AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಅದ್ಧೂರಿಯಾಗಿ ಆರತಕ್ಷತೆ ಮುಗೀತು, ಇನ್ನೇನು ತಾಳಿ ಕಟ್ಟುವ ವೇಳೆ ಈ ಮದ್ವೆ ಬೇಡ ಎಂದು ಹಸೆಮಣೆಯಿಂದ ಮೇಲೆದ್ದ ವಧು

ಅದ್ಧೂರಿಯಾಗಿ ಆರತಕ್ಷತೆ ಮುಗೀತು. ಕುಟುಂಬಸ್ಥರು, ನೆಂಟರು ನವ ಜೋಡಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಶುಭ ಹಾರೈಸಿದ್ದರು. ಇನ್ನೇನು ಮುಹೂರ್ತದಲ್ಲಿ ತಾಳಿ ಕಟ್ಟುವುದೊಂದೇ ಬಾಕಿ ಇತ್ತು. ಆದ್ರೆ, ವಧು ಈ ಮದುವೆ ಬೇಡ ಎಂದು ಏಕಾಏಕಿ ಹಸೆಮಣೆಯಿಂದ ಮೇಲೆದ್ದಿದ್ದಾಳೆ. ಇದರಿಂದ ಕಲ್ಯಾಣ ಮಂಟಪದಲ್ಲಿ ನೆರೆದಿದ್ದವರು ಹೌಹಾರಿದ್ದಾರೆ. ಯುವತಿ ದಿಢೀರ್ ಮದ್ವೆ ಬೇಡವೆಂದು ಮೇಲೆದ್ದಿದ್ದೇಕೆ ಎನ್ನುವ ವಿವರ ಇಲ್ಲಿದೆ ನೋಡಿ.​

ತುಮಕೂರು: ಅದ್ಧೂರಿಯಾಗಿ ಆರತಕ್ಷತೆ ಮುಗೀತು, ಇನ್ನೇನು ತಾಳಿ ಕಟ್ಟುವ ವೇಳೆ ಈ ಮದ್ವೆ ಬೇಡ ಎಂದು ಹಸೆಮಣೆಯಿಂದ ಮೇಲೆದ್ದ ವಧು
ಮದ್ವೆ ಮಂಟಪದಲ್ಲಿ ಗಲಾಟೆ
ಮಹೇಶ್ ಇ, ಭೂಮನಹಳ್ಳಿ
| Edited By: |

Updated on: Aug 27, 2023 | 2:01 PM

Share

ತುಮಕೂರು, (ಆಗಸ್ಟ್ 27): ಅದ್ಧೂರಿಯಾಗಿ ಆರತಕ್ಷತೆ ಮುಗೀತು. ಇನ್ನೇನು ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಹಸೆಮಣೆಯಿಂದ ಎದ್ದುಹೋದ ಅಪರೂಪ ಪ್ರಕಣ ತುಮಕೂರು ಜಿಲ್ಲೆ‌ ಕೊರಟಗೆರೆ ತಾಲೂಕಿನ ಕೊಳಾಲದಲ್ಲಿ ಬೆಳಕಿಗೆ ಬಂದಿದೆ. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಈ ಮದುವೆ ಬೇಡ ಎಂದ ವಧು ಹಸೆಮಣೆಯಿಂದ ಮೇಲೆದ್ದಿದ್ದಾಳೆ. ರಿಸೆಪ್ಷನ್​ನಲ್ಲಿ ನಗುನಗುತ್ತಲೇ ಫೋಟೋಗೆ ಫೋಸ್ ಕೊಟ್ಟಿದ್ದ ಇದೀಗ ತಾಳಿ ಕಟ್ಟುವ ಮುಹೂರ್ತ ಸಮೀಪಿಸುತ್ತಿದ್ದಂತೆಯೇ ಯುವತಿ ಈ ಮದ್ವೆಯೇ ಬೇಡ ಎಂದು ಹಸೆಮಣೆಯಿಂದ ಮೇಲೆದ್ದಾಳೆ. ವಧು ಹೀಗೆ ಹೇಳುತ್ತಿದ್ದಂತೆಯೇ ಕೊಳಾಲದ ಕೆಸಿಎನ್​ ಕನ್ವೆನ್ಷನ್ ಹಾಲ್​ನಲ್ಲಿ ಮದುವೆ ಸಂಭ್ರಮದಲ್ಲಿ ನೆಂಟರು ಕ್ಷಣ ಹೌಹಾರಿದ್ದಾರೆ. ಅಲ್ಲೇ ಮದುವೆ ಮಂಟಪದಲ್ಲಿ ವಧು ಹಾಗೂ ವರನ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಯುವತಿ ನವ್ಯಾಳ (ಹೆಸರು ಬದಲಾಯಿಸಲಾಗಿದೆ) ಮದುವೆ ದೊಡ್ಡಬಳ್ಳಾಪುರ ತಾಲೂಕಿನ ಮೂಡ್ಲಕಾಳೇನಹಳ್ಳಿಯ ವೆಂಕಟೇಶ್ ಜೊತೆ ನಿಶ್ಚಯವಾಗಿತ್ತು. ಅದರಂತೆ ಅದರಂತೆ ಎರಡೂ ಕುಟುಂಬಸ್ಥರು ಮದ್ವೆಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದರು. ಅಲ್ಲದೇ ನಿನ್ನೆ (ಆಗಸ್ಟ್ 27) ರಾತ್ರಿ ಕೆಸಿಎನ್​ ಕನ್ವೆನ್ಷನ್ ಹಾಲ್​ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವೂ ಮುಗಿದಿತ್ತು. ನವ್ಯಾ ಹಾಗೂ ವೆಂಕಟೇಶ್ ಸ್ಟೇಜ್​ ಮೇಲೆ ಒಬ್ಬರಿಗೊಬ್ಬರು ನಗುನಗುತ್ತಲೇ ಫೋಟೋಗೆ ಫೋಸ್ ನೀಡಿದ್ದರು. ಇನ್ನು ಎರಡೂ ಕುಟುಂಬಸ್ಥರು ಹಾಗೂ ಸಂಬಂಧಿಕರು ಸಹ ನವ ಜೋಡಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಶುಭ ಹಾರೈಸಿ ಹೋಗಿದ್ದರು. ಆದ್ರೆ, ಇನ್ನೇನು ಬೆಳಗ್ಗೆ ಮುಹೂರ್ತದಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ನವ್ಯಾ ಈ ವರಸೆ ತೆಗೆದಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ಸರ್ಕಾಸ್

ವಧು ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಉಂಟಾಗಿದ್ದು, 2 ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೀಗ ಅಂತಿಮವಾಗಿ ಈ ಮದ್ವೆ ಗಲಾಟೆ ಕೊಳಾಲ‌ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಎರಡೂ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ. ಮೂರು ತಿಂಗಳು ಮೊದಲೇ ಇಬ್ಬರಿಗೂ ಎಂಗಜ್ಮೆಂಟ್ ಆಗಿತ್ತು. ಒಂದು ಲಕ್ಷ ರೂ. ಖರ್ಚು ಮಾಡಿ ಎಂಗಜ್ಮೆಂಟ್ ಮಾಡಲಾಗಿತ್ತು. ಇದೀಗ ಏಕಾಏಕಿ ವಧು ಮದುವೆಯೇ ಬೇಡ ಎಂದಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ವಧು -ವರನ ಕುಟುಂಬಸ್ಥರ ನಡುವೆ ಸಂಧಾನ ಸರ್ಕಸ್ ನಡೆಯುತ್ತಿದೆ. ಈ ಸಂಧಾನ ಸಭೆಯಲ್ಲಿ ವಧು ಪ್ರಿಯಕರ ಸಹ ಹಾಜರಾಗಿದ್ದಾನೆ.

ಯಾವುದೇ ಕಾರಣಕ್ಕೂ ನಾನು ಮದುವೆಯಾಗುವುದಿಲ್ಲವೆಂದು ವಧು ಬಿಗಿಪಟ್ಟು ಹಿಡಿದಿದ್ದಾಳೆ. ಮತ್ತೊಂದೆಡೆ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚುಮಾಡಿದ್ದೇವೆ. ಈಗ ಮದುವೆ ಬೇಡ ಅಂದ್ರೆ ಹೇಗೆ ಎಂದು ವರನ ಕಡೆಯವರು ಆಕ್ರೋಶಗೊಂಡಿದ್ದಾರೆ. ಸದ್ಯ ರಾಜಿ ಪಂಚಾಯಿತಿ ಮುಂದುವರೆದಿದ್ದು, ಅಂತಿಮವಾಗಿ ಪೊಲೀಸರು ಇದನ್ನ ಹೇಗೆ ಬಗೆಹರಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.