ತುಮಕೂರು: ಕೋರ್ಟ್​​ಗೂ ಬಂದು ದಾಳಿ ಮಾಡಿದ ಬೀದಿನಾಯಿ; ಹೊಡೆದು ಕೊಂದ ಸ್ಥಳೀಯರು!

ತುಮಕೂರಿನಲ್ಲೂ ಇದೀಗ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಜನರಿರುವ ಸ್ಥಳದಲ್ಲೇ ಬೀದಿ ನಾಯಿಗಳು ಅಟ್ಟಾಹಾಸ ಮೆರೆಯುತಿದ್ದು, ಆತಂಕದಲ್ಲಿ ಓಡಾಡುವ ವಾತಾವರಣ ನಿರ್ಮಾಣವಾಗಿದೆ. ಕೋರ್ಟ್ ಆವರಣದಲ್ಲೇ ಮಹಿಳೆ ಮೇಲೆ ಬೀದಿ ನಾಯಿ ದಾಳಿ ಮಾಡಿ, ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ. ಸದ್ಯ ಸ್ಥಳೀಯರು ನಾಯಿಯನ್ನು ಹೊಡೆದು ಕೊಂದಿದ್ದಾರೆ.  

ತುಮಕೂರು: ಕೋರ್ಟ್​​ಗೂ ಬಂದು ದಾಳಿ ಮಾಡಿದ ಬೀದಿನಾಯಿ; ಹೊಡೆದು ಕೊಂದ ಸ್ಥಳೀಯರು!
ಬೀದಿ ನಾಯಿ
Updated By: ಗಂಗಾಧರ​ ಬ. ಸಾಬೋಜಿ

Updated on: Sep 08, 2025 | 10:39 AM

ತುಮಕೂರು, ಸೆಪ್ಟೆಂಬರ್​ 08: ಜನರಲ್ಲಿ ಬೀದಿ ನಾಯಿಗಳ (Stray Dogs) ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದ ಮೊದಲು ಬೆಂಗಳೂರಿನಲ್ಲಿದ್ದ ಈ ಆತಂಕ ಇದೀಗ ಪಕ್ಕದ ಜಿಲ್ಲೆ ತುಮಕೂರಿಗೂ ವ್ಯಾಪಿಸಿದೆ. ರಾತ್ರಿ ಓಡಾಡುವುದಲ್ಲಾ, ಬೆಳಿಗ್ಗೆ ಹೊತ್ತಲ್ಲೂ ಆಚೆ ಕಾಲಿಡುವುದಕ್ಕೆ ಭಯ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನೈಜ ಉದಾಹರಣೆ ಎಂಬಂತೆ ಹಾಡಹಗಲೇ ಕೋರ್ಟ್ ಆವರಣದಲ್ಲಿ ಮಹಿಳೆಯೊಬ್ಬರ (woman) ಮೇಲೆ ಬೀದಿ ನಾಯಿ ದಾಳಿ, ಮುಖ ಮೂತಿ ಕಚ್ಚಿ ಗಾಯಗೊಳಿಸಿದೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸ್ಥಳೀಯರು ನಾಯಿಯನ್ನು ಹೊಡೆದು ಕೊಂದಿದ್ದಾರೆ.

ನಡೆದದ್ದೇನು?

ಶನಿವಾರದಂದು ಗುಬ್ಬಿ ಕೋರ್ಟ್ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿ, ಮುಖಕ್ಕೆ ಕಚ್ಚಿಗಾಯಗೊಳಿಸಿದೆ. ಸದ್ಯ ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಬೀರಸಂದ್ರದ ನಿವಾಸಿ ಗಂಗಾಭವಾನಿ ನಾಯಿ ದಾಳಿಗೊಳಗಾದವರು.

ಇದನ್ನೂ ಓದಿ: ನಾಯಿ ಕಡಿತ: ರೇಬಿಸ್​ ರೋಗದಿಂದ ಬೆಂಗಳೂರಿನಲ್ಲಿ 17 ಜನರ ಸಾವು

ಇದನ್ನೂ ಓದಿ
ನಾಯಿ ಕಡಿತ: ರೇಬಿಸ್​ ರೋಗದಿಂದ ಬೆಂಗಳೂರಿನಲ್ಲಿ 17 ಜನರ ಸಾವು
ಬೆಂಗಳೂರು ಬೀದಿನಾಯಿಗಳ ಅಟ್ಟಹಾಸ: ಡೆಡ್ಲಿ ದಾಳಿಗೆ ವ್ಯಕ್ತಿ ಬಲಿ
ಚಿಕ್ಕಮಗಳೂರು: 3 ದಿನದಲ್ಲಿ 35ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳ ದಾಳಿ
ಬೆಂಗಳೂರಿನಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ

ಗಂಗಾಭವಾನಿ ಗಾರೆ ಕೆಲಸ ಮಾಡುವ ಮಹಿಳೆ. ಕಳೆದ ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದು, ಬಳಿಕ ಸಂಸಾರದಲ್ಲಿ ಬಿರುಕು ಮೂಡಿತ್ತಂತೆ. ಇದರಿಂದ ಗಂಡ ಕೋರ್ಟ್​ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರಂತೆ. ಹಾಗಾಗಿ ಗಂಗಾಭವಾನಿ ಅವರಿಗೆ ನೋಟಿಸ್ ಬಂದಿತ್ತಂತೆ.

ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಬಾಡೂಟ ಹಾಕುವುದಕ್ಕೂ ಮೊದಲೇ ಬೀದಿನಾಯಿಗಳ ಅಟ್ಟಹಾಸ; ಡೆಡ್ಲಿ ದಾಳಿಗೆ ವ್ಯಕ್ತಿ ಬಲಿ

ಆ ನೋಟಿಸ್​ಗೆ ಉತ್ತರವಾಗಿ ಇದೇ ಮೊದಲ ಬಾರಿಗೆ ಗಂಗಾಭವಾನಿ, ತನ್ನ ಸಹೋದರ ಲಿಖಿತ್ ಜೊತೆ ಕೋರ್ಟ್​ಗೆ ಬಂದಿದ್ದಾರೆ. ವಕೀಲರಿಗೆ ಮಾಹಿತಿ ನೀಡಿ ಶೌಚಾಲಯಕ್ಕೆ ಹೋಗಿದ್ದಾರೆ. ಶೌಚಾಲಯಕ್ಕೆ ಹೋದ ಕೆಲವೇ ನಿಮಿಷದಲ್ಲಿ ಚೀರಾಡಿದ್ದಾರೆ. ಕಾರಣ ಅಲ್ಲೇ ಇದ್ದ ಬೀದಿನಾಯಿಯೊಂದು ಅವರ ಮೇಲೆ ದಾಳಿ ಮಾಡಿದೆ. ಕೂಡಲೇ ಸಹೋದರ ಕೂಡ ಅವರ ರಕ್ಷಣೆಗೆ ಹೋಗಿದ್ದು, ಈ ವೇಳೆ ನಾಯಿ ಅವರ ಕೈಗಳಿಗೂ ಕಚ್ಚಿದೆ.

ಬೀದಿನಾಯಿ ಕೊಂದ ಸ್ಥಳೀಯರು 

ಘಟನೆ ಹಿನ್ನಲೆ ಗುಬ್ಬಿ ಕೋರ್ಟ್ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಅಲ್ಲೇ ಇದ್ದ ಕೆಲ ಸ್ಥಳೀಯರು ದಾಳಿ ಮಾಡಿದ ಬೀದಿನಾಯಿಯನ್ನು ಹತ್ಯೆ ಮಾಡಿದ್ದಾರೆ. ಗಂಗಾಭವಾನಿ ಅವರ ಕಣ್ಣಿನ ಭಾಗದಲ್ಲಿ ಗಂಭೀರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೀದಿನಾಯಿಗಳ ಅಟ್ಟಾಹಾಸಕ್ಕೆ ಜನರಲ್ಲಿ ಆತಂಕ ಸೃಷ್ಟಿಯಾಗಿರುವುದು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:37 am, Mon, 8 September 25