ತುಮಕೂರಿನಲ್ಲಿ ನೂತನ ಟ್ರಾಮಾ ಕೇರ್ ಸೆಂಟರ್ ಉದ್ಘಾಟಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್
Trauma Care Centre in Tumkur: ತುಮಕೂರಿನಲ್ಲಿ ನೂತನ ಟ್ರಾಮಾ ಕೇರ್ ಸೆಂಟರ್ ಅನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ಉದ್ಘಾಟಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಪಘಾತ ಪ್ರಕರಣ ನಿತ್ಯ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಗಾಯಾಳುಗಳನ್ನು 70 ಕಿ.ಮೀ. ದೂರದ ಬೆಂಗಳೂರಿಗೆ ಕಳಿಸಬೇಕಿತ್ತು. ಹೀಗಾಗಿ ಜಿಲ್ಲೆಯಲ್ಲಿ ಟ್ರಾಮಾ ಸೆಂಟರ್ ಆರಂಭಿಸಬೇಕೆಂಬ ಬೇಡಿಕೆ ಇತ್ತು. ಇದೀಗ ಬಹಳ ದಿನಗಳಿಂದ ಇದ್ದ ಬೇಡಿಕೆ ಈಗ ಈಡೇರಿದೆ ಎಂದಿದ್ದಾರೆ.
ತುಮಕೂರು, ಸೆಪ್ಟೆಂಬರ್ 20: ಜಿಲ್ಲೆಯಲ್ಲಿ ಅಪಘಾತ ಪ್ರಕರಣ ನಿತ್ಯ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಗಾಯಾಳುಗಳನ್ನು 70 ಕಿ.ಮೀ. ದೂರದ ಬೆಂಗಳೂರಿಗೆ ಕಳಿಸಬೇಕಿತ್ತು. ಹೀಗಾಗಿ ಜಿಲ್ಲೆಯಲ್ಲಿ ಟ್ರಾಮಾ ಸೆಂಟರ್ ಆರಂಭಿಸಬೇಕೆಂಬ ಬೇಡಿಕೆ ಇತ್ತು. ಬಹಳ ದಿನಗಳಿಂದ ಇದ್ದ ಬೇಡಿಕೆ ಈಗ ಈಡೇರಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ಹೇಳಿದ್ದಾರೆ. ನೂತನ ಟ್ರಾಮಾ ಕೇರ್ ಸೆಂಟರ್ ಉದ್ಘಾಟನೆ ಬಳಿಕ ಮಾತನಾಡಿದ ಅವರು, 2018-19ನೇ ಸಾಲಿನಲ್ಲಿ ಟ್ರಾಮಾ ಸೆಂಟರ್ಗೆ ಮಂಜೂರಾತಿಯಾಗಿತ್ತು. 56 ಕೋಟಿ ವೆಚ್ಚದ ಆಧುನಿಕ ಟ್ರಾಮಾ ಸೆಂಟರ್ಗೆ ಅಡಿಗಲ್ಲು ಹಾಕಿತ್ತು. ಮೂರು ತಿಂಗಳ ಹಿಂದೆ ಕಟ್ಟಡವನ್ನು ಸಿಎಂ ಉದ್ಘಾಟಿಸಿದ್ದರು ಎಂದು ಹೇಳಿದ್ದಾರೆ.
ಈಗ ಟ್ರಾಮಾ ಸೆಂಟರ್ಗೆ ಸಿಬ್ಬಂದಿ, ವೈದ್ಯಕೀಯ ಉಪಕರಣ ನೀಡಿದ್ದಾರೆ. ಹೀಗಾಗಿ ಟ್ರಾಮಾ ಸೆಂಟರ್ ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದೇವೆ. ಟ್ರಾಮಾ ಸೆಂಟರ್ನಲ್ಲಿ ಎರಡು ಮೇಜರ್ ಆಪರೇಷನ್ ಥಿಯೇಟರ್, ಎರಡು ನಾರ್ಮಲ್ ಆಪರೇಷನ್ ಥಿಯೇಟರ್, ಮೂರು ಐಸಿಯು ಇದೆ. ನೂರು ಬೆಡ್ಗಳ ಟ್ರಾಮಾ ಸೆಂಟರ್ ಬಡವರಿಗೆ ಅನುಕೂಲವಾಗಲಿದೆ ಎಂದರು.
ರಾಜ್ಯದಲ್ಲಿ ಒಟ್ಟು 1016 ಪೊಲೀಸ್ ಠಾಣೆಗಳಿವೆ
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ವೆಪನ್ಸ್ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಪ್ರತಿವರ್ಷ ಸಂದರ್ಭಕ್ಕೆ ಅನುಗುಣವಾಗಿ ಟೆಕ್ನಾಲಜಿಯನ್ನ ಅಪ್ ಗ್ರೇಡ್ ಮಾಡಲಾಗುತ್ತೆ. ಅದು ನಿರಂತರವಾಗಿ ನಡೆಯುತ್ತೆ. ಇಡೀ ರಾಜ್ಯಕ್ಕೆ ಬೆಂಗಳೂರಿನಲ್ಲಿ ಕಮಾಂಡೋ ಸೆಂಟರ್ ಮಾಡಲಾಗುತ್ತಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಕಮಾಂಡೋ ಸೆಂಟರ್ ತೆರೆಯಲಾಗಿದೆ. ರಾಜ್ಯದಲ್ಲಿ ಒಟ್ಟು 1016 ಪೊಲೀಸ್ ಸ್ಟೇಷನ್ ಇದೆ. ಈಗಾಗಲೇ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣಗಳು; ಆರೋಗ್ಯ ಇಲಾಖೆಯಿಂದ ಗೈಡ್ಲೈನ್ಸ್ ಬಿಡುಗಡೆ
ನಮ್ಮಲ್ಲಿ ನೇಮಕಾತಿ ಪ್ರಕ್ರಿಯೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಕಂಪ್ಲಿಟ್ ಮಾಡುತ್ತೀದ್ದೇವೆ. ಸದ್ಯಕ್ಕೆ ಸಬ್ ಇನ್ ಸ್ಪೆಕ್ಟರ್ ನೇಮಕಾತಿ ಸ್ಟಾಪ್ ಆಗಿದೆ. ಸ್ಕ್ಯಾಮ್ ಆಗಿತ್ತಲ್ಲ ಆ ವಿಚಾರವಾಗಿ ತಿರ್ಮಾನಕ್ಕೆ ಕಾಯುತ್ತಿದ್ದೇವೆ. ಹಾಗಾದರೆ 1 ಸಾವಿರ ಸಬ್ ಇನ್ಸ್ಪೆಕ್ಟರ್ಗಳನ್ನ ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ಪ್ರದೇಶಗಳಿಗೆ ಇಂದಿನಿಂದ ಸೆ.21 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಜಿಲ್ಲಾ ಆಸ್ಪತ್ರೆ ಬಳಿ ಖಾಸಗಿ ಆ್ಯಂಬ್ಯುಲೆನ್ಸ್ಗಳ ಹಗಲು ದರೋಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಹಳ ದಿನಗಳಿಂದ ಈ ಬಗ್ಗೆ ದೂರು ಕೇಳುತ್ತಿದ್ದೇನೆ. ನಮ್ಮಲ್ಲಿ ಆ್ಯಂಬ್ಯುಲೆನ್ಸ್ ಇದ್ದಾವೆ. ಅದನ್ನ ಉಪಯೋಗ ಮಾಡುತ್ತಾರೆ. ಅತಹದ್ದು ಏನಾದರೂ ನಮ್ಮ ಗಮನಕ್ಕೆ ಬಂದರೆ ಕ್ರಮ ತಗೊಳ್ಳುತ್ತೇವೆ. ಡಿಎಸ್ ಹಾಗೂ ಡಿಹೆಚ್ಓ ಇದ್ದಾರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಡೆಂಘೀ, ಮಲೇರಿಯಾ ತಡೆಗೆ ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಜ್ವರ ಹೆಚ್ಚಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಅದಕ್ಕೆ ಕಾರ್ಪೊರೇಷನ್ ಕಮಿಷನರ್ ಹಾಗೂ ಕಾರ್ಪೊರೇಟರ್ಗಳು ಇದ್ದಾರೆ. ಸಂಬಂಧಪಟ್ಟವರು ಅದರ ವಿರುದ್ದ ಕ್ರಮ ತೆಗೆದುಕೊಳ್ಳುತ್ತಾರೆ. ಇಡೀ ಜಿಲ್ಲೆಯಲ್ಲಿ ಒಟ್ಟು 112 ಕೇಸ್ ರಿಪೋರ್ಟ್ ಆಗಿದೆ. ಯಾವ ರೀತಿಯಾಗಿ ಮುನ್ನೆಚ್ಚರಿಕೆ ತಗೋಬೇಕು ತಗೋಳ್ಳುತ್ತಾರೆ ನಮ್ಮ ಅಧಿಕಾರಿಗಳು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:21 pm, Wed, 20 September 23