ಛೋಟಾಸಾಬರ ಪಾಳ್ಯ ಅತ್ಯಾಚಾರ ಕೊಲೆ ಕೇಸ್; 7 ದಿನವಾದ್ರೂ ಆರೋಪಿಗಳ ಬಂಧನವಾಗಿಲ್ಲ, ಅಗ್ನಿವಂಶ ಕ್ಷತ್ರಿಯ ಸಮಾಜ ಪ್ರತಿಭಟನೆ
ಆಗಸ್ಟ್ 24.. ತುಮಕೂರು ತಾಲೂಕಿನ ಹೀರೇಹಳ್ಳಿಯ ಛೋಟಾಸಾಬರ ಪಾಳ್ಯದ ಗುಡ್ಡದ ಮೇಲೆ 30 ವರ್ಷದ ವಿವಾಹಿತ ಮಹಿಳೆಯೊಬ್ಬರು ಶವವಾಗಿ ಸಿಕ್ಕಿದ್ರು. ಅದು ಕೂಡ ಗುಡ್ಡದ ಮೇಲೆ ದನ ಮೇಯಿಸಲು ಹೋಗಿದ್ದ ಮಹಿಳೆಯನ್ನ ವಿವಸ್ತ್ರಗೊಳಿಸಿ, ಮೈಮೇಲಿದ್ದ ಚಿನ್ನಾಭರಣ ದೋಚಿ ಕೊಲೆ ಮಾಡಲಾಗಿತ್ತು.
ತುಮಕೂರು: ಛೋಟಾಸಾಬರ ಪಾಳ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆಗೈದವರ ಬಂಧನಕ್ಕೆ ಆಗ್ರಹಿಸಿ ತುಮಕೂರಿನ ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಬೃಹತ್ ಮೆರವಣಿಗೆ ಮಾಡಲಾಗುತ್ತಿದೆ. ಘಟನೆ ನಡೆದು 7 ದಿನವಾದ್ರೂ ಆರೋಪಿಗಳ ಬಂಧನವಾಗಿಲ್ಲ. ಪೊಲೀಸರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿ ಅಗ್ನಿವಂಶ ಕ್ಷತ್ರಿಯ ಸಮಾಜದಿಂದ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ.
ಘಟನೆ ವಿವರ ಮೈಸೂರಿನಲ್ಲಿ ವಿದ್ಯಾರ್ಥಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ದಿನವೇ ತುಮಕೂರಿನಲ್ಲೂ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ರು. ಬೆಟ್ಟದ ಮೇಲೆ ಬೆತ್ತಲೆ ಶವವಾಗಿ ಬಿದ್ದಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಗಿದೆ ಅಂತಾ ಹೇಳಲಾಗಿತ್ತು. ಕೇವಲ 4 ದಿನದಲ್ಲಿ ಮೈಸೂರಿನ ಅತ್ಯಾಚಾರ ಕೇಸ್ ಆರೋಪಿಗಳು ಸಿಕ್ಕಿದ್ರೆ, ತುಮಕೂರಿನ ಕ್ಯಾತಸಂದ್ರ ಪೊಲೀಸರಿಗೆ ಮಾತ್ರ ಮಹಿಳೆ ಸಾವು ಪ್ರಕರಣ ಸವಾಲ್ ಆಗಿದೆ.
ಸಿಗದ ಸುಳಿವು.. ಜನರಿಗೆ ದೂರವಾಗದ ಭಯ ಆಗಸ್ಟ್ 24.. ತುಮಕೂರು ತಾಲೂಕಿನ ಹೀರೇಹಳ್ಳಿಯ ಛೋಟಾಸಾಬರ ಪಾಳ್ಯದ ಗುಡ್ಡದ ಮೇಲೆ 30 ವರ್ಷದ ವಿವಾಹಿತ ಮಹಿಳೆಯೊಬ್ಬರು ಶವವಾಗಿ ಸಿಕ್ಕಿದ್ರು. ಅದು ಕೂಡ ಗುಡ್ಡದ ಮೇಲೆ ದನ ಮೇಯಿಸಲು ಹೋಗಿದ್ದ ಮಹಿಳೆಯನ್ನ ವಿವಸ್ತ್ರಗೊಳಿಸಿ, ಮೈಮೇಲಿದ್ದ ಚಿನ್ನಾಭರಣ ದೋಚಿ ಕೊಲೆ ಮಾಡಲಾಗಿತ್ತು. ಮೈಮೇಲೆ ಕಚ್ಚಿದ ಮತ್ತು ಪರಚಿದ ಕಲೆಗಳು ಇತ್ತು. ಹೀಗಾಗಿ ಇದು ಮೇಲ್ನೋಟಕ್ಕೆ ರೇಪ್ ಌಂಡ್ ಮರ್ಡರ್ ಅಂತಾ ಹೇಳಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರೋ ಕ್ಯಾತಸಂದ್ರ ಪೊಲೀಸರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಕೇವಲ ಮೃತಳ ಸಂಬಂಧಿಕರ ವಿಚಾರಣೆ ಮಾಡಿರುವುದನ್ನು ಬಿಟ್ಟರೆ, ಯಾವ ಸಾಕ್ಷ್ಯವನ್ನೂ ಪೊಲೀಸರು ಸಂಗ್ರಹಿಸಿಲ್ಲ. ಹೀಗಾಗಿ ಪೊಲೀಸರ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗ್ತಿದೆ.
ಘಟನೆ ಸಂಭವಿಸಿ ಬರೋಬ್ಬರಿ 7 ದಿನವಾಗಿದೆ. ಆದರೂ ಪೊಲೀಸರಿಗೆ ಒಂದು ಸಣ್ಣ ಸುಳಿವೂ ಸಿಕ್ಕಿಲ್ಲ. ಟವರ್ ಲೊಕೇಶನ್ನಲ್ಲೂ ಪೊಲೀಸರಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಮೈಸೂರಿನಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಅಲ್ಲಿನ ಪೊಲೀಸರು ತೋರಿಸಿದ ಕಾಳಜಿ, ಇಲ್ಲಿನ ಪೊಲೀಸರು ತೋರುತ್ತಿಲ್ಲ ಅಂತಾ ಜನ ಆಕ್ರೋಶ ಹೊರ ಹಾಕ್ತಿದ್ದಾರೆ. ಈ ನಡುವೆ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ಮಾಡಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇಷ್ಟಾದರೂ ಗ್ರಾಮದಲ್ಲಿ ಇನ್ನೂ ಭಯದ ವಾತಾವರಣ ಇದೆ. ಮಹಿಳೆಯರು, ವಿದ್ಯಾರ್ಥಿನಿಯರು ಹೊರ ಬರೋದಕ್ಕೆ ಹೆದರುತ್ತಿದ್ದಾರೆ. ದನ ಮೇಯಿಸುವವರಂತೂ ಬೆದರಿ ಗೂಡು ಸೇರಿದ್ದಾರೆ.
ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣ ಭೇದಿಸೋಕೆ ಕ್ಯಾತಸಂದ್ರ ಪೊಲೀಸರು ಪರದಾಡ್ತಿದ್ದಾರೆ. ಆರೋಪಿಗಳ ಹೆಜ್ಜೆ ಗುರುತು ಪತ್ತೆ ಹಚ್ಚುವಲ್ಲಿ ಫೇಲ್ ಆಗ್ತಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಂತೆ, ತುಮಕೂರಿನ ಈ ಕೇಸ್ನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸರ್ಕಾರ ಅಧಿಕಾರಿಗಳಿಗೆ ಬಿಸಿ ಮುಟ್ಟಿಸ್ಬೇಕು ಅಂತಾ ಜನ ಆಗ್ರಹಿಸ್ತಿದ್ದಾರೆ. ಇದರ ಜೊತೆಗೆ ಇಂದು ಅಗ್ನಿವಂಶ ಕ್ಷತ್ರಿಯ ಸಮಾಜ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ.
ಇದನ್ನೂ ಓದಿ: ಛೋಟಾಸಾಬರಪಾಳ್ಯ ಅತ್ಯಾಚಾರ ಕೇಸ್ ಆರೋಪಿಗಳನ್ನು ಬಂಧಿಸಿ; ಗ್ರಾಮೀಣ ಭಾಗಕ್ಕೂ ಗಮನ ಕೊಡಿ: ಜೆಡಿಎಸ್ ಶಾಸಕ ಆಗ್ರಹ
Published On - 12:01 pm, Mon, 30 August 21