ಅಮಿತ್ ಶಾ ತುಮಕೂರಿಗೆ ಭೇಟಿ ಹಿನ್ನೆಲೆ, ಮತ್ತೆ ಮುನ್ನೆಲೆಗೆ ಬಂದ ಡಾ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರ

ಏಪ್ರಿಲ್ 1 ರಂದು ಅಮಿತ್ ಶಾ ತುಮಕೂರಿಗೆ ಬರ್ತಿದ್ದಾರೆ. ಶ್ರೀಗಳ ಗದ್ದುಗೆ ದರ್ಶನ ಪಡೆದು‌ ಬಳಿಕ‌ ಸಾರ್ವಜನಿಕ ಸಭೆಯಲ್ಲಿ‌ ಭಾಗಿಯಾಗ್ತಾರೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡೋ ವಿಚಾರವನ್ನು ಗೃಹ ಸಚಿವರು ಬಂದಾಗ ಅವರೊಟ್ಟಿಗೆ ಮಾತನಾಡ್ತೇನೆ. ಅವರೇನು ತೀರ್ಮಾನ ತೆಗೆದುಕೊಳ್ತಾರೋ ನೋಡೋಣ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಅಮಿತ್ ಶಾ ತುಮಕೂರಿಗೆ ಭೇಟಿ ಹಿನ್ನೆಲೆ, ಮತ್ತೆ ಮುನ್ನೆಲೆಗೆ ಬಂದ ಡಾ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರ
ಶಿವಕುಮಾರ ಶ್ರೀಗಳು
Follow us
| Updated By: ಆಯೇಷಾ ಬಾನು

Updated on:Mar 28, 2022 | 3:32 PM

ತುಮಕೂರು: ತ್ರಿವಿಧ ದಾಸೋಹದ ಮೂಲಕ ನಾಡಿನ ಜನರ ಮನಸ್ಸಲ್ಲಿ ಉಳಿದ ನಡೆದಾಡುವ ದೇವರು, ತುಮಕೂರಿನ ಸಿದ್ದಗಂಗಾ ಮಠದ(Siddaganga Math) ಶತಾಯುಷಿ ಡಾ. ಶಿವಕುಮಾರ ಶ್ರೀಗಳಿಗೆ(Dr Shivakumara Swamiji) ಭಾರತ ರತ್ನ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು. ಸದ್ಯ ಗೃಹ ಸಚಿವ ಅಮಿತ್ ಶಾ(Amit Shah) ತುಮಕೂರಿಗೆ ಬರುತ್ತಾರೆಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಮತ್ತೆ ಈ ಚರ್ಚೆ ಮುನ್ನೆಲೆಗೆ ಬಂದಿದೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ(BS Yediyurappa) ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.

ಏಪ್ರಿಲ್ 1 ರಂದು ಅಮಿತ್ ಶಾ ತುಮಕೂರಿಗೆ ಬರ್ತಿದ್ದಾರೆ. ಶ್ರೀಗಳ ಗದ್ದುಗೆ ದರ್ಶನ ಪಡೆದು‌ ಬಳಿಕ‌ ಸಾರ್ವಜನಿಕ ಸಭೆಯಲ್ಲಿ‌ ಭಾಗಿಯಾಗ್ತಾರೆ. ಎರಡ್ಮೂರು ಲಕ್ಷ ಜನರು ಸೇರೋ ಅಪೇಕ್ಷೆ ಇದೆ. ಅದಕ್ಕೆ ಪೂರ್ವ ಸಿದ್ದತೆ ನಡೆಯುತ್ತಿದೆ. ದೊಡ್ಡ ಪ್ರಮಾಣದಲ್ಲಿ ಜನ ಸೇರಿಸೋ ಪ್ರಯತ್ನವನ್ನ ನಮ್ಮೆಲ್ಲಾ ಶಾಸಕರು, ಸಚಿವರು ಮಾಡ್ತಿದ್ದಾರೆ. ಗೃಹ ಸಚಿವರಾಗಿ ಬಂದು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡೋದು ಬಹಳ ಪ್ರಮುಖ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡೋ ವಿಚಾರವನ್ನು ಗೃಹ ಸಚಿವರು ಬಂದಾಗ ಅವರೊಟ್ಟಿಗೆ ಮಾತನಾಡ್ತೇನೆ. ಅವರೇನು ತೀರ್ಮಾನ ತೆಗೆದುಕೊಳ್ತಾರೋ ನೋಡೋಣ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಏಪ್ರಿಲ್ 1ರಂದು ತುಮಕೂರಿಗೆ ಅಮಿತ್ ಶಾ ಭೇಟಿ ಏಪ್ರಿಲ್ 1ರಂದು ಡಾ.ಶಿವಕುಮಾರಶ್ರೀಗಳ ಜನ್ಮ ದಿನಾಚರಣೆ ಹಿನ್ನೆಲೆ ಉದ್ಘಾಟನೆಗೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಬರುತ್ತಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖೂಬಾ, ಸಚಿವರಾದ ವಿ.ಸೋಮಣ್ಣ, ಬಿ.ಸಿ.ನಾಗೇಶ್ ಆಗಮಿಸುತ್ತಿದ್ದಾರೆ. ಏ.1ರ ಸಂಜೆ ಹಂಸಲೇಖ, ವಿಜಯ ಪ್ರಕಾಶ್ರಿಂದ ಕಾರ್ಯಕ್ರಮ ನೆರವೇರಲಿದೆ. ಬಸವ ಭಾರತ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 100 ಜನ ಗಾಯಕರು, 150 ಜನ ಕಲಾವಿದರಿಂದ ಕಾರ್ಯಕ್ರಮದಲ್ಲಿ ಭಾಗಯಾಗಲಿದ್ದು ಪೂಜ್ಯರನ್ನು ಕುರಿತು ರಚನೆ ಮಾಡಿರುವ ಗೀತೆಗಳನ್ನು ಹಾಡುತ್ತಾರೆ ಎಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಇನ್ನು ಡಾ.ಶಿವಕುಮಾರಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಕೇಳಬಾರದು. ಅದಾಗಿಯೇ ಬಂದ್ರೆ ಅಮೃತಕ್ಕೆ ಸಮ ಕೇಳಿ ಪಡೆದ್ರೆ ವಿಷಕ್ಕೆ ಸಮಾನ ಎಂದು ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಡಾ.ಶಿವಕುಮಾರಶ್ರೀಗಳು ಭಾರತ ರತ್ನವನ್ನೂ ಮೀರಿರುವಂತವರು. ಭಾರತ ರತ್ನ ಪ್ರಶಸ್ತಿ ನಿರೀಕ್ಷೆ ಮಾಡಬಾರದು, ಮಾಡಿಯೂ ಇಲ್ಲ ಎಂದರು.

ಮಾರ್ಚ್ 31ರಂದು ತುಮಕೂರಿಗೆ ರಾಹುಲ್ ಗಾಂಧಿ ಆಗಮನ ಇನ್ನು ಮತ್ತೊಂದೆಡೆ ಮಾರ್ಚ್ 31ರಂದು ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಬಳಿಕ ರಸ್ತೆ ಮೂಲಕ ತುಮಕೂರಿಗೆ ತೆರಳುತ್ತಾರೆ. ತುಮಕೂರಿನ ಸಿದ್ದಗಂಗಾ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಏ.1ರ ಬದಲಾಗಿ ಮಾ.31 ರಂದೇ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಏ.1 ರಂದು ತುಮಕೂರಿಗೆ ಅಮಿತ್ ಶಾ ಆಗಮನ ಹಿನ್ನೆಲೆ ಹಿಂದಿನ ದಿನವೇ ಆಗಮಿಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಹೀಗಾಗಿ ಒಂದು ದಿನ ಮೊದಲೇ ತುಮಕೂರಿಗೆ ಭೇಟಿ ನೀಡಿ ಅದೇ ದಿನ ರಾಹುಲ್ ಗಾಂಧಿ ವಾಪಸ್ ಆಗಲಿದ್ದಾರೆ.

ಇದನ್ನೂ ಓದಿ: ತುಮಕೂರು: ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಸ್ಮರಣಾರ್ಥದ ದಾಸೋಹ ಕಾರ್ಯಕ್ರಮ ರದ್ದು

Siddaganga Mutt: ನಾಳೆ ಶಿವಕುಮಾರ ಸ್ವಾಮೀಜಿ 3ನೇ ವರ್ಷದ ಪುಣ್ಯಸ್ಮರಣೆ: ಸರಳ ಆಚರಣೆಗೆ ಸಿದ್ದಗಂಗೆ ಮಠ ನಿರ್ಧಾರ

Published On - 3:31 pm, Mon, 28 March 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ