ಕೆಆರ್‌ಎಸ್‌ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಮಾಜಿ ಸಚಿವ ರಾಜಣ್ಣ
ಕೆಆರ್‌ಎಸ್ ಕಟ್ಟಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಟಿಪ್ಪು ಶುರುಮಾಡಿದ್ದ ಕನ್ನಂಬಾಡಿ ಕಟ್ಟೆಯನ್ನ ಅನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಪೂರ್ಣ ಮಾಡಿದ್ದಾರೆ. ಆದರೆ ಟಿಪ್ಪು ಸುಲ್ತಾನ್‌ನನ್ನ ಬಹಳ ಕೆಟ್ಟದಾಗಿ ತೋರಿಸಲಾಗುತ್ತಿದ್ದು, ಆತ ಮಾಡಿರುವ ಒಳ್ಳೆಯ ಕೆಲಸಗಳನ್ನೂ ಹೇಳಲಿ ಎಂದು ಅವರು ತಿಳಿಸಿದ್ದಾರೆ.

ತುಮಕೂರು, ಅಕ್ಟೋಬರ್ 05: ಟಿಪ್ಪು ಸುಲ್ತಾನ್‌ನನ್ನ ಬಹಳ ಅವಹೇಳನಕಾರಿಯಾಗಿ ತೋರಿಸಲಾಗುತ್ತೆ. ಆದ್ರೆ ನಾನು ಓದಿರುವ ಪ್ರಕಾರ ಕನ್ನಂಬಾಡಿ ಕಟ್ಟೆಯನ್ನ (Krishna Raja Sagara) ಪ್ರಾರಂಭ ಮಾಡಿದ್ದೇ ಅವನು. ಅನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಕಾಲದಲ್ಲಿ ಅದನ್ನ ಸಂಪೂರ್ಣ ಮಾಡಿದ್ದಾರೆ. ನಮ್ಮ ಮಕ್ಕಳಿಗೆ ಇತಿಹಾಸ ಸ್ಪಷ್ಟವಾಗಿ ತಿಳಿಸಬೇಕು, ಅದನ್ನ ತಿರುಚಬಾರದು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಒಡೆಯರ್ ಕಾಲದಲ್ಲಿ KRS ಸಂಪೂರ್ಣ ಮಾಡಬೇಕಾದ್ರೆ ಹಣಕಾಸಿನ ತೊಂದರೆ ಬಂತು. ಮನೆಯಲ್ಲಿದ್ದ ಚಿನ್ನ ತೆಗೆದುಕೊಂಡು ಹೋಗಿ ಬಾಂಬೆಯಲ್ಲಿ ಮಾರ್ತಾರೆ. ನಾವು ಇದನ್ನ ಮರೆಯಬಾರದು ಎಂದೂ ರಾಜಣ್ಣ ತಿಳಿದ್ದಾರೆ. ಟಿಪ್ಪು ಸುಲ್ತಾನ್ ನಾಲ್ಕು ಯುದ್ಧ ಮಾಡ್ತಾನೆ. 3ನೇ ಯುದ್ದದಲ್ಲಿ ಸೋತು ಬಿಡ್ತಾನೆ. ಈ ವೇಳೆ ಬ್ರಿಟಿಷ್‌ನವರು 3 ಕೋಟಿ 30 ಲಕ್ಷ ಯುದ್ಧದ ಖರ್ಚು ಕೇಳಿದ್ದಕ್ಕೆ ಆತ ಮಕ್ಕಳನ್ನು ಅಡವಿಡುತ್ತಾನೆ. ಜೈಲಿನಲ್ಲಿ ಇಟ್ಟ ಮಕ್ಕಳನ್ನ ದುಡ್ಡು ಕೊಟ್ಟು ಬಿಡಿಸಿಕೊಳ್ಳಬೇಕಾದರೆ, 4ನೇ ಯುದ್ಧದಲ್ಲಿ ಮೀರ್ ಸಾದಿಕ್ ಕಥೆಯಿಂದಾಗಿ ಸೋಲುತ್ತಾನೆ. ಟಿಪ್ಪು ಸುಲ್ತಾನ್‌ಗೆ ಮೀರ್ ಸಾದಿಕ್ ದ್ರೋಹ ಮತ್ತು ಶಸ್ತ್ರಾಗಾರ ಡ್ಯಾಮೇಜ್ ಆಗದೆ ಇದ್ದಿದ್ದರೆ ಅವನು ಸೋಲುತ್ತಿರಲಿಲ್ಲ. ಮೋಸದಿಂದ ಯುದ್ಧದಲ್ಲಿ ಆತನನ್ನ ಸೋಲಿಸಲಾಯ್ತು ಎಂದು ರಾಜಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಅಡಿಗಲ್ಲು: ಮಹದೇವಪ್ಪ ಹೇಳಿಕೆಗೆ ಐತಿಹಾಸಿಕ ಪುರಾವೆ ಇದೆಯೇ? ತಜ್ಞರು ಹೇಳೋದೇ ಬೇರೆ!
ನಮ್ಮ ರಾಜ್ಯದಲ್ಲಿ ರೇಷ್ಮೆ ಬರಲು ಟಿಪ್ಪು ಕಾರಣ, ಟಿಪ್ಪು ರೇಷ್ಮೆ ಜನಕ. ರೇಷ್ಮೆ ಮೊದಲನೇ ಬೆಳೆಯನ್ನ ಸುಲ್ತಾನ್ ಕಡ್ಡಿ ಅಂತಾ ಪರ್ಷಿಯಾದಿಂದ ತಂದಿದ್ದೇ ಅವನು. ಟಿಪ್ಪು ಆನೆಗೆ ಕಣ್ಣು ಹೋದಾಗ ಆತ ನಂಜುಂಡೇಶ್ವರನಿಗೆ ಹರಕೆ ಮಾಡಿಕೊಳ್ತಾನೆ. ಆ ಬಳಿಕ ಆನೆಗೆ ಕಣ್ಣು ಬರುತ್ತೆ. ಹೀಗಾಗಿ ಪಚ್ಚೆಯನ್ನು ನಂಜುಂಡೇಶ್ವರನ ಲಿಂಗದ ಮೇಲಿಟ್ಟು ಪೂಜೆ ಮಾಡ್ತಾನೆ. ಇದೆಲ್ಲಾ ಟಿಪ್ಪು ಸುಲ್ತಾನ್ ಬಗ್ಗೆ ಇರುವ ಒಳ್ಳೆಯ ಅಂಶಗಳು. ಅಲ್ಲೆಲ್ಲೋ ಕೊಡಗಿನಲ್ಲಿ ಅವನ ಆಡಳಿತವನ್ನು ಪ್ರಶ್ನೆ ಮಾಡಿದಾಗ, ರೂತ್ ಲೇಸ್ ಆಗಿ ಅದನ್ನು ಸಪ್ರೆಸ್ ಮಾಡಲೇ ಬೇಕಾಗುತ್ತೆ. ಇದನ್ನೆಲ್ಲಾ ಹಾಗೆ ಹೀಗೆ ಮಾಡ್ಬಿಟ್ಟ ಅಂತಾರೆ. ಒಳ್ಳೇದು ಮಾಡಿದ್ದನ್ನು ಹೇಳಲಿ ಎಂದು ರಾಜಣ್ಣ ಹೇಳಿದ್ದಾರೆ.
ವಿವಾದವಾಗಿದ್ದ ಮಹದೇವಪ್ಪ ಹೇಳಿಕೆ
ಕೃಷ್ಣರಾಜ ಸಾಗರ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್ ಎಂಬ ಸಚಿವ ಮಹದೇವಪ್ಪ ಹೇಳಿಕೆ ಈ ಹಿಂದೆ ಕರ್ನಾಟಕದಲ್ಲಿ ವಿವಾದದ ಕಿಡಿ ಹೊತ್ತಿಸಿತ್ತು. ರಾಜಕೀಯವಾಗಿ ಈ ಹೇಳಿಕೆಗೆ ಬಂದಿದ್ದ ಆಕ್ಷೇಪಗಳು ಒಂದೆಡೆಯಾದರೆ, ಇತಿಹಾಸ ತಜ್ಞರಿಂದಲೂ ಸಚಿವರ ಮಾತಿಗೆ ವಿರೋಧ ವ್ಯಕ್ತವಾಗಿತ್ತು.
ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:35 am, Sun, 5 October 25



