ತೆಂಗಿನಕಾಯಿ ಕಳ್ಳತನ ಮಾಡಿದ ಆರೋಪ; ತುಮಕೂರಿನಲ್ಲಿ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿತ
ಮೂರು ತೆಂಗಿನಕಾಯಿ ಕದ್ದಿದ್ದಾರೆ ಅಂತ ಹರೀಶ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ, ಜೊತೆಗೆ ತೆಂಗಿನಕಾಯಿ ಹಾರವನ್ನು ಕೊರಳಿಗೆ ಹಾಕಿ ಕಟ್ಟಿಗೆಯಿಂದ ಹೊಡೆದಿದ್ದಾರೆ. ಹರೀಶ್ ತಂದೆ ಗಂಗಾಧರಯ್ಯ ಎಂಬುವವರು ತುರುವೇಕೆರೆ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ತುಮಕೂರು: ತೆಂಗಿನಕಾಯಿ ಕಳ್ಳತನ ಮಾಡಿದ್ದಾರೆಂದು ಆರೋಪಿಸಿ, ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ತಾವರೆಕೆರೆಯಲ್ಲಿ ನಡೆದಿದೆ. ತೆಂಗಿನ ತೋಟದ ಮಾಲೀಕ ರಾಜು ಎಂಬುವವರು ಹರೀಶ್ನನ್ನು ಕಟ್ಟಿಹಾಕಿ ಥಳಿಸಿದ್ದಾರೆ. ತಮ್ಮ ತೋಟದಲ್ಲಿ ಮೂರು ತೆಂಗಿನಕಾಯಿಗಳನ್ನ ಕದ್ದಿದ್ದಾನೆ ಎಂದು ಆರೋಪಿಸಿ ರಾಜು ವ್ಯಕ್ತಿಗೆ ಥಳಿಸಿದ್ದಾರೆ. ಸದ್ಯ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಮೂರು ತೆಂಗಿನಕಾಯಿ ಕದ್ದಿದ್ದಾರೆ ಅಂತ ಹರೀಶ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ, ಜೊತೆಗೆ ತೆಂಗಿನಕಾಯಿ ಹಾರವನ್ನು ಕೊರಳಿಗೆ ಹಾಕಿ ಕಟ್ಟಿಗೆಯಿಂದ ಹೊಡೆದಿದ್ದಾರೆ. ಹರೀಶ್ ತಂದೆ ಗಂಗಾಧರಯ್ಯ ಎಂಬುವವರು ತುರುವೇಕೆರೆ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಈ ಘಟನೆ ಡಿಸೆಂಬರ್ 18 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಡಕೆ ಕದಿಯುತ್ತಿದ್ದ ಮೂವರು ಅರೆಸ್ಟ್ ತೋಟಗಳಲ್ಲಿ ಅಡಕೆ ಕದಿಯುತ್ತಿದ್ದ ಮೊವರನ್ನ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ಭಾಗದಲ್ಲಿ ಆರೋಪಿಗಳು ಅಡಕೆ ಕಳ್ಳತನ ಮಾಡುತ್ತಿದ್ದರು. ಕತ್ತಾಳೆಪಾಳ್ಯದ ರವಿಶಂಕರ್(32), ಶಶಿಕುಮಾರ್(26), ನಟರಾಜ(30) ಎಂಬು.ವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಸುಮಾರು 300 ಕೆಜಿ ಅಡಕೆಯನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಶಾಂತಕುಮಾರ್ಗೆ(28) ಶೋಧ ಕಾರ್ಯ ಮುಂದುವರೆದಿದ್ದು, ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
ಸಂಜನಾ ಗಲ್ರಾನಿ ಪ್ರೆಗ್ನೆಂಟ್; ಹೊಸ ವರ್ಷದ ಸಂಭ್ರಮದ ಜತೆಗೆ ಗುಡ್ ನ್ಯೂಸ್ ಹಂಚಿಕೊಂಡ ನಟಿ
Literature : ಅಭಿಜ್ಞಾನ ; ಕಿರಂ ಈದ ಹುಲಿಯ ರಕ್ಷಣೆಗೆ ಧಾವಿಸುತ್ತಿದ್ದದ್ದು ಈ ಸಂದರ್ಭದಲ್ಲಿ
Published On - 2:51 pm, Sun, 2 January 22