ಕೆಂಪಮ್ಮನ ದೇವರ ಜಾತ್ರಾ ಮಹೋತ್ಸವದಲ್ಲಿ ಹಲ್ಲೆ; ಕ್ಷುಲ್ಲಕ ಕಾರಣಕ್ಕೆ ಗ್ರಾಮಸ್ಥರ ನಡುವೆ ಮಾರಾಮಾರಿ

ಗ್ರಾಮದಲ್ಲಿ ತಡರಾತ್ರಿ ಮೆರವಣಿಗೆ ಇದ್ದು, ಈ ವೇಳೆ ಆನಂದ್ (32) ಮತ್ತು ಜ್ಯೋತಿ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ. ಗ್ರಾಮದ ಯತೀಶ್, ಶ್ರೀನಿವಾಸ, ಜಬೀವುಲ್ಲಾ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ.

  • TV9 Web Team
  • Publish Date - 9:39 am, Sat, 3 April 21

ಕ್ಷುಲ್ಲಕ ಕಾರಣಕ್ಕೆ ಗ್ರಾಮಸ್ಥರ ನಡುವೆ ಮಾರಾಮಾರಿ

ತುಮಕೂರು:ಜಾತ್ರಾ ಮಹೋತ್ಸವದಲ್ಲಿ ಕ್ಷುಲ್ಲಕ ಕಾರಣಕ್ಕೆ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಇಡಗೂರು ಗ್ರಾಮದಲ್ಲಿ ನಡೆದಿದೆ. ಇಡಗೂರು ಗ್ರಾಮದ ಕೆಂಪಮ್ಮನ ದೇವರ ಜಾತ್ರೆಯಲ್ಲಿ ದೇವರ ಮೆರವಣಿಗೆ ವಿಚಾರಕ್ಕೆ ಗಲಾಟೆ ನಡೆದಿದ್ದು, ವ್ಯಕ್ತಿ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

ಗ್ರಾಮದಲ್ಲಿ ತಡರಾತ್ರಿ ಮೆರವಣಿಗೆ ಇದ್ದು, ಈ ವೇಳೆ ಆನಂದ್ (32) ಮತ್ತು ಜ್ಯೋತಿ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ. ಗ್ರಾಮದ ಯತೀಶ್, ಶ್ರೀನಿವಾಸ, ಜಬೀವುಲ್ಲಾ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ. ಪೊಲೀಸರು ಸ್ಥಳದಲ್ಲಿ ಇದ್ದರೂ ಅವರ ಎದುರೇ ಚಾಕು ತೆಗೆದು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಗ್ರಾಮದ ನಾಗೇಶ್ ಮತ್ತೆ ಯಾವಾಗ ದೇವರ ಮೆರವಣಿಗೆ ಎಂದು ಕೇಳಿದ್ದಕ್ಕೆ ನೀನು ಯಾರು ಕೇಳೊಕ್ಕೆ ಎಂದ ಯತೀಶ್ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಲಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ನಾಗರಾಜು ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಇದ್ದರೂ ಗಲಾಟೆ ನಡೆದಿದ್ದು, ಪೊಲೀಸರ‌ ನಿರ್ಲಕ್ಷ್ಯದ ಬಗ್ಗೆಯೂ ಆರೋಪ ಮಾಡಲಾಗಿದೆ.

ಇದನ್ನೂ ಓದಿ: 

ಕೊರೊನಾವನ್ನೇ ಉಸಿರು ಕಟ್ಟಿಸಿ ಭಕ್ತಿಯಲ್ಲಿ ಮಿಂದೆದ್ದ ಭಕ್ತರು.. ಕೊರೊನಾ ನಡುವೆಯೂ ಅದ್ದೂರಿಯಾಗಿ ನಡೀತು ತಿಪ್ಪೇರುದ್ರಸ್ವಾಮಿ ಜಾತ್ರೆ

ಕೊರೊನಾ ಭೀತಿ ನಡುವೆಯೂ ಕೂಲಹಳ್ಳಿಯಲ್ಲಿ ಅದ್ದೂರಿ ಜಾತ್ರೆ: ರಥೋತ್ಸವದ ಸೊಬಗನ್ನು ಕಣ್ತುಂಬಿಕೊಂಡ ಭಕ್ತಸಾಗರ

(fighting between villagers at the fair of temple in tumkur)

Ads By Adgebra

ಭಾರತದಲ್ಲಿನ ಕೊವಿಡ್-19ರ ಪರಿಸ್ಥಿತಿಯ ಮೌಲ್ಯಮಾಪನ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ನ “ಹೆಚ್ಚಳ ಮತ್ತು ವೇಗವರ್ಧನೆ” (resurgence and acceleration) ಕಾರಣೀಕೃತವಾಗಿರುವ ಹಲವಾರು ಸಂಭಾವ್ಯ ಅಂಶಗಳನ್ನು ಪಟ್ಟಿಮಾಡಿದೆ. ಇದರಲ್ಲಿ “ಹಲವಾರು ಧಾರ್ಮಿಕ ಮತ್ತು ರಾಜಕೀಯ ಸಾಮೂಹಿಕ ಒಟ್ಟುಗೂಡಿಸುವಿಕೆ ಘಟನೆಗಳು ಈ ವೈರಸ್ ಹರಡುವಲ್ಲಿ ಕಾರಣವಾಗಿವೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

More