ಜೆಸಿಬಿ ಡಿಕ್ಕಿಯಾಗಿ ಇಬ್ಬರ ಸಾವು; 2014ರಲ್ಲಿ ಬೈಕ್ಗೆ ಡಿಕ್ಕಿ ಹೊಡೆದು ಸವಾರನ ಸಾವಿಗೆ ಕಾರಣವಾಗಿದ್ದ ಆಂಬುಲೆನ್ಸ್ ಚಾಲಕನಿಗೆ 14 ತಿಂಗಳು ಜೈಲು
ಬೈಕ್ನಲ್ಲಿದ್ದ ಸತೀಶ್(37) ಪರಶುರಾಮ್(26) ಮೃತ ದುರ್ದೈವಿ. ಬೈಕ್ ನಲ್ಲಿ ಹೋಗುತ್ತಿರುವಾಗ ಜೆಸಿಬಿ ಡಿಕ್ಕಿಯಾಗಿ ಸಾವು ಸಂಭವಿಸಿದೆ.
ತುಮಕೂರು: ಜೆಸಿಬಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ರಾಘವನಹೊಸೂರು ಬಳಿ ನಡೆದಿದೆ. ಬೈಕ್ನಲ್ಲಿದ್ದ ಸತೀಶ್(37) ಪರಶುರಾಮ್(26) ಮೃತ ದುರ್ದೈವಿ. ಬೈಕ್ ನಲ್ಲಿ ಹೋಗುತ್ತಿರುವಾಗ ಜೆಸಿಬಿ ಡಿಕ್ಕಿಯಾಗಿ ಸಾವು ಸಂಭವಿಸಿದೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರೈಲಿಗೆ ಸಿಲುಕಿ ವ್ಯಕ್ತಿ ಸಾವು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಬಳಿ ರೈಲಿಗೆ ಸಿಲುಕಿ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರು ಸುಮಾರು 45 ವರ್ಷದ ಗುಬ್ಬಿ ಮೂಲದ ಅಪರಿಚಿತ ವ್ಯಕ್ತಿ ಎನ್ನಲಾಗಿದೆ. ತುಮಕೂರು ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಬಳಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಆಂಧ್ರಪ್ರದೇಶ ಮೂಲದ ಶಿವ(30) ಮೃತ ದುರ್ದೈವಿ. ವೈ.ಎನ್. ಹೊಸಕೋಟೆಯಿಂದ ಬೆಸ್ತರಹಳ್ಳಿಗೆ ಹೋಗುವಾಗ ಈಚರ್ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ಗೆ ಡಿಕ್ಕಿ ಹೊಡೆದು ಸವಾರನ ಸಾವಿಗೆ ಕಾರಣವಾಗಿದ್ದ ಌಂಬುಲೆನ್ಸ್ ಚಾಲಕನಿಗೆ 14 ತಿಂಗಳು ಜೈಲು ಮತ್ತು ₹9 ಸಾವಿರ ದಂಡ ವಿಧಿಸಲಾಗಿದೆ. ಪಾವಗಡದ ಸಿವಿಲ್ ನ್ಯಾಯಾಲಯದ ಪ್ರದಾನ ನ್ಯಾಯಾಧೀಶ ಜಗದೀಶ್ ಬಿಸೆರೊಟ್ಟಿ ಆದೇಶ ಹೊರಡಿಸಿದ್ದಾರೆ. 2014 ರ ಅಕ್ಟೋಬರ್ ನಲ್ಲಿ ಅಂಬುಲೇನ್ಸ್ ಚಾಲಕ ನರೇಂದ್ರ ಅತಿವೇಗ ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕ್ ಡಿಕ್ಕಿ ಹೊಡೆದಿದ್ದರು. ಬೈಕ್ ಸವಾರ ಮಹಬೂಬ್ ಸಾಬ್ ಮೃತಪಟ್ಟಿದ್ದರು. ಪಾವಗಡ ಸಿಪಿಐ ಭಾನು ಪ್ರಸಾದ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ವಕೀಲ ಮಂಜುನಾಥ್ ವಾದ ಮಂಡಿಸಿದ್ದರು. ಸದ್ಯ ಈಗ ಚಾಲಕನಿಗೆ 14 ತಿಂಗಳು ಜೈಲು ಮತ್ತು ₹9 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Book Release: ಉಪನ್ಯಾಸಕಿ ಶ್ರುತಿ ಜೈನ್ ಅಂತರಾಳದ ಮಾತು; ಪ್ರೀತಿಗೊಂದು ಹೆಸರು ಇದು ‘ಝಿಪ್ಪಿ ಗ್ರಫಿ’ ಲೋಕಾರ್ಪಣೆಗೆ ಸಿದ್ಧ