ತಿಂಡಿ ತಿನ್ನಲು ಹೋಗಿದ್ದ ಹೋಟೆಲ್‌ನಲ್ಲೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾನ್ಸ್‌ಟೇಬಲ್ ಬಂಧನ
ತಿಂಡಿ ತಿನ್ನಲು ಹೋಗಿದ್ದ ಕಾನ್ಸ್‌ಟೇಬಲ್ ಮಂಜುನಾಥ್ ಹೋಟೆಲ್‌ನಲ್ಲೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರ ನೆರವಿನಿಂದ ಮಹಿಳೆ ಪಾರಾಗಿದ್ದಾರೆ. ಬಳಿಕ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು ದೂರಿನ ಮೇರೆಗೆ ಕಾನ್ಸ್‌ಟೇಬಲ್ ಮಂಜುನಾಥ್ ಬಂಧಿಸಲಾಗಿದೆ.
ತುಮಕೂರು: ಹೋಟೆಲ್ ನಡೆಸುತ್ತಿದ್ದ ಮಹಿಳೆಯ ಮೇಲೆ ಕಾನ್ಸ್‌ಟೇಬಲ್ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಠಾಣೆಯ ಕಾನ್ಸ್‌ಟೇಬಲ್ ಮಂಜುನಾಥ್ನನ್ನು ಬಂಧಿಸಲಾಗಿದೆ.
ತಿಂಡಿ ತಿನ್ನಲು ಹೋಗಿದ್ದ ಕಾನ್ಸ್‌ಟೇಬಲ್ ಮಂಜುನಾಥ್ ಹೋಟೆಲ್‌ನಲ್ಲೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರ ನೆರವಿನಿಂದ ಮಹಿಳೆ ಪಾರಾಗಿದ್ದಾರೆ. ಬಳಿಕ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು ದೂರಿನ ಮೇರೆಗೆ ಕಾನ್ಸ್‌ಟೇಬಲ್ ಮಂಜುನಾಥ್ ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 353(a), 354(b), 448, 506, 509ರಡಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: Devendra Fadnavis ವಾಪಸ್ ಬಂದೇ ಬರುವೆ ಎಂದಿದ್ದ ಫಡ್ನವಿಸ್, ಏಕನಾಥ್ ಶಿಂಧೆಯನ್ನು ಮಹಾ ಸಿಎಂ ಮಾಡಿದ್ದೇಕೆ?
ಶವ ಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಮಹಿಳೆ ಇನ್ನು ಮತ್ತೊಂದೆಡೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೋಪಿಕುಂಟೆ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಮಾಡಲು ಮಹಿಳೆ ಅಡ್ಡಿ ಪಡಿಸಿರುವ ಘಟನೆ ನಡೆದಿದೆ. ಗ್ರಾಮದ ಸಣ್ಣಮ್ಮ ಎಂಬ ಮಹಿಳೆ ಜಮೀನಿನಲ್ಲಿ ಶವ ಸಂಸ್ಕಾರ ಮಾಡಬಾರದೆಂದು ಪಟ್ಟು ಹಿಡಿದಿದ್ದಾರೆ. ನರಸಿಂಹಯ್ಯ(85) ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಇವರ ಶವ ಸಂಸ್ಕಾರಕ್ಕೆ ಬಂದಾಗ ನಮಗೆ ಸೇರಿರುವ ಜಮೀನಿನಲ್ಲಿ ಶವ ಸಂಸ್ಕಾರ ಮಾಡಬಾರದೆಂದು ಪಟ್ಟು ಹಿಡಿದಿದ್ದಾರೆ. ಬೆಳಿಗ್ಗೆಯಿಂದಲೂ ಶವ ಸಂಸ್ಕಾರ ಮಾಡಲಾಗದೆ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸಣ್ಣಮ್ಮಳಿಗೆ ಎಷ್ಟೇ ಮನವೊಲಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೃತ ನರಸಿಂಹಯ್ಯರಿಗೂ ಜಮೀನಿನಲ್ಲಿ ಭಾಗಯಿದ್ದರೂ ಕೂಡ ಶವಸಂಸ್ಕಾರಕ್ಕೆ ಅಡ್ಡಿ ಎದುರಾಗಿದೆ.
ವಿದ್ಯುತ್ ಸ್ಪರ್ಶಿಸಿ ರೈತ ಸಾವು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಕರವೀರಯ್ಯ ಮಠಪತಿ (50) ಎಂಬ ರೈತ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ತಮ್ಮ ಜಮೀನಿನಲ್ಲಿದ್ದ ಬೋರವೆಲ್ನ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿದ್ದ ವೇಳೆ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 6:55 pm, Thu, 30 June 22