shivamogga Blast ಕಲ್ಲು ಗಣಿಗಾರಿಕೆಗೆಂದು.. ಲಾರಿಯಲ್ಲಿ ಸಾಗಿಸುತ್ತಿದ್ದ ಡೈನಮೈಟ್ ಸ್ಫೋಟ
ಕಲ್ಲು ಗಣಿಗಾರಿಕೆಗೆಂದು ಲಾರಿಯಲ್ಲಿ ಸಾಗಿಸುತ್ತಿದ್ದ ಡೈನಮೈಟ್ ಸ್ಫೋಟಗೊಂಡಿರುವ ಘಟನೆ ಜಿಲ್ಲೆಯ ಅಬ್ಬಲಗೇರಿ ಬಳಿ ನಡೆದಿದೆ.
ಶಿವಮೊಗ್ಗ: ಕಲ್ಲು ಗಣಿಗಾರಿಕೆಗೆಂದು ಲಾರಿಯಲ್ಲಿ ಸಾಗಿಸುತ್ತಿದ್ದ ಡೈನಮೈಟ್ ಸ್ಫೋಟಗೊಂಡಿರುವ ಘಟನೆ ಜಿಲ್ಲೆಯ ಅಬ್ಬಲಗೇರಿ ಬಳಿ ನಡೆದಿದೆ.
ಸ್ಫೋಟದಿಂದ ಲಾರಿಯಲ್ಲಿದ್ದವರು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ವಾಹನದಲ್ಲಿ ಡೈನಮೈಟ್ ಸಾಗಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಇನ್ನು, ಈ ಕುರಿತು, ಶಿವಮೊಗ್ಗದ ರೈಲ್ವೆ ಕ್ರಷರ್ನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ರೈಲ್ವೆ ಕ್ರಷರ್ನಲ್ಲಿ ಸ್ಫೋಟದಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಟಿವಿ9ಗೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯಕ್ ಪ್ರತಿಕ್ರಿಯಿಸಿದ್ದಾರೆ.
ಶಬ್ದ ನಮ್ಮ ಮನೆಯಲ್ಲೇ ಬಿದ್ದಂಗೆ ಆಯ್ತು. ನಮ್ಮ ಕಾರ್ಯಕರ್ತರು ಕೂಡಲೇ ನಮಗೆ ತಿಳಿಸಿದರು. ಕಲ್ಲು ಗಣಿಗಾರಿಕೆಗೆ ಬಳಸುವ ವಸ್ತುಗಳು ಸ್ಫೋಟಗೊಂಡಿದೆ. ಘಟನಾ ಸ್ಥಳಕ್ಕೆ ತೆರಳುವುದಕ್ಕೂ ಆಗುತ್ತಿಲ್ಲ. ಬಹಳ ದೊಡ್ಡ ಮಟ್ಟದ ದುರಂತ ನಡೆದಿರುವುದು ಗೊತ್ತಾಗಿದೆ. ಹುಣಸೂರು ಬಳಿ ಘಟನೆ ನಡೆದಿದೆ ಎಂದು ಶಾಸಕ ಅಶೋಕ್ ಹೇಳಿದರು. ಜೊತೆಗೆ, ಘಟನೆಯಲ್ಲಿ ಆರು ಜನರು ಮೃತಪಟ್ಟಿದ್ದಾರೆ ಎಂದು ಸಹ ಹೇಳಿದರು.
ಸ್ಫೋಟದ ತೀವ್ರತೆಗೆ ವಾಹನ ಸಂಪೂರ್ಣವಾಗಿ ಛಿದ್ರಛಿದ್ರವಾಗಿದೆ. ಸುಮಾರು 6 ಜನರು ಮೃತಪಟ್ಟಿರುವ ಸಾಧ್ಯತೆ ಇದೆ. ಅಲ್ಲಿ ಬಹಳಷ್ಟು ಅನಾಹುತ ಸಂಭವಿಸಿದೆ. ಘಟನಾ ಸ್ಥಳಕ್ಕೆ ತೆರಳುವುದಕ್ಕೂ ಆಗುತ್ತಿಲ್ಲ. ದಟ್ಟ ಹೊಗೆ ಆವರಿಸಿ ಅಲ್ಲಿಗೆ ತೆರಳುವುದಕ್ಕೂ ಆಗುತ್ತಿಲ್ಲ. ಅಧಿಕಾರಿಗಳು ಅಲ್ಲಿಗೆ ತೆರಳಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ಬಹಳ ದೊಡ್ಡ ಮಟ್ಟದ ದುರಂತ ನಡೆದಿರುವುದು ಗೊತ್ತಾಗಿದೆ ಎಂದು ಶಾಸಕ ಅಶೋಕ್ ಹೇಳಿದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ ಅನುಭವ: ಜನರಲ್ಲಿ ಮೂಡಿದ ಆತಂಕ
Published On - 11:55 pm, Thu, 21 January 21