ದೇವರ ಮಾತು ಕೇಳಿ ಹೆಂಡತಿಯನ್ನು ಬಿಟ್ಟ ಗಂಡ! ಇದು ಜೋಕ್​ ಅಲ್ಲ, ಸೀರಿಯಸ್​​: ಆಮೇಲೇನಾಯ್ತು!?

Tumakuru: ಮೂಢನಂಬಿಕೆಗೆ ಒಳಗಾಗಿ ಹೆಂಡತಿಯನ್ನು ಬಿಡುವಂತೆ ದೇವರು ಹೇಳಿದರು ಅಂತಾ ತಾಳಿ ಕಟ್ಟಿದ್ದ ಪತ್ನಿಗೆ ವಿಚ್ಛೇದನ ನೀಡಲು ಪತಿ ಮಹಾಶಯ ಮುಂದಾಗಿದ್ದ. ಆದರೆ ಅದು ನ್ಯಾಯದ ಕಟಕಟೆಗೆ ಬಂದಾಗ ನಡೆದಿದ್ದೇ ಬೇರೆ.

ದೇವರ ಮಾತು ಕೇಳಿ ಹೆಂಡತಿಯನ್ನು ಬಿಟ್ಟ ಗಂಡ! ಇದು ಜೋಕ್​ ಅಲ್ಲ, ಸೀರಿಯಸ್​​: ಆಮೇಲೇನಾಯ್ತು!?
ದೇವರ ಮಾತು ಕೇಳಿ ಹೆಂಡತಿ ಬಿಟ್ಟ ಗಂಡ! ಇದು ಜೋಕ್​ ಅಲ್ಲ
Updated By: ಸಾಧು ಶ್ರೀನಾಥ್​

Updated on: Feb 01, 2023 | 12:25 PM

ತುಮಕೂರು: ಗಂಡ ದೇವರ ಮಾತು ಕೇಳಿ ಹೆಂಡತಿಯನ್ನು ಬಿಟ್ಟ ಎಂದು ಹೇಳಿದರೆ ಮುಸಿಮುಸಿ ನಗುತ್ತಾ, ಇದು ಜೋಕ್​ ಅಂತೀರೇನೋ! ಆದರೆ ಸೀರಿಯಸ್ ವಿಷಯ. ಏನಾಯ್ತು ಅಂದರೆ ಮೂಢನಂಬಿಕೆಗೆ (Superstition) ಒಳಗಾಗಿ ಬೇರೆಯಾಗಿದ್ದ ಜೋಡಿಯನ್ನ (Divorce) ನ್ಯಾಯಾಧೀಶರು (Judge) ಒಂದು ಮಾಡಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ನಡೆದಿದೆ.

ಮೂಢನಂಬಿಕೆಗೆ ಒಳಗಾಗಿ ಹೆಂಡತಿಯನ್ನು ಬಿಡುವಂತೆ ದೇವರು ಹೇಳಿದರು ಅಂತಾ ತಾಳಿ ಕಟ್ಟಿದ್ದ ಪತ್ನಿಗೆ ವಿಚ್ಛೇದನ ನೀಡಲು ಪತಿ ಮಹಾಶಯ ಮುಂದಾಗಿದ್ದ. ಆದರೆ ಅದು ನ್ಯಾಯದ ಕಟಕಟೆಗೆ ಬಂದಾಗ ನಡೆದಿದ್ದೇ ಬೇರೆ. ತುಮಕೂರು (Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ (Chikkanayakanahalli) ನ್ಯಾಯಾಲಯದ ಮೆಟ್ಟಿಲೇರಿದ್ದ ಗಂಡ-ಹೆಂಡತಿಯನ್ನು ವಿಚಾರಣೆ ಮಾಡಿದ ನ್ಯಾಯಾಧೀಶರು, ಜೀವನ ಅಂದ್ರೆ ಏನು? ಅದರಲ್ಲೂ ಸತಿಪತಿ ಹೇಗಿರಬೇಕು ಎಂಬುದರ ಬಗ್ಗೆ ಸೂಕ್ಷ್ಮವಾಗಿ ತಿಳಿವಳಿಕೆ ಹೇಳಿದ್ದಾರೆ.

ದಸೂಡಿ ಸಮೀಪದ ಮರೆನಾಡು ಗ್ರಾಮದ ಪಾರ್ವತಮ್ಮ ಮತ್ತು ಹಂದನಕೆರೆ ಹೋಬಳಿಯ ಮಂಜುನಾಥ್ ದಂಪತಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪ ಅವರ ಮುಂದೆ ತಮ್ಮ ವಿಚ್ಛೇದನಾ ಅರ್ಜಿಯ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಇಬ್ಬರಿಗೂ ಬುದ್ಧಿ ಹೇಳಿದ ನ್ಯಾಯಾಧೀಶರು, ಜೋಡಿಗಳನ್ನು ಒಂದು ಮಾಡಿದ್ದಾರೆ.

ಮನಸ್ತಾಪವನ್ನು ಮರೆತು, ನ್ಯಾಯಾಧೀಶರ ಮಾತಿಗೆ ಬೆಲೆ ಕೊಟ್ಟು, ಯುವ ಜೋಡಿ ಮತ್ತೆ ಒಂದಾಗಿದ್ದಾರೆ. ಸಾಕ್ಷಾತ್​ ನ್ಯಾಯದೇವತೆಯ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿಯೇ ಹಾರ ಬದಲಾಯಿಸಿಕೊಂಡು, ಸೆಕೆಂಡ್ ಇನ್ನಿಂಗ್ಸ್​​ಗೆ ರೆಡಿಯಾಗಿದ್ದಾರೆ. ಕೋರ್ಟ್​​ನಲ್ಲಿ ಹಾಜರಿದ್ದ ಮಂದಿ ಶುಭಂ ಎಂದು ದಂಪತಿಗೆ ಶುಭ ಹಾರೈಸಿದ್ದಾರೆ.

ವರದಿ: ಮಹೇಶ್, ಟಿವಿ 9, ತುಮಕೂರು

Published On - 12:09 pm, Wed, 1 February 23