ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕಲ್ಲುಗಣಿಗಾರಿಕೆ; ಕ್ರಷರ್ ನಿಲ್ಲಿಸುವಂತೆ ಗ್ರಾಮಸ್ಥರ ಒತ್ತಾಯ

ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕಲ್ಲುಗಣಿಗಾರಿಕೆ; ಕ್ರಷರ್ ನಿಲ್ಲಿಸುವಂತೆ ಗ್ರಾಮಸ್ಥರ ಒತ್ತಾಯ
ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕಲ್ಲುಗಣಿಗಾರಿಕೆ

ಇನ್ನೂ ಈ ಜಾಗ ಸರ್ಕಾರದ್ದು, ಕೋಳಘಟ್ಟ ಗ್ರಾಮದ ಸುತ್ತಮುತ್ತಲಿನ ಒಟ್ಟು ಎಂಟು ಹತ್ತು ಗ್ರಾಮದ ಜನರು ಗುಡಿ ಕೈಗಾರಿಕೆ ಮಾಡಿಕೊಂಡು ಜೀವನ ಮಾಡ್ತಿದ್ದಾರೆ. ಆದರೆ ಸದ್ಯ ಜಿಲ್ಲಾಡಳಿತ ನಡೆಸುತ್ತಿರುವ ಈ ಕ್ರಷರ್ ನಿಂದ ಗ್ರಾಮದಲ್ಲಿ ಕಲುಷಿತ ನೀರು ಬರ್ತಿದೆ. -ಗ್ರಾಮಸ್ಥರ ಅಳಲು

TV9kannada Web Team

| Edited By: Ayesha Banu

Apr 25, 2022 | 9:56 AM

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಳಘಟ್ಟದಲ್ಲಿ ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ಗುತ್ತಿಗೆದಾರ ರಾಜುಗೌಡ ಎನ್ನುವವರು ನಿಯಮವನ್ನು ಗಾಳಿಗೆ ತೂರಿ ಕ್ರಷರ್ ನಡೆಸುತ್ತಿದ್ದಾರೆ. ಕೋಳಘಟ್ಟ, ಸೋಮಲಾಪುರ, ಗೊಲ್ಲರಹಟ್ಟಿ, ಮುದ್ನಾಪುರ ಗ್ರಾಮದಲ್ಲಿ ಕ್ರಷರ್ನಿಂದಾಗಿ ದೇವಸ್ಥಾನ, ಮನೆಗಳು ಬಿರುಕು ಬಿಟ್ಟಿವೆ. ಗ್ರಾಮದಲ್ಲಿ ಹಲವು ದನಕರುಗಳು ಮೃತಪಟ್ಟಿವೆ. ಕೋಳಘಟ್ಟ ಗ್ರಾಮಸ್ಥರು ಕ್ರಷರ್ ಬ್ಲಾಸ್ಟ್ನಿಂದ ಕಂಗೆಟ್ಟು ಹೋಗಿದ್ದಾರೆ.

ಇಲ್ಲಿ ರೈತರು ನಿತ್ಯ ಜೀವಭಯದಿಂದ ಬದುಕುತ್ತಿದ್ದಾರೆ. ಏಕೆಂದರೆ ತೋಟಕ್ಕೆ, ಗದ್ದೆಗೆ ಹೋದರೆ ಅಲ್ಲಿ ಕ್ರಷರ್ ಕಲ್ಲಿನ ದಾಳಿ ಆಗುತ್ತಿದೆ. ಹೀಗಾಗಿ ಕ್ರಷರ್ ಹೋಗುವ ದಾರಿಯಲ್ಲಿ ಶಾಮಿಯಾನ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಆದ್ರೆ ಕ್ರಷರ್ ವಿರುದ್ಧ ಪ್ರತಿಭಟನೆ ನಡೆಸಿದವರಿಗೆ ಪೊಲೀಸರಿಂದ ಪ್ರತಿ ನಿತ್ಯ ದೌರ್ಜನ್ಯವಾಗುತ್ತಿದೆ. ಪ್ರತಿಭಟನೆ ನಡೆಸಿದವರನ್ನು ಪೊಲೀಸರು ಬಂಧಿಸಿದ್ದಾರೆ. ದಂಡಿನ ಶಿವರ ಠಾಣಾ ಪೊಲೀಸರ ದೌರ್ಜನ್ಯದಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದು ಇತರೇ ಅಪರಾಧ ಕೃತ್ಯ ತಡೆಯಲು ಆಸಕ್ತಿ ತೋರದ ಪೊಲೀಸರು ಕ್ರಷರ್ ಕಾವಲಿನ ಮೇಲೆ ಅತಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ 10 ದಿನದಿಂದ ನೂರಾರು ಪೊಲೀಸರು ಕ್ರಷರ್ಗೆ ಕಾವಲು ಕಾಯುತ್ತಿದ್ದಾರೆ. ಕ್ರಷರ್ ಕಾವಲಿಗೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಪ್ರತಿಭಟನೆ ನಡೆಸಿದ ರೈತ ಮಹಿಳೆಯರನ್ನೂ ಪೊಲೀಸರು ಬಂಧಿಸಿದ್ದಾರೆ. ಕ್ರಷರ್ ಮಾಲೀಕರಿಗಿಂತ ಪೊಲೀಸರ ದೌರ್ಜನ್ಯದಿಂದ ನಾವು (ಗ್ರಾಮಸ್ಥರು) ನೊಂದಿದ್ದೇವೆ. ಕಳೆದ ಮೂರು ತಿಂಗಳ ಹಿಂದೆ ಆರಂಭವಾದ ಕ್ರಷರ್ ವಿರುದ್ಧ ಪ್ರತಿಭಟನೆ ನಡೆಸಿದರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನೂ ಈ ಜಾಗ ಸರ್ಕಾರದ್ದು, ಕೋಳಘಟ್ಟ ಗ್ರಾಮದ ಸುತ್ತಮುತ್ತಲಿನ ಒಟ್ಟು ಎಂಟು ಹತ್ತು ಗ್ರಾಮದ ಜನರು ಗುಡಿ ಕೈಗಾರಿಕೆ ಮಾಡಿಕೊಂಡು ಜೀವನ ಮಾಡ್ತಿದ್ದಾರೆ. ಆದರೆ ಸದ್ಯ ಜಿಲ್ಲಾಡಳಿತ ನಡೆಸುತ್ತಿರುವ ಈ ಕ್ರಷರ್ ನಿಂದ ಗ್ರಾಮದಲ್ಲಿ ಕಲುಷಿತ ನೀರು ಬರ್ತಿದೆ. ಮನೆಗಳು ಬಿರುಕು ಬಿಟ್ಟಿವೆ. ವೃದ್ದರು ಮಹಿಳೆಯರು ಮಕ್ಕಳು ಬದುಕಲು ಆಗ್ತಿಲ್ಲ. ತೀವ್ರ ಆರೋಗ್ಯ ದಲ್ಲಿ ಏರುಪೇರಾಗುತ್ತಿದೆ. ಅಲ್ಲದೇ ಕ್ರಷರ್ ಸುತ್ತಲೂ ಇರುವ ಬೆಳಗಳ ಮೇಲೆ ಕ್ರಷರ್ ದೂಳು ಬೀಳುತ್ತಿದ್ದು ಬೆಳೆಗಳು ಹಾಳಾಗುತ್ತಿವೆ. ಜಾನುವಾರುಗಳು ಮೇಯಲು ಆಗ್ತಿಲ್ಲ. ಜಾನುವಾರುಗಳು ಕೂಡ ಕ್ರಷರ್ ಬ್ಲಾಸ್ಟ್ ಗೆ ಬೆದರುತ್ತಿವೆ. ಇದು ಕಳೆದ ಮೂರ್ನಾಲ್ಕು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದ್ದು, ಕೇಳಲು ಹೋದ ಗ್ರಾಮದ ರೈತರನ್ನ ಹಾಗೂ ಮಹಿಳೆಯರನ್ನ ಪೊಲೀಸರು ಹಿಡಿದು ಬೆದರಿಸಿ ಕಳಿಸುತ್ತಿದ್ದಾರೆ. ಕೂಡಲೇ ಕ್ರಷರ್ ನಿಲ್ಲಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್​ನಿಂದ ಗಲಾಟೆ ಪ್ರಕರಣ; ಮತ್ತೆ ಇಬ್ಬರು ಅರೆಸ್ಟ್!

Coronavirus: ರಾಜ್ಯದಲ್ಲಿ ಕೊವಿಡ್ ಪರಿಸ್ಥಿತಿ ಪರಿಶೀಲನೆ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಭೆ

Follow us on

Related Stories

Most Read Stories

Click on your DTH Provider to Add TV9 Kannada