ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಉರ್ದು ಶಾಲೆಯ ಬಾಗಿಲು ಮುರಿದು ಪುಂಡರ ಎಣ್ಣೆ ಪಾರ್ಟಿ; ಸ್ಥಳೀಯರ ಆಕ್ರೋಶ
ಹೊಳವನಹಳ್ಳಿಯ ಕರ್ನಾಟಕ ಪಬ್ಲಿಕ್ ಉರ್ದು ಶಾಲೆಯಲ್ಲಿ ಕೆಲ ಕುಡುಕರು, ಪುಂಡರು ಶಾಲೆಯ ಬಾಗಿಲು ಮುರಿದು ಎಣ್ಣೆ ಪಾರ್ಟಿ ಮಾಡಿದ್ದಾರೆ. ಜ್ಞಾನ ದೇಗುಲದಲ್ಲಿ ಈ ರೀತಿಯ ವರ್ತನೆ ಬಗ್ಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ತುಮಕೂರು: ಉರ್ದು ಶಾಲೆಯ ಬಾಗಿಲು ಮುರಿದು ಮದ್ಯವ್ಯಸನಿಗಳು ಪಾರ್ಟಿ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯಲ್ಲಿ ನಡೆದಿದೆ. ಹೊಳವನಹಳ್ಳಿಯ ಕರ್ನಾಟಕ ಪಬ್ಲಿಕ್ ಉರ್ದು ಶಾಲೆಯಲ್ಲಿ ಕೆಲ ಕುಡುಕರು, ಪುಂಡರು ಶಾಲೆಯ ಬಾಗಿಲು ಮುರಿದು ಎಣ್ಣೆ ಪಾರ್ಟಿ ಮಾಡಿದ್ದಾರೆ. ಜ್ಞಾನ ದೇಗುಲದಲ್ಲಿ ಈ ರೀತಿಯ ವರ್ತನೆ ಬಗ್ಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಶಾಲೆ ಅಂದರೆ ಅದು ದೇವಾಲಯ ಎನ್ನುತ್ತಾರೆ, ಆದರೆ ಇಲ್ಲಿ ಕುಡುಕರಿಗೆ ಶಾಲೆಯೇ ಕುಡುಕಾಲಯವಾಗಿದೆ. ಪ್ರತಿದಿನ ಕುಡುಕರಿಗೆ ಪುಂಡರಿಗೆ ಆಶ್ರಯ ತಾಣವಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಕರ್ನಾಟಕ ಪಬ್ಲಿಕ್ ಉರ್ದು ಶಾಲೆಯಲ್ಲಿ ಘಟನೆ ನಡೆದಿದೆ. ಪ್ರತಿದಿನ ಇಲ್ಲಿ ಕುಡುಕರು ಮದ್ಯಪಾನ ಮಾಡಲು ಹಾಗೂ ಹರಟೆ ಹೊಡೆಯಲು ಆಶ್ರಯ ವಾಗಿದೆ. ಇನ್ನೂ ಇದರ ಪಕ್ಕದಲ್ಲಿ ಗ್ರಾಪಂ ಕಚೇರಿ ಹಾಗೂ ಕೊರಟಗೆರೆ ಉಪ ಪೊಲೀಸ್ ಠಾಣೆ ಇದ್ದರೂ ಕೂಡ ಯಾರು ಗಮನಿಸಿಲ್ಲ, ಪೊಲೀಸರು ಇರ್ತಾರೆ ಅನ್ನೋ ಭಯ ಕೂಡ ಇವರಿಗೆ ಇಲ್ಲ ಅನ್ನಿಸುತ್ತೆ ಅಷ್ಟರಮಟ್ಟಿಗೆ ಶಾಲೆಯನ್ನ ಮದ್ಯವ್ತಸನಿಗಳು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಪ್ರಮುಖವಾಗಿ ಶಾಲೆಯ ಬಾಗಿಲು ಮುರಿದು ಕಾಂಪೌಂಡ್ ನಲ್ಲಿ ಮದ್ಯ ಸೇವನೆ ಕಂಡುಬಂದಿದೆ. ಸದ್ಯ ಈ ಬಗ್ಗೆ ಇನ್ನಾದರೂ ಬ್ರೇಕ್ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಶೀದಿ ನೀಡದೆ ಪೊಲೀಸರ ಕಳ್ಳಾಟ ತುಮಕೂರು: ವಾಹನ ತಪಾಸಣೆ ನೆಪದಲ್ಲಿ ಹೈವೆ ಪೆಟ್ರೋಲ್ ಪೊಲೀಸರು ವಸೂಲಿಗಿಳಿದಿದ್ದಾರೆ. ತುಮಕೂರು ಜಿಲ್ಲೆ ಶಿರಾ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಪ್ರತಿ ವಾಹನ ಸವಾರರ ಬಳಿ ರಸೀದಿ ಕೊಡದೇ 500, ಸಾವಿರ ಹಣ ವಸೂಲಿ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಹಾಗೂ ಗೂಡ್ಸ್ ವಾಹನಗಳನ್ನ ತಡೆದು ಪೊಲೀಸರಿಂದಲೇ ಹಗಲು ದರೋಡೆ ನಡೆಯುತ್ತಿದೆ. ಕೇಸ್ ಹಾಕೋ ಬದಲು ರಸೀದಿ ಕೊಡದೇ ಹಣ ಪಡೆದು ಸವಾರರನ್ನು ಕಳಿಸುತ್ತಿದ್ದಾರೆ. ಪೊಲೀಸರು ರಸೀದಿ ಕೊಡದೇ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಹನ ತಪಾಸಣೆ ಮಾಡೋ ನೆಪದಲ್ಲಿ ಪ್ರತಿನಿತ್ಯ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.
ಇದನ್ನೂ ಓದಿ: ಸ್ವಲ್ಪದರಲ್ಲೇ ತಪ್ಪಿತು ದೊಡ್ಡ ದುರಂತ; ಹಳಿ ಬಿಟ್ಟು ಪ್ಲಾಟ್ಫಾರ್ಮ್ ಮೇಲೆ ನುಗ್ಗಿದ ರೈಲು, ನೀರಿನ ಅಂಗಡಿ ಧ್ವಂಸ
Petrol Price Today: ಸ್ಥಿರವಾಗಿದೆ ಪೆಟ್ರೋಲ್, ಡೀಸೆಲ್ ದರ; ಭಾರತದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆ ಹೀಗಿದೆ
Published On - 11:21 am, Mon, 25 April 22