ನಿರಂತರ ಮಳೆಗೆ ಮನೆಗಳಿಗೆ ನುಗ್ಗುತ್ತಿರುವ ಹಾವುಗಳು; ದೇವರ ಮನೆಯಲ್ಲಿ ಕೊಳಕು ಮಂಡಲ ಕಂಡು ಬೆಚ್ಚಿಬಿದ್ದ ಮನೆ ಮಂದಿ
ಕೊಳಕು ಮಂಡಲ ಹಾವು ಬಂದಿರುವುದರಿಂದ ಮನೆಯವರಿಗೆ ತೀವ್ರ ಆತಂಕ ಮೂಡಿಸಿದೆ. ಸದ್ಯ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ವಾರಂಗಲ್ ವನ್ಯಜೀವಿ ಸಂಸ್ಥೆಯವರು ಕೊಳಕು ಮಂಡಲ ಹಾವನ್ನು ರಕ್ಷಿಸಿ, ಹತ್ತಿರದ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ತುಮಕೂರು: ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಮಳೆಯಿಂದ ಕೆರೆ, ಕುಂಟೆ, ಹಳ್ಳ, ನದಿ, ಜಲಾಶಯಗಳು ತುಂಬಿ ಹರಿಯುತ್ತಿವೆ. ಇದರಿಂದ ರೈತರು ಒಂದು ಕಡೆ ಖುಷಿಯಾದರೇ ಮತ್ತೊಂದು ಕಡೆ ಮನೆಗಳಿಗೆ ಹಾವುಗಳು (Snakes) ನುಗ್ಗುತ್ತಿದ್ದು ಇದರಿಂದ ಜನರು ಭಯಬೀತರಾಗಿದ್ದಾರೆ. ಮನೆಗಳ ಕಾಂಪೌಂಡ್ಗಳಲ್ಲಿ, ಗೋಡೆಗಳಲ್ಲಿ, ಮನೆಗಳ ಒಳಗಡೆ ಅದರಲ್ಲೂ ದೇವರ ಮನೆಯಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿದ್ದು, ಇದರಿಂದ ಜನರು ತೀವ್ರ ಭಯಬೀತರಾಗಿದ್ದಾರೆ. ಸದ್ಯ ತುಮಕೂರು ಹೊರವಲಯದ ಶಿರಾ ಗೇಟ್ ಬಳಿಯಿರುವ ಗೋಪಾಲಕೃಷ್ಣ ರವರ ಮನೆಯಲ್ಲಿ ಐದು ಅಡಿ ಉದ್ದದ ಕೊಳಕು ಮಂಡಲ ಹಾವೊಂದು ಪ್ರತ್ಯಕ್ಷವಾಗಿದೆ.
ಅದು ಕೂಡ ಮನೆಯ ದೇವರ ಕೋಣೆಯಲ್ಲಿ ಹಾವು ಪ್ರತ್ಯಕ್ಷವಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಾಣವಾಗಿದೆ. ಸಹಜವಾಗಿ ದೇವರ ಕೋಣೆಯಲ್ಲಿ ನಾಗರಹಾವುಗಳು ಸಿಗುವುದು ಕೇಳಿದ್ದೇವೆ. ಆಗ ಅದನ್ನು ದೇವರು ಅಂತಾ ಮನೆಯವರು ಪೂಜಿಸಿ ಹೊರಗಡೆ ಬಿಡುತ್ತಿದ್ದರು. ಆದರೆ ಕೊಳಕು ಮಂಡಲ ಹಾವು ಬಂದಿರುವುದರಿಂದ ಮನೆಯವರಿಗೆ ತೀವ್ರ ಆತಂಕ ಮೂಡಿಸಿದೆ. ಸದ್ಯ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ವಾರಂಗಲ್ ವನ್ಯಜೀವಿ ಸಂಸ್ಥೆಯವರು ಕೊಳಕು ಮಂಡಲ ಹಾವನ್ನು ರಕ್ಷಿಸಿ, ಹತ್ತಿರದ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಬೆಂಗಳೂರು: ವರುಣನ ಅವಾಂತರದ ಮಧ್ಯೆ ಮೀನನ್ನು ನುಂಗಿನೀರು ಕುಡಿದ ಹಾವು ಅಕಾಲಿಕ ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಮಂದಿ ಬೆಚ್ಚಿದ್ದಾರೆ. ಬೆಂಗಳೂರಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿವೆ. ಈ ನಡುವೆ ಇನ್ನೂ 2 ದಿನ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಧಾರಾಕಾರ ಮಳೆಗೆ ರಸ್ತೆಗಳೇ ಕೆರೆಗಳಂತಾಗಿವೆ. ಹುಳ, ಹಪಟೆಗಳು ಮನೆ ಹೊಕ್ಕಿವೆ. ಅಂತೆಯೇ ಭಾರೀ ಮಳೆಗೆ ಸಿಂಗಾಪುರ ಕೆರೆ ಕೋಡಿ ಒಡೆದ ಪರಿಣಾಮ ಸಮೀಪದ ಲೇಔಟ್ಗೆ ನೀರು ಸತತವಾಗಿ ನುಗ್ಗುತ್ತಿದೆ. ಈ ಅವಾಂತರದ ಮಧ್ಯೆ ಮೀನನ್ನು ಹಾವೊಂದು ನುಂಗಿದೆ. ಸದ್ಯ ಮೀನು ನುಂಗುತ್ತಿರುವ ದೃಶ್ಯ ನೋಡಿ ಸ್ಥಳೀಯ ನಿವಾಸಿಗಳು ಹೌಹಾರಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಬೆಂಗಳೂರಿನ ಸಿಂಗಪೂರ್ ಕಾಲೊನಿಯಲ್ಲಿ ಮಳೆನೀರಿನ ಜೊತೆ ಹಾವುಗಳೂ ಹರಿದು ಬರುತ್ತಿವೆ!
ತುಮಕೂರು: ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಏಳು ಅಡಿ ಉದ್ದದ ಕೆರೆ ಹಾವು ರಕ್ಷಣೆ
Published On - 8:23 am, Fri, 26 November 21