ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಬೈರೆ ಗ್ರಾಮದ ಬಳಿ ಕಾರೊಂದು ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾದ ಪರಿಣಾಮ ಇಬ್ಬರು ಮೃತಪಟ್ಟು ಐವರು ಗಾಯಗೊಂಡಿದ್ದಾರೆ. ಬೆಂಗಳೂರು ಮೂಲದವರು ಪ್ರಯಾಣಿಸುತ್ತಿದ್ದ ಕಾರು ಬೈರೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಸೈಯದ್(35) ಮತ್ತು ತಾಯವ್ವ ದುರ್ಮರಣಕ್ಕೀಡಾಗಿದ್ದಾರೆ. ಇನ್ನುಳಿದ ಐವರಿಗೆ ಗಾಯಗಳಾಗಿದ್ದು, ಉತ್ತರ ಕನ್ನಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ಹಳಗಾ ಗ್ರಾಮದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆಗೆ ಯತ್ನ
ಬೆಂಗಳೂರು: ನಗರದ ಶಾಂತಿನಗರ ರುದ್ರಭೂಮಿಯ ಬಳಿ ಹಾಡಹಗಲೇ 10 ಜನರ ಗ್ಯಾಂಗ್ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಅರುಣ್ ಎಂಬ ವ್ಯಕ್ತಿಯ ಮೇಲೆ ಪುಡಾರಿಗಳ ಗ್ಯಾಂಗ್ ದಾಳಿ ಮಾಡಿದ್ದು, ಲಾಂಗು, ಮಚ್ಚು ಹಿಡಿದು ಹಲ್ಲೆ ನಡೆಸಿದೆ. ಹಲ್ಲೆ ಪರಿಣಾಮ ಅರುಣ್ ಗಾಯಗೊಂಡಿರುವರಾದರೂ ಸರಿಯಾದ ಸಮಯದಲ್ಲಿ ಸ್ಥಳಕ್ಕೆ ಆ್ಯಂಬುಲೆನ್ಸ್ ಬಾರದ ಕಾರಣ ಪೊಲೀಸರು ಹೊಯ್ಸಳ ವಾಯನದಲ್ಲಿಯೇ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಮೂರು ತಿಂಗಳ ಬಳಿಕ ಬಲೆಗೆ ಬಿದ್ದ ಸುಲಿಗೆಕೋರರು
ಬೆಂಗಳೂರು: ನಗರದ ಭಾರತಿಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಸುಲಿಗೆಕೋರರನ್ನು ಬಂಧಿಸಲಾಗಿದೆ. ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 3 ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದ್ದು, ಅಪ್ಸರ್ ಪಾಷಾ, ಸೈಯದ್ ತೌಸಿಫ್, ಮೊಹಮ್ಮದ್ ಅಲಿ, ಮೊಹಮ್ಮದ್ ಅಜರುಲ್ಲಾ ಎಂಬ ಸುಲಿಗೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಸುಲಿಗೆಕೋರರನ್ನು ಬೆನ್ನತ್ತಿದ ಪೊಲೀಸರು ಬಂಧಿತರಿಂದ 4 ಲಕ್ಷ ನಗದು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:
ಚಿಕ್ಕಬಳ್ಳಾಪುರ, ರಾಯಚೂರಿನಲ್ಲಿ ಅಪಘಾತ: ನಾಲ್ವರ ಸಾವು
ತಮ್ಮನನ್ನು ಮದುವೆಯಾಗಲು ಒಪ್ಪದ ಪದವೀಧರ ಯುವತಿಯರು; ಇಬ್ಬರ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ
(Two killed and Five injured in an car accident near Karwar)