ತುಮಕೂರು, ಸೆಪ್ಟೆಂಬರ್ 20: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾಗಸಂದ್ರ ಗೊಲ್ಲರಹಟ್ಟಿಯಲ್ಲಿ ಗಲಾಟೆ ವೇಳೆ ಗರ್ಭಿಣಿ ಹೊಟ್ಟೆಗೆ ಒದ್ದ ಹಿನ್ನೆಲೆ ಗರ್ಭಸ್ಥ ಶಿಶು ಸಾವನ್ನಪ್ಪಿದೆ. ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದಿತ್ತು. ಗಲಾಟೆ ಬಿಡಿಸಲು ಬಂದ 5 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಗ್ರಾಮದ ಕುಮಾರ್ ಹಾಗೂ ಹರೀಶ್, ಗಿಡಯ್ಯ ಪಾಪಣ್ಣ, ಕಲಿ ನಡುವೆ ಜಗಳ ನಡೆದಿತ್ತು. ಜಗಳ ಬಿಡಿಸಲು ಬಂದ ಕುಮಾರ್ ಪತ್ನಿ ಹರ್ಷಿತಾ ಮೇಲೆ ಹಲ್ಲೆ ನಡೆಸಲಾಗಿದೆ.
ಗಲಾಟೆ ವೇಳೆ ದಾಯಾದಿಗಳು ಗರ್ಭಿಣಿ ಹೊಟ್ಟೆಗೆ ಅಮಾನುಷವಾಗಿ ಕಾಲಿನಿಂದ ಒದ್ದಿದ್ದಾರೆ. ಗರ್ಭಿಣಿಗೆ ಬಲವಾದ ಪೆಟ್ಟು ಹಿನ್ನೆಲೆ ಹೊಟ್ಟೆಯಲ್ಲಿದ್ದ ಶಿಶು ಸಾವಿಗೀಡಾಗಿದೆ. ಬಳಿಕ ದಂಪತಿ, ಹಲ್ಲೆ ಹಾಗೂ ಶಿಶು ಸಾವಿನ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಆದರೆ ಕೇವಲ ಹಲ್ಲೆ ಪ್ರಕರಣ ಮಾತ್ರ ದಾಖಲಿಸಿಕೊಂಡಿರುವ ಸಿ.ಎಸ್. ಪುರ ಠಾಣೆ ಪೊಲೀಸರು, ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.
ಇದನ್ನೂ ಓದಿ: ಗಣೇಶ ಹಬ್ಬದ ದಿನವೇ ತನ್ನ 4 ತಿಂಗಳ ಗಂಡು ಮಗುವನ್ನು ರಸ್ತೆಯ ಮೇಲೆ ಎಸೆದು ಕೊಂದ ತಂದೆ
ದೂರು ನೀಡಿದ ಬಳಿಕವೂ ಆರೋಪಿಗಳಿಂದ ದಂಪತಿಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆ ದಂಪತಿ ನಿತ್ಯ ಪೊಲೀಸ್ ಠಾಣೆಗೆ ಅಲೆದು ಸುಸ್ತಾಗಿದ್ದಾರೆ. ನೊಂದ ದಂಪತಿ ಸಿ.ಎಸ್. ಪುರ ಪೊಲೀಸ್ ಠಾಣೆ ಎದುರು ನ್ಯಾಯಕ್ಕಾಗಿ ಮೊರೆ ಇಡುತ್ತಿದೆ.
ಇದನ್ನೂ ಓದಿ: ನೈಟ್ ಶಿಫ್ಟ್ನಲ್ಲಿ ಮಹಿಳಾ ಇಂಜಿನಿಯರ್ ಜೊತೆ ಅಸಭ್ಯ ವರ್ತನೆ: ಸಾಕ್ಷ್ಯಾಧಾರ ಲಭ್ಯ, ಜೆಸ್ಕಾಂ ಇಂಜಿನಿಯರ್ ಸಸ್ಪೆಂಡ್
ತುಮಕೂರು: ಪಾರಿವಾಳಕ್ಕಾಗಿ ಲಾಂಗ್ ಹಿಡಿದ ಯುವಕರ ಗ್ಯಾಂಗ್ ಬಡಿದಾಡಿಕೊಂಡಿವೆ. ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಕಾಳಿದಾಸ ಬಡಾವಣೆಯಲ್ಲಿ ಘಟನೆ ನಡೆದಿದೆ. ಸಂಜು ಎಂಬುವನು 2 ಸಾವಿರ ರೂಪಾಯಿಗೆ ಅಜಯ್ ಎಂಬುವನಿಂದ ಪಾರಿವಾಳ ಖರೀದಿಸಿದ್ದ. ಪಾರಿವಾಳ ಪಡೆಯುವ ವೇಳೆ ಮುಂಗಡ 800 ರೂ ನೀಡಿದ್ದ ಸಂಜು. ಉಳಿದ ಹಣ 1,200 ರೂ ಅಜಯ್ ಗೆ ಸಂಜು ನೀಡಬೇಕಿತ್ತು. ಉಳಿದ ಹಣ ಕೇಳಿದ್ದಕ್ಕೆ ಸಂಜು ಆಕ್ರೋಶಗೊಂಡಿದ್ದಾನೆ. ಸಾಲದು ಅಂತಾ ಸಂಜು ಅಂಡ್ ಗ್ಯಾಂಗ್ ಲಾಂಗ್ ಸಹಿತ ಅಜಯ್ ಬಳಿ ಹೋಗಿ ಹಲ್ಲೆಗೆ ಮುಂದಾಗಿದೆ.
ಸಂಜು ಸೇರಿ ಆರು ಮಂದಿ ಯುವಕರು ಅಜಯ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಅಡ್ಡಬಂದ ಅಜಯ್ ಬಾವ ಸಂಪತ್ ಕೈಗೆ ಗಂಭೀರ ಗಾಯಗಳಾಗಿದೆ. ಆತನನ್ನು ಕೊರಟಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿದ್ದಾರೆ. ಪುಂಡಾಟ ಮೆರೆದಿದ್ದ ಗ್ಯಾಂಗ್ ಅನ್ನು ಕೊರಟಗೆರೆ ಪಿಎಸ್ ಐ ಚೇತನ್ ನೇತೃತ್ವದಲ್ಲಿ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕೋಡಿ: ಗಣೇಶ ಹಬ್ಬದ ದಿನದಂದೇ ತನ್ನ ನಾಲ್ಕು ತಿಂಗಳ ಗಂಡು ಮಗುವನ್ನು ತಂದೆ ಸಾಯಿಸಿದ್ದಾನೆ. ಸಿಟ್ಟಿನಿಂದ ಡಾಂಬರ್ ರಸ್ತೆ ಮೇಲೆ 4 ತಿಂಗಳ ಮಗು ಎಸೆದು ಕೊಂದಿದ್ದಾನೆ. ತಾಯಿಯ ತವರು ಮನೆ ಬಳಿ ರಸ್ತೆಯಲ್ಲೇ ಉಸಿರು ಚೆಲ್ಲಿದೆ ಹಸುಗೂಸು. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಸೆಪ್ಟೆಂಬರ್ 18ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ದುರದುಂಡಿ ಗ್ರಾಮದ ಬಸಪ್ಪ ಬಳುನಕಿ ಎಂಬಾತನಿಂದ 4 ತಿಂಗಳ ಮಗು ಸಂಚಿತ್ ಹತ್ಯೆಗೀಡಾಗಿದ್ದಾನೆ.
ಕೆಎಸ್ಐಎಸ್‌ಎಫ್ ಪೇದೆಯಾಗಿದ್ದ ಬಸಪ್ಪ ಬಳುಣಕಿ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡ್ತಿದ್ದ. ಒಂದೂವರೆ ವರ್ಷದ ಹಿಂದೆ ಚಿಂಚಲಿಯ ಲಕ್ಷ್ಮೀ ಜೊತೆ ಬಸಪ್ಪ ವಿವಾಹವಾಗಿದ್ದ. ಲಕ್ಷ್ಮೀ-ಬಸಪ್ಪ ದಂಪತಿಗೆ 4 ತಿಂಗಳ ಹಿಂದೆ ಗಂಡು ಮಗುವಾಗಿತ್ತು. ಮಗುವಾದ ಬಳಿಕ ಲಕ್ಷ್ಮೀ ಚಿಂಚಲಿಯ ತಾಯಿಯ ಮನೆಯಲ್ಲಿ ವಾಸವಿದ್ದಳು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ