AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಜೀವನದ ಅತಿ ಅಪರೂಪದ ಕ್ಷಣವಿದು; ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತು

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅರಗ ಜ್ಞಾನೇಂದ್ರ, ನನ್ನ ಜೀವನದ ಅತಿ ಅಪರೂಪದ ಕ್ಷಣವಿದು. ನಿನ್ನೆ ಮುಖ್ಯಮಂತ್ರಿ ತುಮಕೂರು ಜಿಲ್ಲಾ ಉಸ್ತುವಾರಿಯನ್ನು ವಹಿಸಿದ್ದರು. ಈ ತಪೋ ಭೂಮಿಯಲ್ಲಿ ಧ್ವಜಾರೋಹಣ ನಡೆಸಿರುವುದು ನನ್ನ ಭಾಗ್ಯ.

ನನ್ನ ಜೀವನದ ಅತಿ ಅಪರೂಪದ ಕ್ಷಣವಿದು; ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತು
ಧ್ವಜಾರೋಹಣ ನೆರವೇರಿಸಿದ ಆರಗ ಜ್ಞಾನೇಂದ್ರ
TV9 Web
| Updated By: sandhya thejappa|

Updated on:Jan 26, 2022 | 8:58 AM

Share

ತುಮಕೂರು: ಇಂದು (ಜ.26) ದೇಶದಾದ್ಯಂತ ಸಂಭ್ರಮ ಸಡಗರ ಜೋರಾಗಿದೆ. 73ನೇ ಗಣರಾಜ್ಯೋತ್ಸವಕ್ಕೆ (Republic Day) ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ. ಜಿಲ್ಲೆಯ ಕ್ಯಾತ್ಸಂದ್ರ ಬಳಿಯಿರುವ ಸಿದ್ದಗಂಗಾ ಮಠದ (Siddaganga Mata) ಆವರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸಿದ್ದಲಿಂಗ ಶ್ರೀ, ಜಿಲ್ಲಾಧಿಕಾರಿ ವೈಎಸ್ ಪಾಟೀಲ್, ಎಸ್​ಪಿ ರಾಹುಲ್ ಕುಮಾರ್, ಸಿಇಒ ವಿದ್ಯಾಕುಮಾರಿ, ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಮಠದ ಮಕ್ಕಳು ಭಾಗಿಯಾಗಿದ್ದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅರಗ ಜ್ಞಾನೇಂದ್ರ, ನನ್ನ ಜೀವನದ ಅತಿ ಅಪರೂಪದ ಕ್ಷಣವಿದು. ನಿನ್ನೆ ಮುಖ್ಯಮಂತ್ರಿ ತುಮಕೂರು ಜಿಲ್ಲಾ ಉಸ್ತುವಾರಿಯನ್ನು ವಹಿಸಿದ್ದರು. ಈ ತಪೋ ಭೂಮಿಯಲ್ಲಿ ಧ್ವಜಾರೋಹಣ ನಡೆಸಿರುವುದು ನನ್ನ ಭಾಗ್ಯ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಜನವರಿ 26 ದಿನ ನಮ್ಮೆಲ್ಲರ ಹೆಮ್ಮೆಯ ದಿನ. ರಾಷ್ಟ್ರ ನಮಗೇನು ಕೊಟ್ಟಿದೆ ಎಂಬಾ ಚಿಂತನೆ ನಡುವೆ. ಇಲ್ಲೊಬ್ಬ ಯೋಗಿ ರಾಷ್ಟ್ರಕ್ಕೆ ಏನು ಕೊಡಬೇಹುದು ಎಂದು ಯೋಚಿಸಿದ್ದಾರೆ ಅಂತ ನುಡಿದರು.

ಸಿದ್ದಗಂಗೆಯಲ್ಲಿ ಸಾವಿರಾರು ಮಕ್ಕಳನ್ನು ಈ ರಾಷ್ಟ್ರಕ್ಕೆ ಯೋಗ್ಯ ಮಕ್ಕಳನ್ನು ಕೊಡುತ್ತೇನೆ ಎಂದು ಹೇಳಿದವರು ಸಿದ್ದಗಂಗಾ ಶ್ರೀಗಳು. ರಾಷ್ಟ್ರಕ್ಕೆ ದುಡಿರಿ ಎಂಬ ಸಂದೇಶ ಕೊಟ್ಟ ಯೋಗಿಯ ಬಗ್ಗೆ ವಿಶ್ವ ನೋಡುತ್ತಿದ್ದೇನೆ ಎಂದು ಮಾತನಾಡಿದ ಸಚಿವರು, ಮಠದಲ್ಲಿ ಧ್ವಜಾರೋಹಣ ನಡೆಸಿರುವುದು ನನಗೆ ಮರೆಯಲಾರದ ಕ್ಷಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಗೃಹ ಸಚಿವರಿಗೆ ಅಡ್ಡ ಬಂದ ಮಕ್ಕಳು: ಸಿದ್ದಗಂಗಾ ಮಠಕ್ಕೆ ಆಗಮಿಸಿದ ನೂತನ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ, ಶಿವಕುಮಾರ್ ಶ್ರೀ ಗಳ ಗದ್ದುಗೆ ದರ್ಶನ ಪಡೆದರು. ಈ ವೇಳೆ ಗೃಹ ಸಚಿವರ ಬೆಂಗಾವಲು ವಾಹನಕ್ಕೆ ಮಠದ ಮಕ್ಕಳು ಅಡ್ಡ ಬಂದರು. ಬಳಿಕ ಸಚಿವರು ವೇದಿಕೆ ಮುಂಭಾಗದಿಂದ ಕಾರಿನಿಂದ ಇಳಿದು ಬಂದರು.

ವಿಶೇಷ ಅಲಂಕಾರ: ಗಣರಾಜ್ಯೋತ್ಸವ ಹಿನ್ನೆಲೆ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿದೆ. ಕೇಸರಿ ಬಿಳಿ ಹಸಿರಿನ ರುದ್ರಾಕ್ಷಿಗಳನ್ನ ಬಳಸಿ ಗದ್ದುಗೆ ಸುತ್ತಲೂ ವಿಶೇಷ ಅಲಂಕಾರ ಮಾಡಲಾಗಿದೆ. ಈ ಮೂಲಕ ಸಿದ್ದಗಂಗಾ ಮಠದಲ್ಲಿ ಇಂದು ಗಣರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಶ್ರೀಗಳ ಗದ್ದುಗೆ ಅಲಂಕಾರ ಭಕ್ತರ ಮನಸೂರೆಗೊಂಡಿದೆ‌. ಮುಂಜಾನೆಯಿಂದಲೂ ಶ್ರೀಮಠದ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.

ಇದನ್ನೂ ಓದಿ

Republic Day Celebration 2022 LIVE; ಐತಿಹಾಸಿಕ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ

ಬೆಂಗಳೂರಲ್ಲಿ ಪಾರ್ಕಿಂಗ್​​​ಗೆ ಮೀಸಲಾದ ಜಾಗದಲ್ಲಿ ನಿಲ್ಲಿಸಿದ ವಾಹನಗಳನ್ನೂ ಟೋ ಮಾಡಿಕೊಂಡು ಹೋಗಲಾಗುತ್ತಿದೆ

Published On - 8:40 am, Wed, 26 January 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ