AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಲ್ಪದರಲ್ಲೇ ತಪ್ಪಿತು ದೊಡ್ಡ ದುರಂತ; ಹಳಿ ಬಿಟ್ಟು ಪ್ಲಾಟ್​ಫಾರ್ಮ್​​ ಮೇಲೆ ನುಗ್ಗಿದ ರೈಲು, ನೀರಿನ ಅಂಗಡಿ ಧ್ವಂಸ

ಲೋಕೋ ಕ್ಯಾಬಿನ್​​ನಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡಿತು. ಹೀಗಾಗಿ ಬ್ರೇಕ್​ ಫೇಲ್ ಆಯಿತು ಎಂದು ಲೋಕೋಪೈಲಟ್​ ಹೇಳಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ತನಿಖೆ ನಡೆಯಲಿದೆ ಎಂದು ಪಿಆರ್​ಒ ತಿಳಿಸಿದ್ದಾರೆ.

ಸ್ವಲ್ಪದರಲ್ಲೇ ತಪ್ಪಿತು ದೊಡ್ಡ ದುರಂತ; ಹಳಿ ಬಿಟ್ಟು ಪ್ಲಾಟ್​ಫಾರ್ಮ್​​ ಮೇಲೆ ನುಗ್ಗಿದ ರೈಲು, ನೀರಿನ ಅಂಗಡಿ ಧ್ವಂಸ
ಪ್ಲಾಟ್​ಫಾರ್ಮ್​ಗೆ ಡಿಕ್ಕಿ ಹೊಡೆದ ರೈಲು
TV9 Web
| Edited By: |

Updated on:Apr 25, 2022 | 10:38 AM

Share

ಲೋಕಲ್​ ಟ್ರೇನ್​ವೊಂದು ಪ್ಲಾಟ್​ಫಾರ್ಮ್​​​ಗೆ ನುಗ್ಗಿ, ಅದರ ತುದಿಯಲ್ಲಿ ಇದ್ದ ಬಫರ್​​ಗೆ ಡಿಕ್ಕಿ ಹೊಡೆದ ಘಟನೆ ಚೆನ್ನೈನ ಬೀಚ್​ ರೈಲ್ವೆ ಸ್ಟೇಶನ್​​ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಪ್ಲಾಟ್​ಫಾರ್ಮ್​​ನ ಮೇಲಿದ್ದ ಐಆರ್​ಸಿಟಿಸಿಗೆ ಸೇರಿದ ನೀರು ಮಾರಾಟ ಅಂಗಡಿಗೆ ಹಾನಿಯಾಗಿದೆ. ಅಂದಹಾಗೇ, ಇದೊಂದು ಸಬ್​ಅರ್ಬನ್​ (ಅಲ್ಲೇ ಸ್ಥಳೀಯವಾಗಿ ಸಂಚರಿಸುವ) ರೈಲಾಗಿದ್ದು, ಘಟನೆ ನಡೆದಾಗ ಅದರೊಳಗೆ ಪ್ರಯಾಣಿಕರು ಇರಲಿಲ್ಲ. ಆದರೆ ಪ್ಲಾಟ್​ಫಾರ್ಮ್​ ಮೇಲೆ ಒಂದಷ್ಟು ಮಂದಿ ನಿಂತಿದ್ದರು ಎಂದು ವರದಿಯಾಗಿದೆ.  ಇದೊಂದು ಎಲೆಕ್ಟ್ರಿಕಲ್​ ಮಲ್ಟಿಪಲ್​ ಯುನಿಟ್​ ಆಗಿದ್ದು,  ಬೀಚ್​ ಸ್ಟೇಶನ್​​ನಿಂದ ಹೊರಟ ಸಂದರ್ಭದಲ್ಲಿ ರೈಲಿನಲ್ಲಿ ವಿದ್ಯುತ್​ ಅಡಚಣೆಯುಂಟಾಗಿ ಬ್ರೇಕ್​ ಫೇಲ್​ ಆಗಿದ್ದರಿಂದ ಹೀಗಾಯಿತು. ಸಂಜೆ ಸುಮಾರು 4.25ರ ಹೊತ್ತಿಗೆ ಘಟನೆ ನಡೆದಿದೆ. ಲೋಕೋ ಪೈಲಟ್ ಶಂಟರ್ ಶಂಕರ್ ಎಂಬುವರು ರೈಲು ಚಾಲನೆ ಮಾಡುತ್ತಿದ್ದರು ಎಂದು ರೈಲ್ವೆ ಪೊಲೀಸ್​ ತಿಳಿಸಿದ್ದಾರೆ.

ಈ ರೈಲು  ಬೀಚ್​ ಸ್ಟೇಶನ್​​ನಿಂದ  ಚೆಂಗಲ್ಪಟ್ಟುವಿಗೆ ಹೋಗಬೇಕಿತ್ತು. ಸಂಜೆ 4.35ರ ಹೊತ್ತಿಗೆ ಬೀಚ್​ ಸ್ಟೇಶನ್​​ ಬಿಡಬೇಕಿತ್ತು. ಹಾಗೇ, ರೈಲು ನಿಧಾನಕ್ಕೆ ಚಲಿಸುತ್ತಿತ್ತು. ಪ್ಲಾಟ್​ಫಾರ್ಮ್​ನ ತುತ್ತತುದಿಗೆ ಹೋಗುವಷ್ಟರಲ್ಲಿ ಲೋಕೊ ಪೈಲಟ್​ ಶಂಕರ್​ ನಿಯಂತ್ರಣ ಕಳೆದುಕೊಂಡರು. ಒಮ್ಮೆಲೇ ರೈಲಿನ ವೇಗ ಜಾಸ್ತಿ ಆಗಿ ಪ್ಲಾಟ್​ಫಾರ್ಮ್​ಗೆ ಹೊಡೆಯಿತು. ಹೀಗಾಗಿ ರೈಲಿನ ಮೊದಲ ಕೋಚ್​ (ಮೋಟಾರ್​ ಕೋಚ್​) ಪ್ಲಾಟ್​ಫಾರ್ಮ್​​ ಮೇಲೆ ಹತ್ತಿತು. ಟ್ರೇಲರ್​ ಕೋಚ್​ ಪ್ಲಾಟ್​ಫಾರ್ಮ್​ ಗೋಡೆಗೆ ಹೊಡೆಯಿತು. ಶಂಕರ್​ ರೈಲಿನಿಂದ ಜಿಗಿದು ಪಾರಾದರು. ಅವರಿಗೆ ಯಾವುದೇ ಗಾಯವಾಗಿಲ್ಲ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆ ನಡೆದ ಬಳಿಕ ರೈಲು ಸಂಚಾರದಲ್ಲಿ ಅಡಚಣೆಯಾಗಿಲ್ಲ. ಎಂದಿನಂತೆ ರೈಲು ಸಂಚಾರ ನಡೆದಿದೆ. ಲೋಕೋ ಕ್ಯಾಬಿನ್​​ನಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಂಡಿತು. ಹೀಗಾಗಿ ಬ್ರೇಕ್​ ಫೇಲ್ ಆಯಿತು ಎಂದು ಲೋಕೋಪೈಲಟ್​ ಹೇಳಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ತನಿಖೆ ನಡೆಯಲಿದೆ. ಹಾಗೇ, ಬೀಚ್​ ಸ್ಟೇಶನ್​​ನಲ್ಲಿ ಹಾಳಾದ ಪ್ಲಾಟ್​ಫಾರ್ಮ್​ ರಿಪೇರಿ ಕಾರ್ಯವೂ ನಡೆಯುತ್ತಿದೆ ಎಂದು ದಕ್ಷಿಣ ರೈಲ್ವೆ ಚೆನ್ನೈ ವಿಭಾಗದ ಪಿಆರ್​ಒ ಎಲುಮಲೈ ತಿಳಿಸಿದ್ದಾರೆ.  ನಿನ್ನೆ ಭಾನುವಾರ ಆಗಿದ್ದರಿಂದ ಜನರೂ ಕಡಿಮೆಯಿದ್ದರು. ಆದರೆ ಬೇರೆ ವಾರಗಳಲ್ಲಿ ಪ್ಲಾಟ್​ಫಾರ್ಮ್​​ನಲ್ಲಿ, ಅದರಲ್ಲೂ ಐಆರ್​ಸಿಟಿಸಿಯ ನೀರಿನ ಅಂಗಡಿ ಬಳಿ ತುಂಬ ಜನ ಇರುತ್ತಾರೆ. ಅಪಘಾತ ಆಗುವ ಸಂದರ್ಭದಲ್ಲಿ ರೈಲು ತುಂಬ ನಿಧಾನವಾಗಿ ಸಂಚರಿಸುತ್ತಿತ್ತು ಎಂದು ಘಟನೆ ವೇಳೆ ಸ್ಥಳದಲ್ಲಿದ್ದ ಜನರು ಹೇಳಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Stock Market Updates: ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್, ನಿಫ್ಟಿ ತಲ್ಲಣ; ಟಾಟಾ ಸ್ಟೀಲ್ ಷೇರು ತಲಾ 50 ರೂ. ಕುಸಿತ

Published On - 10:37 am, Mon, 25 April 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್