AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಕಿ ಮುಬಿನಾ ಮಗುವನ್ನು ಹಾಸ್ಟೆಲ್ ವಿದ್ಯಾರ್ಥಿನಿಯರು ಆರೈಕೆ ಮಾಡಬೇಕಂತೆ; ಇಲ್ಲದಿದ್ದರೆ ಆಂತರಿಕ ಅಂಕ ಕಟ್ ಮಾಡ್ತಾರಂತೆ!

ಶಿಕ್ಷಕಿ ಮುಬಿನಾ ಅವರ ಮಗುವನ್ನು ಆರೈಕೆ ಮಾಡೋದು, ಪಾತ್ರೆ ತೊಳೆಯೋದು, ನೆಲ ಒರೆಸುವ ಕೆಲಸ ಮಾಡಬೇಕಂತೆ ವಸತಿ ಶಾಲೆಯ ವಿದ್ಯಾರ್ಥಿನಿಯರು. ಮನೆ ಕೆಲಸ ಮಾಡಿಕೊಡದೇ ಇರುವ ವಿದ್ಯಾರ್ಥಿನಿಯರ ಆಂತರಿಕ ಅಂಕ ಕಟ್ ಮಾಡ್ತಾರೆ ಶಿಕ್ಷಕಿ ಮುಬಿನಾ

ಶಿಕ್ಷಕಿ ಮುಬಿನಾ ಮಗುವನ್ನು ಹಾಸ್ಟೆಲ್ ವಿದ್ಯಾರ್ಥಿನಿಯರು ಆರೈಕೆ ಮಾಡಬೇಕಂತೆ; ಇಲ್ಲದಿದ್ದರೆ ಆಂತರಿಕ ಅಂಕ ಕಟ್ ಮಾಡ್ತಾರಂತೆ!
ಶಿಕ್ಷಕಿ ಮುಬಿನಾ ಮಗುವನ್ನು ಹಾಸ್ಟೆಲ್ ವಿದ್ಯಾರ್ಥಿನಿಯರು ಆರೈಕೆ ಮಾಡಬೇಕಂತೆ; ಇಲ್ಲದಿದ್ದರೆ ಆಂತರಿಕ ಅಂಕ ಕಟ್ ಮಾಡ್ತಾರಂತೆ!
TV9 Web
| Edited By: |

Updated on:Aug 23, 2022 | 2:41 PM

Share

ತುಮಕೂರು: ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿನಿಯರನ್ನು ಮನೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕನ್ನಡ ಶಿಕ್ಷಕಿ ಮುಬಿನಾ ವಿರುದ್ಧ ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ (girl students allegation ). ತುಮಕೂರು ತಾಲೂಕು ಹೆಬ್ಬೂರಿನ ನರಸಾಪುರದ ಮೊರಾರ್ಜಿ ವಸತಿ ಶಾಲೆಯಲ್ಲಿ (Tumkur Morarji Desai Modal Residential School) ಈ ಪ್ರಕರಣ ನಡೆದಿದೆ. ಶಿಕ್ಷಕಿ ಮುಬಿನಾ ಅವರ ಮಗುವನ್ನು ಆರೈಕೆ ಮಾಡೋದು, ಪಾತ್ರೆ ತೊಳೆಯೋದು, ನೆಲ ಒರೆಸುವ ಕೆಲಸ ಮಾಡಬೇಕಂತೆ ವಸತಿ ಶಾಲೆಯ ವಿದ್ಯಾರ್ಥಿನಿಯರು. ಮನೆ ಕೆಲಸ ಮಾಡಿಕೊಡದೇ ಇರುವ ವಿದ್ಯಾರ್ಥಿನಿಯರ ಆಂತರಿಕ ಅಂಕ ಕಟ್ ಮಾಡ್ತಾರೆ ಶಿಕ್ಷಕಿ ಮುಬಿನಾ (teacher mubina).

ಇನ್ನು ಶಿಕ್ಷಕಿ ಮುಬಿನಾ ಕಾರ್ತಮಂತ್ರ ಹೇಗಿದೆಯೆಂದರೆ ವಿದ್ಯಾರ್ಥಿನಿಯರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಶಿಕ್ಷಕಿಗಾಗಿ ವಿದ್ಯಾರ್ಥಿನಿಯರ ಆ ಎರಡು ಗುಂಪಿನ ನಡುವೆ ಗಲಾಟೆ, ವಿದ್ಯಾರ್ಥಿನಿಯರ ನಡುವೆ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಳ್ಳುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ. ಮಾಧ್ಯಮಗಳ ಕ್ಯಾಮರಾ ಮುಂದೆಯೂ ವಿದ್ಯಾರ್ಥಿನಿಯರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.

ಮೊರಾರ್ಜಿ ಶಾಲಾ ಆವರಣದಲ್ಲಿ ಹೈ ಡ್ರಾಮಾ:

ಜೊತೆಗೆ ವಿದ್ಯಾರ್ಥಿನಿಯರು ಪುರುಷ ಟೀಚರ್ ಜೊತೆ ಮಾತನಾಡಿದ್ರೆ ಶಿಕ್ಷಕಿ ಮುಬೀನಾ ಅವಾಚ್ಯ ಹಾಗೂ ಅಶ್ಲೀಲ ಶಬ್ದಗಳಿಂದ ನಿಂದಿಸುತ್ತಾರಂತೆ. ಒಂದು ವರ್ಷದ ಗಂಡು ಮಗು ಜೊತೆಗೆ ಕುಟುಂಬ ಸಮೇತ ಕ್ವಾಟ್ರಸ್ ನಲ್ಲಿ ಮುಬೀನಾ ಕುಟುಂಬ ಠಿಕಾಣಿ ಹೂಡಿದೆ. ಶಿಕ್ಷಕಿ ವಿರುದ್ಧ ಎಸ್ ಎಸ್ ಎಲ್ ಸಿಯ ಹಲವು ವಿದ್ಯಾರ್ಥಿನಿಯರಿಂದ ಈ ಗಂಭೀರ ಆರೋಪ ಕೇಳಿಬಂದಿದೆ. ಶಿಕ್ಷಕಿ ವಿದ್ಯಾರ್ಥಿನಿಯರನ್ನ ಬಳಸಿಕೊಳ್ಳುವ ಬಗ್ಗೆ ತುಮಕೂರು ಸಮಾಜ ಕಲ್ಯಾಣ ಜಂಟಿ ನಿರ್ದೇಶಕರಿಗೂ ದೂರು ಸಲ್ಲಿಸಲಾಗಿದೆ. ಆದರೆ ದೂರು ನೀಡಿದರೂ ಜಿಲ್ಲಾ ಸಮಾಜ‌ ಕಲ್ಯಾಣ ಅಧಿಕಾರಿ ಪ್ರೇಮಾ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಕೊರಟಗೆರೆ ಕ್ಯಾತಗಾನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗಲಿ ರೈತ ಸಾವು

ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾತಗಾನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗಲಿ ರೈತ ಸಾವಿಗೀಡಾದ ಘಟನೆ ನಡೆದಿದೆ. ಗ್ರಾಮದ ಮಹೇಶ್ (32) ತಮ್ಮ ಹೊಲದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೃತಪಟ್ಟ ದುರ್ದೈವಿ. ಘಟನೆಯ ಬಳಿಕ ಕೆಇಬಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೋಟದಲ್ಲಿ ವಿದ್ಯುತ್ ತಂತಿ ಹಾದುಹೋಗಿದ್ದು, ವಿದ್ಯುತ್ ಲೈನ್ ಸರಿಪಡಿಸುವಂತೆ ಮಹೇಶ್ ಈ ಹಿಂದೆ ಮನವಿ ಮಾಡಿದ್ದರು. ಆದರೂ ಕೆಇಬಿ ಸಿಬ್ಬಂದಿ ತಲೆಕೆಡಿಸಿಕೊಂಡಿರಲಿಲ್ಲ ಎಂದು ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸೂಕ್ತ ಪರಿಹಾರ ನೀಡುವಂತೆಯೂ ಒತ್ತಾಯ ಮಾಡಿದ್ದಾರೆ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 2:34 pm, Tue, 23 August 22

ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ