ಉಡುಪಿ: ಕಾರಿನೊಳಗೆ ಪೆಟ್ರೋಲ್ (Petrol) ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ಸಂಭವಿಸಿದೆ. ಯಶವಂತ್ (23) ಮತ್ತು ಜ್ಯೋತಿ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವ ಜೋಡಿ. ಇವರು ಬೆಂಗಳೂರಿನ ಆರ್.ಟಿ.ನಗರದವರು ಎಂದು ತಿಳಿದುಬಂದಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಸುಡುತ್ತಿದ್ದ ಕಾರು ಪತ್ತೆಯಾಗಿದೆ. ಸ್ಥಳೀಯರು ಬೆಂಕಿ ನಂದಿಸಿದಾಗ ಕಾರಿನೊಳಗೆ ಯುವಕ, ಯುವತಿ ಶವ ಪತ್ತೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಮೃತರು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಮೃತರು ನಿನ್ನೆ (ಮೇ 21) ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರು ಬಾಡಿಗೆ ಪಡೆದಿದ್ದರು. ಕಾರು ಬಾಡಿಗೆ ಪಡೆದು ಉಡುಪಿಗೆ ಬಂದಿದ್ದರು. ಕಳೆದ 3 ದಿನಗಳ ಹಿಂದೆ ಯಶವಂತ್ ಮತ್ತು ಜ್ಯೋತಿ ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ವಿಫ್ಟ್ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಮೃತರು ನಿನ್ನೆ ಕಾರು ಪಡೆದು ಮಂಗಳೂರಿನ ಬೀಚ್ನಲ್ಲಿ ಸುತ್ತಿದ್ದಾರೆ. ಬೀಚ್ನಲ್ಲಿ ಸುತ್ತಾಡಿದ್ದ ಪೋಟೋ ಟಿವಿ9ಗೆ ಲಭ್ಯವಾಗಿದೆ.
ಇದನ್ನೂ ಓದಿ: ಇಂದು ದಾವೋಸ್ ಪ್ರಯಾಣ ಬೆಳಸಿರುವ ಸಿಎಂ ಬೊಮ್ಮಾಯಿ, ಎರಡು ದಿನಗಳ ಕಾಲ ನಡೆಯುವ ಆರ್ಥಿಕ ಸಮಾವೇಶದಲ್ಲಿ ಭಾಗಿ
ಯಶವಂತ್ ಮತ್ತು ಜ್ಯೋತಿ ಇದೇ ತಿಂಗಳು 18ರ ಮಧ್ಯಾಹ್ನ ಮನೆಯಿಂದ ತೆರಳಿದ್ದಾರೆ. ಜ್ಯೋತಿ ಚೋಳನಾಯಕನಹಳ್ಳಿ ನಿವಾಸಿಯಾಗಿದ್ದಾರೆ, ಯಶವಂತ್ ಯಾದವ್ ಮುನಿಯಪ್ಪ ಲೇಔಟ್ ನಿವಾಸಿ. ಮೇ 19 ರಂದು ಹುಡುಗಿ ಪೋಷಕರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಇನ್ನು ಯುವಕನ ಪೋಷಕರು ಮೇ 20ಕ್ಕೆ ದೂರು ದಾಖಲಿಸಿದ್ದರು. ಜ್ಯೋತಿ ಇಂಟರ್ವ್ಯೂಗೆ ಹೋಗಿ ಬರುವುದಾಗಿ ಹೇಳಿ ಮನೆಗೆ ಬಂದಿಲ್ಲ. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಮಗಳು ಸಿಗಲಿಲ್ಲ ಎಂದು ಯುವತಿ ತಾಯಿ ರತ್ನಮ್ಮ ದೂರು ನೀಡಿದ್ದರು. ಯುವಕನ ತಂದೆ ವೆಂಕಟರಮಣ ರಾವ್, ಮಗ ಬೈಕ್ನಲ್ಲಿ ಟ್ಯಾಲಿಕ್ಲಾಸ್ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ. ಆದರೆ ಇನ್ನು ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಆತ್ಮಹತ್ಯೆಗೂ ಮೊದಲು ಮನೆಗೆ ಮೆಸೆಜ್ ಮಾಡಿದ್ದ ಮೃತರು:
ಆತ್ಮಹತ್ಯೆಗೂ ಮುನ್ನಾ ಮೃತರು, ಕುಟುಂಬಸ್ಥರಿಗೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮೆಸೆಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜ್ಯೋತಿ ಒಂದು ವರ್ಷದ ಹಿಂದಷ್ಟೇ ಬಿಕಾಂ ಮುಗಿಸಿದ್ದಳು. ಯಶವಂತ್ ಯಾದವ್ ಪದವಿ ಮುಗಿಸಿ ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದ.
ಇದನ್ನೂ ಓದಿ: ಮದುವೆ ದಿಬ್ಬಣದ ಕ್ರೂಸರ್ ಅಪಘಾತದಲ್ಲಿ 9 ಜನ ಸಾವು ಪ್ರಕರಣ: ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಘೋಷಿಸಿದ ಸಿಎಂ ಬೊಮ್ಮಾಯಿ
ಹುಡುಗಿ ಹಾಗೂ ಹುಡಗನಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದ ಪೋಷಕರು:
ದೂರು ದಾಖಲಾದ ಬಳಿಕ ಪೊಲೀಸರು ಪೋಷಕರನ್ನ ವಿಚಾರಣೆ ನಡೆಸಿದ್ದರು. ಹುಡುಗಿ ಹಾಗೂ ಹುಡಗನಿಗೂ ಯಾವುದೇ ಸಂಬಂಧ ಇಲ್ಲ ಅಂತ ಪೋಷಕರು ಹೇಳಿದ್ದರು. ನಂತರ ಇಬ್ಬರ ಮೊಬೈಲ್ ಸಿಡಿಆರ್ ತೆಗೆದು ಪರೀಶೀಲನೆ ಮಾಡಿದ ವೇಳೆ ಇಬ್ಬರು ನಿರಂತರ ಸಂಪರ್ಕದಲ್ಲಿರೋದು ಗೊತ್ತಾಗಿದೆ. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಕಾಣೆಯಾದ ಬಗ್ಗೆ ಹೆಬ್ಬಾಳ ಪೊಲೀಸರು ಲುಕ್ ಔಟ್ ನೋಟೀಸ್ ಹೊರಡಿಸಿದ್ದರು.
ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಜೋಡಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ತಬ್ಬಿಕೊಂಡ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸದ್ಯ ಎಫ್ಎಸ್ಎಲ್ ತಂಡ ಘಟನಾ ಸ್ಥಳದಲ್ಲಿ ತಪಾಸಣೆ ನಡೆಸುತ್ತಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ ಪೊಲೀಸರಿಂದ ಮಹಜರು ಪ್ರಕ್ರಿಯೆ ನಡೆಯುತ್ತಿದೆ. ಸ್ಥಳ ಮಹಜರು ಬಳಿಕ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಆನ್ಲೈನ್ ಮೂಲಕ ಕಾರು ಪಡೆದ ಜೋಡಿ:
ಯಶವಂತ್, ಜ್ಯೋತಿ ಮಂಗಳೂರಿನಲ್ಲಿ ಬಾಡಿಗೆ ಮನೆ ಪಡೆದಿದ್ದರು. ಮೂರು ದಿನಗಳ ಹಿಂದೆ ಬಾಡಿಗೆ ಮನೆ ಮಾಡಿದ್ದರು. 5,000 ಪಾವತಿಸಿ ಆಧಾರ್ ಕೊಟ್ಟು ಬಾಡಿಗೆ ಕಾರು ಪಡೆದಿದ್ದರು. ಆನ್ ಲೈನ್ ಮೂಲಕ ಕಾರ್ ಬುಕ್ ಮಾಡಿದ್ದರು ಎಂದು ಕಾರು ಮಾಲೀಕ ಹುಸೇನ್ ಮಾಹಿತಿ ನೀಡಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:17 am, Sun, 22 May 22