AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Book Release: ಉಪನ್ಯಾಸಕಿ ಶ್ರುತಿ ಜೈನ್ ಅಂತರಾಳದ ಮಾತು; ಇದು ಲೋಕಾರ್ಪಣೆಗೆ ಸಿದ್ಧವಾದ ಪ್ರೀತಿಯ ‘ಝಿಪ್ಪಿ ಗ್ರಫಿ’

"ಇದು ಕಾಲ್ಪನಿಕ ಕಥೆಯಲ್ಲ, ಎಲ್ಲೋ ಓದಿದ ಕತೆಯ ತದ್ರೂಪ ಅಲ್ಲ. ಕಾದಂಬರಿ ಅಲ್ಲ, ಊಹೆ ಅಲ್ಲ. ಇದು ನಿಜ ಕಥೆಗಳು ನನ್ನ ಮತ್ತು ನನ್ನ ನಾಯಿ ಝಿಪ್ಪಿಯ ಒಡನಾಟ ಮತ್ತು ನಾನು ಝಿಪ್ಪಿಯೊಂದಿಗೆ ಕಳೆದ ಅನುಭವಕ್ಕೆ ಕೊಟ್ಟ ಅಕ್ಷರ ರೂಪ. ಇಲ್ಲಿನ 15 ಕಥೆಗಳನ್ನು ಓದಿದರೆ ನಿಮ್ಮ ತುಟಿಯಂಚಲ್ಲಿ ನಗು, ಕಣ್ಣಲ್ಲಿ ಉತ್ಸಾಹ ಬರುವುದಂತು ಅಕ್ಷರಶಃ ಸತ್ಯ"- ಶ್ರುತಿ ಜೈನ್

Book Release: ಉಪನ್ಯಾಸಕಿ ಶ್ರುತಿ ಜೈನ್ ಅಂತರಾಳದ ಮಾತು; ಇದು ಲೋಕಾರ್ಪಣೆಗೆ ಸಿದ್ಧವಾದ ಪ್ರೀತಿಯ 'ಝಿಪ್ಪಿ ಗ್ರಫಿ'
ಪ್ರೀತಿಗೊಂದು ಹೆಸರು ಇದು 'ಝಿಪ್ಪಿ ಗ್ರಫಿ'
Preethi Shettigar
| Edited By: |

Updated on:Dec 22, 2021 | 12:08 PM

Share

ನಮ್ಮೊಳಗೆ ಅವಿತು ಕುಳಿತ ಅದೆಷ್ಟೋ ಭಾವನೆಗಳಿಗೆ ಬಹುಶಃ ಇಲ್ಲಿ ಉತ್ತರಗಳಿಲ್ಲ. ಅದನ್ನು ಹೇಳುವ ಪರಿಯೂ ಕೆಲವರಿಗೆ ತಿಳಿದಿಲ್ಲ. ಆದರೆ ಸದಾ ಅದನ್ನು ಹಂಚಿಕೊಳ್ಳುವ ಬಯಕೆ ಹಲವಾರು ಮಂದಿಯಲ್ಲಿ ಇದ್ದೇ ಇರುತ್ತದೆ. ಇದಕ್ಕೆ ಸರಿಯಾದ ವೇದಿಕೆ/ಮಾರ್ಗ ಕಂಡುಕೊಳ್ಳುವುದಷ್ಟೇ ಇಲ್ಲಿ ದೂರದ ಮೌನ. ಹಾಗಿದ್ದರೆ ಜೀವನದಲ್ಲಿ ನಡೆದ ಅದೆಷ್ಟೋ ಘಟನೆ, ಅಂತರಾಳದಲ್ಲಿನ ಕೌತುಕ, ಬದಲಾವಣೆಯನ್ನು ಬಯಸಿದ ಮನಸ್ಥಿತಿ, ತಮ್ಮೊಳಗಿನ ಗೊಂದಲಗಳಿಗೆ ನೀಡಬೇಕಾದ ಉತ್ತರ ಯಾವುದು? ಈ ಪ್ರಶ್ನೆಗೆ ಆಗಿನಿಂದಲೂ ಇರುವ ಪೂರ್ಣತೆ ಅಥವಾ ಉತ್ತರ ‘ಪುಸ್ತಕ’. ಇದು ಓದುಗರನ್ನು ಲೇಖಕರ ಜೀವನಕ್ಕೆ ಕೊಂಡೊಯ್ಯುತ್ತದೆ. ಓದುವ ಹಂಬಲ ಹೆಚ್ಚಿಸುತ್ತದೆ. ಜೀವನದ ದಾರಿಯನ್ನು ಸುಗಮಗೊಳಿಸುತ್ತದೆ. ಇನ್ನು ಕೆಲವರಿಗೆ ನಾನು ಕೂಡ ಒಂದು ಪುಸ್ತಕ ಬರೆಯಬೇಕು ಎನ್ನುವಂತೆ ಸ್ಪೂರ್ತಿ ನೀಡುತ್ತದೆ. ಇದು ಪುಸ್ತಕದ ಮಹಿಮೆ. ಇಂತಹದ್ದೇ ಹೊಸ ಬಯಕೆಯೊಂದಿಗೆ ಹುಟ್ಟಿಕೊಂಡ ಲೇಖಕಿ ಶ್ರುತಿ ಜೈನ್​ ತಮ್ಮ ಚೊಚ್ಚಲ ಪುಸ್ತಕ ‘ಝಿಪ್ಪಿ ಗ್ರಫಿಗೆ’ ನಾಂದಿ ಹಾಡಿದ್ದಾರೆ.

ಕೃತಿ : ‘ಝಿಪ್ಪಿ ಗ್ರಫಿ’ (ಪ್ರೀತಿಗೊಂದು ಹೆಸರು ಇದು) ಲೇಖಕಿ : ಶ್ರುತಿ ಜೈನ್​ ಪುಟ : 80 ಬೆಲೆ : ರೂ. 100 ಮುಖಪುಟ ವಿನ್ಯಾಸ : ಜೇಮ್ಸ್ ವಾಜ್ ಕಾರ್ಟೂನ್​​: ರಾಘವೇಂದ್ರ ಶೃಂಗೇರಿ ಪ್ರಕಾಶನ : ಸ್ನೇಹ ಬುಕ್​ ಹೌಸ್

ಝಿಪ್ಪಿ, ಶ್ರುತಿ ಜೈನ್​ ಅವರ ಮನೆಯ ಮುದ್ದಿನ ಶ್ವಾನ. ಕಳೆದ 6 ವರ್ಷಗಳ ಹಿಂದೆ ತಮ್ಮ ಮನೆಗೆ ತಂದ ಒಂದು ತಿಂಗಳ ಪುಟ್ಟ ನಾಯಿ ಮರಿಯ ಜತೆಗಿನ ಒಡನಾಟವನ್ನು ಪುಸ್ತಕದ ರೂಪದಲ್ಲಿ ಹಂಚಿಕೊಂಡಿದ್ದಾರೆ. ಇವರ ಝಿಪ್ಪಿ ಗ್ರಫಿಗೆ ನಟ, ನಿರ್ದೇಶಕ ರಾಜ್​ ಬಿ. ಶೆಟ್ಟಿ ಮುನ್ನುಡಿ ಬರೆದಿದ್ದಾರೆ. 15 ಕಥೆಗಳನ್ನೊಳಗೊಂಡ ಝಿಪ್ಪಿ ಗ್ರಫಿ ಪುಸ್ತಕ ಮುಂದಿನ ತಿಂಗಳು ಅಂದರೆ ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಗುತ್ತಿದೆ. ತಮ್ಮ ಚೊಚ್ಚಲ ಪುಸ್ತಕದ ಲೋಕಾರ್ಪಣೆಗೆ ಸಿದ್ಧರಾಗಿರುವ ಶ್ರುತಿ ಜೈನ್​ ತಮ್ಮ ಅನುಭವವನ್ನು ಟಿವಿ9 ಡಿಜಿಟಲ್​ ಜೊತೆ ಹಂಚಿಕೊಂಡಿರುವುದು ಹೀಗೆ:

ಪ್ರೀತಿಗೊಂದು ಹೆಸರು ಬೇಕಾ… ಖಂಡಿತಾ ಇಲ್ಲ. ರಸ್ತೆ ಬದಿಯಲ್ಲಿರುವ ನಾಯಿಗಳು ಕೂಡ ನಮ್ಮ ಮೇಲೆ ಪ್ರೀತಿ ತೋರಿಸುತ್ತವೆ. ಆದರೆ ಅವುಗಳಿಗೆ ಹೆಸರಿಲ್ಲ. ಆದರೂ ನಿಷ್ಕಲ್ಮಷವಾದ ಪ್ರೀತಿ ನೀಡುತ್ತವೆ. ಆದರೆ ನಮ್ಮ ಮನೆಯ ನಾಯಿಗಳಿಗೆ ನಾವು ಪ್ರೀತಿಯಿಂದ ಒಂದು ಹೆಸರಿಡುತ್ತೇವೆ. ಅದೇ ನನ್ನ ಪುಸ್ತಕ, ಪ್ರೀತಿಗೊಂದು ಹೆಸರು ಇದು ಝಿಪ್ಪಿ ಗ್ರಫಿ.

Zippy graphy

ಶ್ರುತಿ ಜೈನ್ , ತಮ್ಮ ಕಥಾನಾಯಕಿ ಝಿಪ್ಪಿ ಜೊತೆ!

ಪುಸ್ತಕ ಬರೆಯಬೇಕು ಎನ್ನುವುದು ಪ್ರತಿಯೊಬ್ಬರ ಆಸೆ ಹಾಗೆ ನನ್ನಲ್ಲೂ ಕೂಡ ಈ ಆಸೆ ಇತ್ತು. ಆದರೆ ಯಾವ ವಿಷಯದ ಬಗ್ಗೆ ಪುಸ್ತಕ ಬರೆಯಬೇಕು ಎಂಬ ಬಗ್ಗೆ ಗೊಂದಲ ಇತ್ತು. ಈ ಹಿನ್ನೆಲೆಯಲ್ಲಿ ಬರೆಯುವ ಕನಸು ಮುಂದೂಡಿಕೆಯಾಗುತ್ತಿತ್ತು. ಆದರೆ ನಾನು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ಝಿಪ್ಪಿಯ ಫೋಟೋಗೆ ಹಲವರು ಪ್ರತಿಕ್ರಿಯೆ ನೀಡುತ್ತಿದ್ದರು. ಯಾಕೆ ನೀವು ನಿಮ್ಮ ಈ ಒಡನಾಟವನ್ನು ಪುಸ್ತಕ ರೂಪಕ್ಕೆ ತರಬಾರದು ಎಂದು ಕೇಳಿದ್ದಂಟು. ಆದರೆ ಆಗ ಬರೀ ನಮ್ಮಿಬ್ಬರ ಬಾಂಧವ್ಯ ಸಾಮಾಜಿಕ ಜಾಲತಾಣಗಳಲ್ಲಿ ನಾನು ಹಂಚಿಕೊಳ್ಳುತ್ತಿದ್ದ ಫೋಟೋವಿನ ಶೀರ್ಷಿಕೆಯಾಗಿತ್ತು. ಕ್ರಮೇಣ ನನ್ನ ಮತ್ತು ಝಿಪ್ಪಿಯ ಒಡನಾಟ ನೋಡಿದವರಿಗೆ ಅನಿಸಿದ ಹಾಗೆ ಬರವಣಿಗೆಯ ರೂಪಕ್ಕೆ ಆದಷ್ಟೂ ಬೇಗ ಇಳಿಸಬೇಕು ಎಂಬ ಬಯಕೆ ಮತ್ತು ಕುತೂಹಲ ನನ್ನಲ್ಲೂ ಹುಟ್ಟಿತು. ಇದಕ್ಕೆ ಪೂರಕವಾಗಿದ್ದು, ಲಾಕ್​ಡೌನ್​. ಈ ಸಮಯದಲ್ಲಿ 6 ವರ್ಷದ ನನ್ನ, ಝಿಪ್ಪಿಯ ಬಾಂಧವ್ಯ ಬರವಣಿಗೆಯಾಗಿ ಒಂದು ಪುಸ್ತಕ ಸೇರಿತು.

ಈ ಪುಸ್ತಕದ ಮೂಲ ಉದ್ದೇಶ ಇಷ್ಟೇ. ನನ್ನ ಮತ್ತು ಝಿಪ್ಪಿಯ ಒಡನಾಟ ಇಡೀ ಕರ್ನಾಟಕಕ್ಕೆ ಗೊತ್ತಾಗಬೇಕು. ಇಡೀ ಕರ್ನಾಟಕದ ಶ್ವಾನ ಪ್ರೇಮಿಗಳ ಮನೆಗೆ ಇದು ತಲುಪಬೇಕು. ಅವರ ಮನೆಯ ಟೇಬಲ್​ ಮೇಲೆ ಈ ಝುಪ್ಪಿ ಗ್ರಫಿ ಇರಬೇಕು. ಆ ಮೂಲಕ ಶ್ವಾನ ಪ್ರೇಮ ಪ್ರತಿಯೊಬ್ಬರಲ್ಲಿಯೂ  ಹೆಚ್ಚಾಗಬೇಕು. ತಾವು ಸಾಕಿರುವ ನಾಯಿ ಮೇಲೆ ಮತ್ತಷ್ಟು ಪ್ರೀತಿಯಾಗಬೇಕು ಮತ್ತು ನಾಯಿಯನ್ನು ಇಷ್ಟಪಡದವರೂ ಸಹ ತಮ್ಮ ಮನೆಯಲ್ಲಿ ನಾಯಿಯನ್ನು ತಂದು ಸಾಕುವಂತಾಗಬೇಕು ಅಥವಾ ಎಲ್ಲೋ ಬೀದಿ ಬದಿ ನಾಯಿಗೆ ಒಂದು ಹೊತ್ತಿನ ಊಟ ಹಾಕುವ ಮನಸ್ಥಿತಿ ಬರಬೇಕು.

ಇದು ಕಾಲ್ಪನಿಕ ಕಥೆಯಲ್ಲ, ಎಲ್ಲೋ ಓದಿದ ಕತೆಯ ತದ್ರೂಪ ಅಲ್ಲ. ಕಾದಂಬರಿ ಅಲ್ಲ, ಊಹೆ ಅಲ್ಲ. ಇದು ನಿಜ ಕಥೆಗಳು. ನನ್ನ ಮತ್ತು ನನ್ನ ನಾಯಿ ಝಿಪ್ಪಿಯ ಒಡನಾಟ ಮತ್ತು ನಾನು ಝಿಪ್ಪಿಯೊಂದಿಗೆ ಕಳೆದ ಅನುಭವಕ್ಕೆ ಕೊಟ್ಟ ಅಕ್ಷರ ರೂಪ. ಇಲ್ಲಿನ 15 ಕಥೆಗಳನ್ನು ಓದಿದರೆ ನಿಮ್ಮ ತುಟಿಯಂಚಲ್ಲಿ ನಗು, ಕಣ್ಣಂಚಲ್ಲಿ ಉತ್ಸಾಹದ ಬಗ್ಗೆ ಏಳುವುದು ಅಕ್ಷರಶಃ ಸತ್ಯ.

ಝಿಪ್ಪಿಗೆ ಈ ಬಗ್ಗೆ ಗಮನ ಇಲ್ಲ. ತನ್ನ ಹೆಸರಿನಲ್ಲಿ ಪುಸ್ತಕ ಬರುತ್ತಿದೆ. ತನ್ನದೇ ಫೋಟೋ ಇದೆ ಎಂಬ ಯಾವುದೇ ಅರಿವೂ ಅವಳಿಗಿಲ್ಲ. ಪುಸ್ತಕ ಎದುರಿಗಿಟ್ಟರೆ ಅಯ್ಯೋ ಇದ್ಯಾವುದೂ ಬೇಡ ನನಗೆ ಹೊಟ್ಟೆ ತುಂಬಾ ಊಟ ಕೊಡು, ಮನಸ್ಸು ತುಂಬಾ ಪ್ರೀತಿ ಕೊಡು ಎನ್ನುವ ಜೀವಿ ಅದು. ಇದೆಲ್ಲವೂ ‘ನಮ್ಮ ಖುಷಿಗೋಸ್ಕರ’ ಅಷ್ಟೇ. ಆದರೆ ಝಿಪ್ಪಿಯ ಆರನೇ ವರ್ಷದ ಹುಟ್ಟಿದ ಹಬ್ಬಕ್ಕೆ ನಾನು ಅವಳಿಗೆ ಕೊಡುತ್ತಿರುವ ಉಡುಗೊರೆ ಇದು.

ಝಿಪ್ಪಿ ನನಗೆ ತಾಯ್ತನದ ಅನುಭವ ನೀಡಿದ್ದಾಳೆ, ಮಗಳಾಗಿದ್ದಾಳೆ, ಡಾಗ್​ ಪೇರೆನ್ಟ್​​ ಕಾನ್ಸೆಪ್ಟ್​ ಗೊತ್ತಿರುವವರಿಗೆ ಇದು ಅರ್ಥ ಆಗುತ್ತದೆ. ಒಂದೊಳ್ಳೆ ಸ್ನೇಹಿತೆಯಾಗಿದ್ದಾಳೆ. ನನ್ನ ಎಲ್ಲಾ ಸಿಕ್ರೆಟ್ ಗೊತ್ತಿರುವ ಸಿಕ್ರೆಟ್ ಬಾಕ್ಸ್ ಅವಳು​. ನಾನು ಹಂಚಿಕೊಳ್ಳುವ ಎಲ್ಲಾ ಮಾತುಗಳನ್ನು ಕಿವಿ ಅಗಲಿಸಿ, ಕಣ್ಣು ಅರಳಿಸಿ ಕೇಳುತ್ತಿರುತ್ತಾಳೆ. ನನ್ನ ಪ್ರಯಾಣದ ಜೊತೆಗಾತಿ. ನನ್ನ ಗುರುವಾಗಿದ್ದಾಳೆ. ಮನೆಗೆ ಬರುವುದು ತಡವಾದರೂ, ಹಸಿವಿಂದ ಇದ್ದರೂ, ಮನೆಗೆ ಮರಳಿದಾಗ ಅಷ್ಟೇ ತಾಳ್ಮೆಯಿಂದ ನನ್ನನ್ನು ಬರಮಾಡಿಕೊಳ್ಳುವ ಮುಗ್ದೆ ಝಿಪ್ಪಿ. ಅಂತೆ ಕಂತೆಗಳ ಸಂತೆ ನನ್ನ ಕಿವಿಯ ಹತ್ತಿರ ಬಾರದ ಹಾಗೆ ನೋಡಿಕೊಂಡ ಮುದ್ದು ಇವಳು. ಇಬ್ಬರ ಪ್ರಪಂಚದಲ್ಲಿ ವಿಹರಿಸಿದ ಅನುಭವವೇ ನನ್ನ ಝಿಪ್ಪಿ ಗ್ರಫಿ.

ಪುಸ್ತಕ ಬರೆಯೋದಕ್ಕೆ ಯಾರು ಸ್ಪೂರ್ತಿ ಅಂದರೆ ಬಹುಷಃ ನನಗೆ ನನ್ನ ಪುಸ್ತಕದ ವಿಷಯವೇ ಸ್ಪೂರ್ತಿ. ಯಾರೋ ಪುಸ್ತಕ ಬರೆಯಿರಿ ಅಥವಾ ಕವನ ಬರೆಯಿರಿ ಅಂದರೆ ಅದನ್ನು ಮಾಡಲು ಸಾಧ್ಯ ಇಲ್ಲ. ಯಾವುದೇ ಒಂದು ವಿಷಯದ ಅಂದವನ್ನು ನಾವು ಸ್ವತಃ ಆಸ್ವಾದಿಸಿದಾಗ ಮಾತ್ರ ಅದು ಸಾಧ್ಯ. ಹೀಗಾಗಿ ಝಿಪ್ಪಿಯ ಹಾವಾಭಾವ, ಅವಳ ನಡವಳಿಕೆ, ಪ್ರೀತಿಯೇ ಇದಕ್ಕೆ ಸ್ಪೂರ್ತಿ.

zippy and shruthi jain

ಶ್ರುತಿ ಜೈನ್ ಮತ್ತು ಝಿಪ್ಪಿ

ಪರಿಚಯ ಶ್ರುತಿ ಜೈನ್ ಕಾರ್ಕಳದ ರೆಂಜಾಳದ ಗ್ರಾಮದವರಾಗಿದ್ದಾರೆ. ಪ್ರಸ್ತುತ ಉಜಿರೆಯ ಎಸ್‌ಡಿಎಂ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ) ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರುತಿ ನಿರೂಪಕಿ, ರೂಪದರ್ಶಿ ಮತ್ತು ನೃತ್ಯಗಾರ್ತಿ ಕೂಡ ಹೌದು. ಪ್ರಸ್ತುತ ತಮ್ಮ ಅನುಭವಗಳನ್ನು ಕುರಿತಂತೆ ಪುಸ್ತಕ ಕೂಡ ಬರೆದಿದ್ದು, ಆ ಮೂಲಕ ಲೇಖಕಿಯಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

(ಪುಸ್ತಕದ ಖರೀದಿಗೆ: 98450 31335 )

ಇದನ್ನೂ ಓದಿ:

ನೀರೆಚ್ಚರದ ಬದುಕು | ಬೆಂಗಳೂರಿನಲ್ಲಿ ಜನಪ್ರಿಯವಾಗಿರುವ ಇಂಗುಬಾವಿ ಪರಿಕಲ್ಪನೆ ಇಡೀ ಕರ್ನಾಟಕ ರಾಜ್ಯಕ್ಕೆ ಹಬ್ಬಬೇಕಿದೆ: ಶ್ರೀಪಡ್ರೆ

ಮದನ್ ಗೋಪಾಲ್ ಮನದಮಾತು: ಗ್ರಾಮದ ನೆಮ್ಮದಿ, ಏಕತೆಗೆ ಸುವ್ಯವಸ್ಥಿತ ಕೆರೆ ಇರಬೇಕು

Published On - 11:15 am, Wed, 22 December 21

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ