
ಬೆಂಗಳೂರು, ಮೇ 20: ಆನ್ಲೈನ್ ಔಷಧ ಮಾರಾಟ, ಆನ್ಲೈನ್ ಮೂಲಕ ಔಷಧಗಳಿಗೆ ಭಾರಿ ರಿಯಾಯಿತಿ ನೀಡುವುದದನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ಇಂದು (ಮೇ 20) ಮೆಡಿಕಲ್ ಬಂದ್ (Medical Bandh) ಮಾಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಔಷಧ ವ್ಯಾಪಾರಿಗಳು ಮೆಡಿಕಲ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಬೆಳಗ್ಗೆ 11:00 ಗಂಟೆಗೆ ಡಿ ಸಿ ಕಚೇರಿ ಎದುರು ಪ್ರತಿಭಟನೆಗೆ ಪಕ್ಷದ ವ್ಯಾಪಾರಿಗಳು ಮುಂದಾಗಿದ್ದಾರೆ.
ಕೋಲಾರದಲ್ಲೊಂದು ಅಚ್ಚರಿಯ ವಿದ್ಯಮಾನ ನಡೆದಿದೆ. ಸುಮಾರು 34 ವರ್ಷಗಳ ಹಿಂದಿನ ಕಳ್ಳತನ ಕೇಸ್ ಸಂಬಂಧ ಆರೋಪಿ ರವಿ (62) ಎಂಬಾತನನ್ನು ಉರಿಗಾಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೋರ್ಟ್ಗೆ ಹಾಜರಾಗದೆ ಬೆಂಗಳೂರಿನ ನಿರಾಶ್ರಿತರ ಕೇಂದ್ರದಲ್ಲಿದ್ದ. 1992ರಲ್ಲಿ ಹಲವು ಕಳ್ಳತನ ಕೇಸ್ಗಳಲ್ಲಿ ಶಾಮೀಲಾಗಿದ್ದ.
ಇಂದಿನಿಂದ ದೆಹಲಿಯಲ್ಲಿ ವಾರದಲ್ಲಿ 2 ದಿನ ವರ್ಕ್ ಫ್ರಮ್ ಹೋಂ ನೀತಿ ಜಾರಿಗೊಳಿಸಲಾಗಿದೆ. ಸರ್ಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗೆ ವರ್ಕ್ ಫ್ರಮ್ ಹೋಂ ನೀಡಲಾಗಿದ್ದು ಪ್ರತಿ ಬುಧವಾರ, ಶನಿವಾರ ಅವರು ಮನೆಯೊಂದಲೇ ಕೆಲಸ ಮಾಡಲಿದ್ದಾರೆ. ಆರೋಗ್ಯ ಇಲಾಖೆ ಸೇರಿ ಕೆಲ ತುರ್ತು ಸೇವೆಯ ಇಲಾಖೆಗಳು ಬಿಟ್ಟು ಉಳಿದ ಸರ್ಕಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿಗೆ ಈ ನಿಯಮ ಅನ್ವಯವಾಗಲಿದೆ. ಪೆಟ್ರೋಲ್, ಡೀಸೆಲ್ ಮಿತಬಳಕೆಗೆ ಪ್ರಧಾನಿ ಮೋದಿ ಕರೆ ಹಿನ್ನೆಲೆ ದೆಹಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಶಾಲೆಗಳ ಶುಲ್ಕ ಈಗಾಗಲೇ ಏರಿಕೆಯಾಗಿದೆ. ಶಾಲಾ ವಾಹನಗಳ ಬೆಲೆ ಏರಿಕೆಯೂ ಆಗಿದೆ. ಈಗ ಶಾಲೆಗಳ ಆರಂಭಕ್ಕೂ ಮೊದಲೇ ಪೋಷಕರಿಗೆ ಮತ್ತೊಂದು ಆಘಾತ ಎದುರಾಗಿದೆ. ನೋಟ್ಸ್ ಬುಕ್, ವರ್ಕ್ ಬುಕ್, ವರ್ಕ್ ಬುಕ್ ಪೇಪರ್ ಗಳ ಬೆಲೆ ಶೇ 20-25 ಏರಿಕೆಯಾಗಿದ್ದು ಪೋಷಕರನ್ನು ಕಂಗಾಲಾಗಿಸಿದೆ.
ಮೇ 25ರ ಬಳಿಕ ಕರ್ನಾಟಕ ಬಿಜೆಪಿಯಲ್ಲಿ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದಾಗ್ಯೂ ಪಕ್ಷದ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಮತ್ತಷ್ಟು ಓದಿ: ಮೇ 25ರ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹಾ ಬದಲಾವಣೆ? ವಿಜಯೇಂದ್ರ ಪಟ್ಟ ಭದ್ರ; ಕೋರ್ ಕಮಿಟಿ ಪುನಾರಚನೆ ಸಾಧ್ಯತೆ!
ನಮ್ಮ ಮೆಟ್ರೋ ಪಿಲ್ಲರ್ಗಳನ್ನು ವಾಣಿಜ್ಯ ಮತ್ತು ಡಿಜಿಟಲ್ ಜಾಹೀರಾತುಗಳಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಈಗ ಮೆಗಾ ಟೆಂಡರ್ ಆಹ್ವಾನಿಸಿದೆ. ಪಿಲ್ಲರ್ಗಳಲ್ಲಿ ಡಿಜಿಟಲ್ ಜಾಹೀರಾತಿಗೆ ಅವಕಾಶ ಕೊಡುವ ಮೂಲಕ ಟಿಕೆಟ್ ಹೊರತಾದ ಆದಾಯ ಹೆಚ್ಚಿಸಿಕೊಳ್ಳಲು ಬಿಎಂಆರ್‌ಸಿಎಲ್ ಮುಂದಾಗಿದೆ. ಆದರೆ, ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಮತ್ತಷ್ಟು ಓದಿ: ನಮ್ಮ ಮೆಟ್ರೋ ಪಿಲ್ಲರ್ಗಳ ಮೇಲೆ ಇನ್ಮುಂದೆ ಡಿಜಿಟಲ್ ಜಾಹೀರಾತುಗಳ ಅಬ್ಬರ: ಸಾರ್ವಜನಿಕರಿಂದ ಆಕ್ರೋಶ
ಬಿಎಂಆರ್ಸಿಎಲ್ನ ಈ ನಿರ್ಧಾರದಿಂದ ನಗರದ ಸೌಂದರ್ಯ ಹಾಳಾಗಲಿದೆ. ರಾತ್ರಿ ವೇಳೆ ವಾಹನ ಅಪಘಾತಗಳಿಗೂ ಕಾರಣವಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:26 am, Wed, 20 May 26