BESCOM power cut: ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಮಾರ್ಚ್ 2 ರಂದು ಪವರ್ ಕಟ್
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಾರ್ಚ್ 2ರಂದು ಬೆಸ್ಕಾಂ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ನಿರ್ವಹಣೆ ಮತ್ತು ಕಾಮಗಾರಿ ಕಾರಣದಿಂದ ವಿದ್ಯುತ್ ಕಡಿತ ಘೋಷಿಸಿದೆ. ತುಮಕೂರು ಗ್ರಾಮೀಣ ಉಪವಿಭಾಗ-1ರಲ್ಲಿ ಲಿಂಕ್‌ಲೈನ್ ಕಾಮಗಾರಿಯಿಂದ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಪವರ್ ಕಟ್ ಇರುವ ಪ್ರದೇಶಗಳ ವಿವರ ಇಲ್ಲಿದೆ.

ಬೆಂಗಳೂರು, ಮಾರ್ಚ್ 1: ನಿರ್ವಹಣೆ ಮತ್ತು ಕಾಮಗಾರಿಯ ಪ್ರಯುಕ್ತ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಮಾರ್ಚ್ 2 ರಂದು ಭಾನುವಾರ ವಿದ್ಯುತ್ ಕಡಿತ ಇರಲಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಬೆಸ್ಕಾಂ ಮಾಹಿತಿ ಹಂಚಿಕೊಂಡಿದ್ದು, ಎಲ್ಲೆಲ್ಲಿ ಪವರ್ ಕಟ್ಟಿರಲಿದೆ ಎಂಬ ಮಾಹಿತಿ ನೀಡಿದೆ.
ತುಮಕೂರು ಗ್ರಾಮೀಣ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಲಿಂಕ್‌ಲೈನ್ ಕಾಮಗಾರಿ ಕೈಗೊಂಡಿದ್ದು, ಮಾರ್ಚ್ 2ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲಿ ಪವರ್ ಕಟ್?
ಬೆಳ್ಳಾವಿ, ಸುಗುಣ, ದೊಡ್ಡವೀರನಹಳ್ಳಿ, ಸಿಂಗೀಪುರ, ದೊಡ್ಡರಿ, ಕಾಗ್ಗೆರೆ, ಅಸಲಿಪುರ, ಮಷಣಾಪುರ, ಹರಿವಣಪುರ, ನಾಗಾರ್ಜುನಹಳ್ಳಿ, ಚನ್ನೇನಹಳ್ಳಿ, ಕರಲುಪಾಳ್ಯ, ಚಿಕ್ಕಬೆಳ್ಳಾವಿ, ಮಾವಿನಕುಂಟೆ, ತಿಮ್ಮಲಾಪುರ, ಬಾಣಾವರ, ಲಕ್ಕನಹಳ್ಳಿ, ಅಪ್ಪಿನಾಯಕನಹಳ್ಳಿ, ಬ್ಯಾಲ, ಟಿ.ಗೊಲ್ಲಹಳ್ಳಿ, ಬುಗುಡನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬೇಸಿಗೆಯಲ್ಲಿ ಬೆಂಗಳೂರಿಗೆ ಪವರ್ ಕಟ್ ಇಲ್ಲ: ಜಾರ್ಜ್ ಭರವಸೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್ ಬೇಡಿಕೆ ಸುಮಾರು 2000 ಮೆಗಾ ವಾಟ್‌ನಷ್ಟು ಹೆಚ್ಚಾಗಿದೆ. ಆದರೂ ಕೂಡ ಈ ವರ್ಷ ಬೇಸಗೆಯಲ್ಲಿ ರಾಜ್ಯದಲ್ಲಿ ಪವರ್ ಕಟ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಭರವಸೆ ನೀಡಿದ್ದಾರೆ. ಬೇಸಿಗೆಯಲ್ಲಿ ವಿದ್ಯುತ್ ಪೂರೈಸುವ ವಿಚಾರವಾಗಿ ಎಸ್ಕಾಂಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಈ ಭರವಸೆ ನೀಡಿದ್ದಾರೆ.
ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಸುವುದಕ್ಕೆ ಸಂಬಂಧಪಟ್ಟಂತೆಯೂ ಸಚಿವರು ಮಾಹಿತಿ ನೀಡಿದ್ದಾರೆ. ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ಮತ್ತು ಗೃಹಬಳಕೆಗೆ 24 ಗಂಟೆ ವಿದ್ಯುತ್ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸೂರ್ಯಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಬೆಸ್ಕಾಂ ಮನವಿ
ಸೂರ್ಯಘರ್ ಯೋಜನೆಯ ಮೂಲಕ ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಿ ಆಕರ್ಷಕ ಸಬ್ಸಿಡಿ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://t.co/iALIML395s ನೋಂದಾಯಿಸಿಕೊಳ್ಳಿ ಹಾಗೂ ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆಮಾಡಿ. #Bescom #SuryagharScheme… pic.twitter.com/X2behcc4Y5
— Namma BESCOM | ನಮ್ಮ ಬೆಸ್ಕಾಂ (@NammaBESCOM) March 1, 2025
ಸೂರ್ಯಘರ್ ಯೋಜನೆಯ ಮೂಲಕ ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಿ ಆಕರ್ಷಕ ಸಬ್ಸಿಡಿ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಸೂರ್ಯಘರ್ ಯೋಜನೆಗೆ ಈ ಲಿಂಕ್ ಮೂಲಕ https://pmsuryaghar.gov.in ನೋಂದಾಯಿಸಿಕೊಳ್ಳಿ ಹಾಗೂ ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಕ್ಕೆ ಕರೆಮಾಡಿ ಎಂದು ಗ್ರಾಹಕರಿಗೆ ಬೆಸ್ಕಾಂ ಮನವಿ ಮಾಡಿದೆ. ಜತೆಗೆ, ಎಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂಬ ಮಾಹಿತಿಯನ್ನೂ ನೀಡಿದೆ.