ತುಮಕೂರು: ರಾಜ್ಯದ ಹಲವೆಡೆ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು (Rain), ಅನಾಹುತಗಳು ಸಂಭವಿಸಿವೆ. ತುಮಕೂರು (Tumkur) ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಗೂಳ ಗ್ರಾಮದಲ್ಲಿ ಸಿಡಿಲು ಬಡಿದು 20 ಕುರಿಗಳು ಸ್ಥಳದಲ್ಲೇ ದುರ್ಮರಣ ಹೊಂದಿವೆ. ಗೊಲ್ಲರಹಟ್ಟಿಯ ರಾಮಚಂದ್ರಪ್ಪಗೆ ಸೇರಿದ 20 ಕುರಿಗಳು ಮೃತಪಟ್ಟಿವೆ. ಕುರಿಗಳ ಸಾವಿನಿಂದ ರಾಮಚಂದ್ರಪ್ಪಗೆ ಸುಮಾರು 2 ಲಕ್ಷ ರೂ. ನಷ್ಟವಾಗಿದೆ. ಹೀಗಾಗಿ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಸದ್ಯ ಶಿರಾ ತಹಶೀಲ್ದಾರ್, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸಾವಿರಾರು ಕೋಳಿಗಳ ಸಾವು:
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದಲ್ಲಿ ಸಿಡಿಲಿನ ಸದ್ದಿಗೆ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಬಾಳು ಸಬಕಾಳೆ ಎಂಬುವವರ ಕೋಳಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇನ್ನು ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದಲ್ಲಿ ಕಲ್ಲಪ್ಪ ಹೊನ್ನಾಯ್ಕರ್ ಎನ್ನುವ ರೈತನ ಮನೆ ಕುಸಿದು ಎತ್ತು ಸಾವನ್ನಪ್ಪಿದೆ. ಜೋರಾಗಿ ಮಳೆ ಬಂದ ಹಿನ್ನೆಲೆ ಎತ್ತನ್ನು ರೈತ ಒಳಗೆ ಕಟ್ಟಿದ್ದರು. ಧಿಡೀರ್ ಮನೆ ಕುಸಿತದಿಂದ ಮಣ್ಣಿನ ಅಡಿಯಲ್ಲಿ ಸಿಕ್ಕು ಎತ್ತು ಮೃತಪಟ್ಟಿದೆ.
ವಿಜಯಪುರ ಹೊರವಲಯದ ಹೌಸಿಂಗ್ಬೋರ್ಡ್ ಬಳಿ ಮನೆ ಮೇಲ್ಚಾವಣಿ ಶೀಟ್ ಮೇಲಿಟ್ಟಿದ್ದ ಕಲ್ಲು ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ತೋಟದ ಮನೆಯಲ್ಲಿ 14 ವರ್ಷದ ಸಚಿನ್ ಮಹಾಂತೇಶ್ ಸೊನ್ನದ ಮೃತಪಟ್ಟಿದ್ದಾನೆ. ಜೋರಾಗಿ ಬೀಸಿದ ಗಾಳಿ ಹಾಗೂ ಮಳೆಗೆ ಮನೆಯ ಮೇಲ್ಚಾವಣಿಯ ತಗಡುಗಳು ಹಾರಿ ಹೋಗಿವೆ. ಈ ವೇಳೆ ತಗಡುಗಳ ಮೇಲಿಟ್ಟಿದ್ದ ಕಲ್ಲು ಬಾಲಕನ ಮೇಲೆ ಬಿದ್ದಿದೆ.
ಇದನ್ನೂ ಓದಿ
Akshay Kumar: ಅಭಿಮಾನಿಗಳಲ್ಲಿ ಸಿನಿಮಾ ಟೈಟಲ್ ಸೂಚಿಸಿ ಎಂದ ಅಕ್ಷಯ್ ಕುಮಾರ್; ಯಾವ ಚಿತ್ರಕ್ಕೆ?
Sara Tendulkar: ಶೀಘ್ರದಲ್ಲೇ ಬಾಲಿವುಡ್ಗೆ ಎಂಟ್ರಿ ನೀಡಲಿದ್ದಾರಾ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್?
Published On - 11:00 am, Tue, 26 April 22