ಸರ್ಕಾರದ ಹಲವು ಯೋಜನೆಗಳ ಹಣಕ್ಕೆ ಕನ್ನ; ಪೋಸ್ಟ್‌ಮ್ಯಾನ್ ವಿರುದ್ಧ ಜನರ ಆಕ್ರೋಶ

ಜಂಗಮರಹಳ್ಳಿ, ಹೊಸಹಳ್ಳಿ, ಬುಡಸನಹಳ್ಳಿ ಸೇರಿದಂತೆ 5 ಗ್ರಾಮಗಳ ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. 9 ತಿಂಗಳಿಂದ ವೃದ್ಧರು, ವಿಕಲಚೇತನರು, ವಿಧವೆಯರ ಮಾಸಾಶನ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸರ್ಕಾರದ ಹಲವು ಯೋಜನೆಗಳ ಹಣಕ್ಕೆ ಕನ್ನ; ಪೋಸ್ಟ್‌ಮ್ಯಾನ್ ವಿರುದ್ಧ ಜನರ ಆಕ್ರೋಶ
ಪೋಸ್ಟ್‌ಮ್ಯಾನ್ ವಿರುದ್ದ ಜನರ ಆಕ್ರೋಶ

ತುಮಕೂರು: ಸರ್ಕಾರದ ಹಲವು ಯೋಜನೆಗಳ ಹಣವನ್ನು ಸಾರ್ವಜನಿಕರಿಗೆ ತಲುಪಿಸದೆ ಪೋಸ್ಟ್‌ಮ್ಯಾನ್ ವಂಚನೆ ಮಾಡಿದ್ದಾರೆ ಎಂಬ ಆರೋಪ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಜಂಗಮರಹಳ್ಳಿಯಲ್ಲಿ ಕೇಳಿಬಂದಿದೆ. ಪೋಸ್ಟ್‌ಮ್ಯಾನ್ ಈಶ್ವರ ಬಾಬು ವಿರುದ್ಧ ಜಂಗಮರಹಳ್ಳಿ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಂಗಮರಹಳ್ಳಿ, ಹೊಸಹಳ್ಳಿ, ಬುಡಸನಹಳ್ಳಿ ಸೇರಿದಂತೆ 5 ಗ್ರಾಮಗಳ ಜನರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. 9 ತಿಂಗಳಿಂದ ವೃದ್ಧರು, ವಿಕಲಚೇತನರು, ವಿಧವೆಯರ ಮಾಸಾಶನ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆ 4 ಬಾರಿ ಅಮಾನತಾಗಿದ್ದರೂ ಈ ಪೋಸ್ಟ್‌ಮ್ಯಾನ್ ಈಶ್ವರ ಬಾಬು ಬುದ್ಧಿ ಕಲಿತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಡ್ರಾಪ್ ಕೇಳುವ ನೆಪದಲ್ಲಿ ಮೊಬೈಲ್, ಹಣ ದರೋಡೆ
ಡ್ರಾಪ್​ ಕೇಳುವ ನೆಪದಲ್ಲಿ ವ್ಯಕ್ತಿಗೆ ಚಾಕು ಇರಿದು ದರೋಡೆ ನಡೆಸಿರುವ ಪ್ರಕರಣ ನಡೆದಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಬಳಿ ಘಟನೆ ನಡೆದಿದ್ದು, ಶಿವಕುಮಾರ್ ಎಂಬುವವರಿಂದ​ ಮೊಬೈಲ್​, ಹಣವನ್ನು ಕಿತ್ತುಕೊಳ್ಳಲಾಗಿದೆ. ಈ ವೇಳೆ ಮೊಬೈಲ್​ನಲ್ಲಿರುವ ಸಿಮ್ ವಾಪಸ್ ಕೊಡಿ ಎಂದು ಕೇಳಿದ್ದಕ್ಕೆ ಗ್ಯಾಂಗ್ ಹಲ್ಲೆ ನಡೆಸಿದೆ.

ಗ್ಯಾಂಗ್​ನಲ್ಲಿ ಮೂವರಿದ್ದರು ಎನ್ನಲಾಗಿದ್ದು, ಶಿವಕುಮಾರ್ ಅವರು ಸಿಮ್ ಕೇಳಿದಾಗ ಹಲ್ಲೆ ನಡೆಸಿದ್ದಾರೆ. ಗಾಯಾಳುವನ್ನು ಟೋಲ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿವಕುಮಾರ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನೈಸ್ ರೋಡ್​ನಲ್ಲಿ ಪದೇ ಪದೇ ನಡೆಯುತ್ತಿದೆ ದರೋಡೆ ಪ್ರಕರಣ
ನಗರದ ನೈಸ್ ರಸ್ತೆಗಳಲ್ಲಿ ಪದೇ ಪದೇ ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ವಾಹನಗಳನ್ನು ಅಡ್ಡಗಟ್ಟಿ ದರೋಡೆ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪ್ರಸ್ತುತ ಶಿವಕುಮಾರ್ ಮೇಲಿನ ಹಲ್ಲೆ ಹಾಗೂ ದರೋಡೆ ಪ್ರಕರಣದಲ್ಲೂ, ಮೊಬೈಲ್ ಹಾಗೂ ಹಣ ತೆಗೆದುಕೊಂಡ ಗ್ಯಾಂಗ್, ಸಿಮ್ ವಾಪಸ್ ಕೊಡಿ ಎಂದು ಕೇಳಿದಾಗ ಹಲ್ಲೆ ನಡೆಸಿದೆ. ಪ್ರಸ್ತುತ ಆಸ್ಪತ್ರೆಗೆ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ. ಶಿವಕುಮಾರ್ ಕುಟುಂಬಸ್ಥರೂ ಆಸ್ಪತ್ರೆಗೆ ಆಗಮಿಸಿದ್ದಾರೆ.

ಇದನ್ನೂ ಓದಿ:
Bengaluru: ಪಿಎಸ್​ಐ ಕೆಲಸ ಕೊಡಿಸುವುದಾಗಿ ನಂಬಿಸಿ 18 ಲಕ್ಷ ರೂಪಾಯಿ ವಂಚನೆ

ಧಾರವಾಡ: ವಿಭಿನ್ನ ಬಗೆಯಲ್ಲಿ ವಿಮಾ ಹಣ ಲೂಟಿ: ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದ ಘಟನೆ

Read Full Article

Click on your DTH Provider to Add TV9 Kannada