AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸ್ಟೆಲ್​ನ ಕುಡಿಯುವ ನೀರಿಗೆ ವಿಷ ಹಾಕಲು ಯತ್ನಿಸಿದ ಪ್ರಕರಣ; ಅಪರಾಧಿಗೆ 7 ವರ್ಷ ಜೈಲು, 10 ಸಾವಿರ ರೂ. ದಂಡ

ಗ್ರಾಮದ ಶ್ರೀನಿವಾಸ್, ಹಾಸ್ಟೆಲ್ ಬಳಿ ಹೂ ಕೀಳಲು ಹೋಗುತ್ತಿದ್ದ ಇದನ್ನು ಹಾಸ್ಟೆಲ್ ಅಡುಗೆ ಭಟ್ಟರಾದ ಕರಿಯಮ್ಮ ಪ್ರಶ್ನೆ ಮಾಡಿದ್ದು, ಹೂ ಕೀಳಬೇಡಿ ಎಂದು ಬೈದಿದ್ದರು. ಹೀಗಾಗಿ ಕೋಪಗೊಂಡ ಶ್ರೀನಿವಾಸ್​, ನೀರಿಗೆ ವಿಷ ಹಾಕಿಸಿ ಕರಿಯಮ್ಮಳಿಗೆ ಕೆಟ್ಟ ಹೆಸರು ತರಿಸಿಬೇಕೆಂದು ನಿರ್ಧರಿಸಿದ್ದ.

ಹಾಸ್ಟೆಲ್​ನ ಕುಡಿಯುವ ನೀರಿಗೆ ವಿಷ ಹಾಕಲು ಯತ್ನಿಸಿದ ಪ್ರಕರಣ; ಅಪರಾಧಿಗೆ 7 ವರ್ಷ ಜೈಲು, 10 ಸಾವಿರ ರೂ. ದಂಡ
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on:Dec 21, 2021 | 12:51 PM

Share

ತುಮಕೂರು: 2018ರಲ್ಲಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗುರುವಾಪುರದಲ್ಲಿ ಹಾಸ್ಟೆಲ್‌ನ (Hostel) ಕುಡಿಯುವ ನೀರಿಗೆ ವಿಷ ಹಾಕಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗೆ 7 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಲಾಗಿದೆ. ತಿಪಟೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ಕೋರ್ಟ್ ನ್ಯಾಯಾಧೀಶ ಬಿ.ಶಿವಕುಮಾರ್‌ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು? ಗ್ರಾಮದ ಶ್ರೀನಿವಾಸ್, ಹಾಸ್ಟೆಲ್ ಬಳಿ ಹೂ ಕೀಳಲು ಹೋಗುತ್ತಿದ್ದ ಇದನ್ನು ಹಾಸ್ಟೆಲ್ ಅಡುಗೆ ಭಟ್ಟರಾದ ಕರಿಯಮ್ಮ ಪ್ರಶ್ನೆ ಮಾಡಿದ್ದು, ಹೂ ಕೀಳಬೇಡಿ ಎಂದು ಬೈದಿದ್ದರು. ಹೀಗಾಗಿ ಕೋಪಗೊಂಡ ಶ್ರೀನಿವಾಸ್​, ನೀರಿಗೆ ವಿಷ ಹಾಕಿಸಿ ಕರಿಯಮ್ಮಳಿಗೆ ಕೆಟ್ಟ ಹೆಸರು ತರಿಸಿಬೇಕೆಂದು ನಿರ್ಧರಿಸಿದ್ದ. ಕರಿಯಮ್ಮಳನ್ನು ಕೆಲಸದಿಂದ ತೆಗೆಸಬೇಕೆಂದು ವಿದ್ಯಾರ್ಥಿ ಮೂಲಕ ವಿಷಬಾಟಲ್ ನೀಡಿ ನೀರಿಗೆ ವಿಷ ಹಾಕಲು ಯತ್ನಿಸಿದ್ದ. ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಗುರುವಾಪುರದ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಈ ಘಟನೆ ನಡೆದಿತ್ತು. ಸದ್ಯ ಆರೋಪ ಸಾಭಿತಾದ ಹಿನ್ನೆಲೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಹುಳಿಯಾರು ಪಿಎಸ್​ಐ ಕೆಸಿ ಜಯಕುಮಾರ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪ್ರಧಾನ ಅಭಿಯೋಜಕ ಹನುಮಂತರಾಯ ತಳಕೇರಿ, ಮಹಾದೇವ ಈರಪ್ಪನವರು ವಾದ ಮಂಡಿಸಿದ್ದರು.

ಯಾದಗಿರಿ: ಟ್ರಾಕ್ಟರ್ ಪಲ್ಟಿ; ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವು ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಟ್ರಾಕ್ಟರ್ ಪಲ್ಟಿಯಾಗಿದ್ದು, ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಲಿ‌ ಕೆಲಸ ಮುಗಿಸಿಕೊಂಡು ವಾಪಸ್ ಬರುವ ವೇಳೆ ಈ ದುರಂತ ನಡೆದಿದೆ. ನಾಯ್ಕಲ್ ಗ್ರಾಮದ ಪರ್ವೀನ್ ಹಾಗೂ ಮಾನಮ್ಮ ಮೃತ ದುರ್ದೈವಿಗಳು. ಟ್ರಾಕ್ಟರ್​ನಲ್ಲಿದ್ದ ಇನ್ನು 13 ಜನರಿಗೆ ಸಣ್ಣಪುಟ್ಟ ಗಾಯಗಲಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಬಳಿಕ ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಗೆ ಯಾದಗಿರಿ ಡಿಸಿ ರಾಗಪ್ರಿಯಾ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಣೆ ನಡೆಸಿದ್ದಾರೆ. ವಡಗೇರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೋಲಾರ: ವಿಷಪೂರಿತ ನೀರು ಕುಡಿದವರಲ್ಲಿ ಕಾಡುತ್ತಿದೆ ಪ್ಲೋರೋಸಿಸ್ ಕಾಯಿಲೆ; 270 ಗ್ರಾಮಗಳಲ್ಲಿ ಇನ್ನೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ

ಮುದ್ದೆಯಲ್ಲಿ ಕ್ರಿಮಿನಾಶಕ- FSLನಿಂದ ವರದಿ ಬಹಿರಂಗ; ಮಗಳೇ ಆಹಾರದಲ್ಲಿ ವಿಷವಿಟ್ಟು ನಾಲ್ವರನ್ನ ಕೊಂದ ಆರೋಪ

Published On - 12:38 pm, Tue, 21 December 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ