ಇಂದು (ಜ.6) ಸಚಿವ ಬೈರತಿ ಬಸವರಾಜ್ ಜಿಲ್ಲೆಗೆ ಭೇಟಿ ನೀಡಿದ್ದರು. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಹಲವಾರು ಉದ್ಘಾಟನೆ ಸಮಾರಂಭ ಇತ್ತು. ಇದಕ್ಕೂ ಮುನ್ನ ಸಚಿವ ಭೈರತಿ ಬಸವರಾಜ್ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಜಿಎಸ್ ಬಸವರಾಜ್ ಕೂಡ ಭಾಗಿಯಾಗಿದ್ದರು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಜಿಎಸ್ ಬಸವರಾಜ್ ಹಾಗೂ ಭೈರತಿ ಬಸವರಾಜ್ ಗುಸು ಗುಸು ಮಾತನಾಡಿಕೊಂಡಿದ್ದಾರೆ. ಹೆಸರು ಹೇಳದೇ ಸಂಸದ ಬಸವರಾಜ್, ಭೈರತಿ ಬಸವರಾಜ್ ಜೊತೆ ಮಾಧುಸ್ವಾಮಿ ವಿರುದ್ಧ ಮಾತನಾಡಿದ್ದಾರೆ.
ಕೆಟ್ಟ ಮಾತುಗಳಿಂದ ಮಾತನಾಡಿ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದಕ್ಷಿಣ ಕೋರಿಯಾದ ಕಿಂಗ್ ಪಿನ್ ಕಿಮ್ ಜಾಂಗ್ ಉನ್ನಗೆ ಮಂತ್ರಿಯನ್ನ ಹೋಲಿಕೆ ಮಾಡಿದ್ದಾರೆ. ಇದಕ್ಕೆ ಭೈರತಿ ಬಸವರಾಜ್ ಹು ಅಂತೇಳಿ ಸುಮ್ಮನೆ ಇರಿ ಅಮೇಲೆ ಮಾತನಾಡೋಣ ಅಂತ ಅಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಜಿಎಸ್ ಬಸವರಾಜ್, ಸಚಿವ ಬಸವರಾಜ್ ಜತೆ ಅನುದಾನದ ಬಗ್ಗೆ ಮಾತನಾಡಿದೆ. ರಸ್ತೆ, ಅಂಡರ್ಪಾಸ್, ಯುಜಿಡಿಗಳಿಗೆ ಅನುದಾನ ಕೊಡಿಸಿದ್ದೆ. ನಮ್ಮನ್ನ ಸಭೆಗಳಿಗೆ ಕರೆಯಬೇಕು. ಆದರೆ ಮಾಧುಸ್ವಾಮಿ ನಮ್ಮನ್ನ ಕರೆಯಲ್ಲ, ಅದೇ ತಲೆನೋವು. ಇನ್ಯಾರನ್ನ ಬೈಯಲಿ, ನಾನ್ಯಾಕೆ ಬೈಯಲಿ. ನಾನು ಮಾಧುಸ್ವಾಮಿಯವರ ವಿಚಾರವನ್ನೇ ಮಾತನಾಡಿಲ್ಲ. ಅಧಿಕಾರಿಗಳೂ ನಮ್ಮ ಮಾತು ಕೇಳಲ್ಲ ಅಂತ ತಿಳಿಸಿದ್ದಾರೆ.
ಮಾಧುಸ್ವಾಮಿ ತಿರುಗೇಟು
ತುಮಕೂರಿನಲ್ಲಿ ಸಚಿವ, ಸಂಸದರ ಪಿಸುಮಾತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ಅವರ ಹೇಳಿಕೆಗೆ ಸಂತೋಷ ಆಯ್ತು, ನನ್ನ ತೆಗೆದುಹಾಕ್ಲಿಬಿಡಿ. ಅವರೇ ಇರಲಿ ಎಂದು ಸಂಸದ ಬಸವರಾಜ್ಗೆ ಟಾಂಗ್ ಕೊಟ್ಟಿದ್ದಾರೆ. ಈ ವೇಳೆ ಸಚಿವ, ಸಂಸದರ ಪಿಸುಮಾತಿಗೆ ಮಾಧುಸ್ವಾಮಿ ಗರಂ ಆಗಿದ್ದಾರೆ.
ಇದನ್ನೂ ಓದಿ
Brain Fog: ಮೆದುಳಿಗೆ ಮಂಕು ಕವಿದರೆ ಯಾವೆಲ್ಲಾ ಸಮಸ್ಯೆಗಳಾಗುತ್ತವೆ ಗೊತ್ತಾ? ಅದಕ್ಕೆ ಕಾರಣಗಳೇನು?