Child marriage: ಬಾಲ್ಯ ವಿವಾಹಗಳಲ್ಲಿ ಕರ್ನಾಟಕಕ್ಕೆ ಅಗ್ರ ಮಣೆ: ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಕಳೆದ 5 ತಿಂಗಳಲ್ಲಿ 12 ಬಾಲ್ಯ ವಿವಾಹ!

|

Updated on: Nov 03, 2023 | 11:55 AM

Women and Child Welfare: ಸಾಕ್ಷರತೆಯ ತವರೂರು ಉಡುಪಿ ಜಿಲ್ಲೆಯಲ್ಲಿ ಬಹುತೇಕ ಶೂನ್ಯ! 2018ರಿಂದ 2022ರ ನಡುವೆ ಯಾವುದೇ ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿಲ್ಲ. ಆದರೆ ಬಾಲ್ಯ ಮದುವೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದರೂ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಅಂತಹ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿಲ್ಲ ಎಂಬುದು ಖಂಡನಾರ್ಹವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದ್ದಾರೆ.

Child marriage: ಬಾಲ್ಯ ವಿವಾಹಗಳಲ್ಲಿ ಕರ್ನಾಟಕಕ್ಕೆ ಅಗ್ರ ಮಣೆ: ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಕಳೆದ 5 ತಿಂಗಳಲ್ಲಿ 12 ಬಾಲ್ಯ ವಿವಾಹ!
ಬಾಲ್ಯ ವಿವಾಹ: ಕರ್ನಾಟಕ ಅಗ್ರ, ಸಾಕ್ಷರತೆಯ ಉಡುಪಿಯಲ್ಲಿ ಶೂನ್ಯ! ಹೆಬ್ಬಾಳ್ಕರ್ ಕ್ಷೇತ್ರದಲ್ಲಿ 12 ಬಾಲ್ಯ ವಿವಾಹ!
Follow us on

ಉಡುಪಿ, ನವೆಂಬರ್​ 2: ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಬಾಲ್ಯ ವಿವಾಹಗಳು ಕರ್ನಾಟಕದಲ್ಲಿ ಜರುಗಿವೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS5) ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಒದಗಿಸಿದ ಅಂಕಿಅಂಶಗಳಿಂದ ಈ ಆತಂಕಕಾರಿ ಸಂಗತಿ ಬಹಿರಂಗವಾಗಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ತವರು ಬೆಳಗಾವಿಯಲ್ಲಿ 2023ರ ಏಪ್ರಿಲ್ ನಿಂದ ಆಗಸ್ಟ್ ವರೆಗೆ 12 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ (Child marriages in Karnataka).

2030 ರ ವೇಳೆಗೆ ಭಾರತವನ್ನು ಬಾಲ್ಯ ವಿವಾಹಗಳಿಂದ ಮುಕ್ತಗೊಳಿಸುವ ಗುರಿಯೊಂದಿಗೆ ಬಾಲ್ಯ ವಿವಾಹ ನಿಷೇಧ ಕಾಯಿದೆ 2006 ಅನ್ನು ಜಾರಿಗೊಳಿಸಲಾಗಿದೆ. ಇದರ ಹೊರತಾಗಿಯೂ, 2018 ಮತ್ತು 2022 ರ ನಡುವೆ ದೇಶದಲ್ಲಿ 3,524 ಬಾಲ್ಯ ವಿವಾಹಗಳು ನಡೆದಿವೆ. ಗಮನಾರ್ಹವೆಂದರೆ ಮಹಿಳೆಯರ ವಿವಾಹ ವಯೋಮಿತಿಯನ್ನು ಈಗಿರುವ 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆ ಸಂಸತ್ತಿನ ಸ್ಥಾಯಿ ಸಮಿತಿಯ ಮುಂದಿದೆ. ಆದರೂ ಬಾಲ್ಯವಿವಾಹ ಇನ್ನೂ ಚಾಲ್ತಿಯಲ್ಲಿದೆ.

ಕರ್ನಾಟಕದಲ್ಲಿ ಹೆಚ್ಚಳವಾದ ಬಾಲ್ಯ ವಿವಾಹಗಳು:

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 706, ಅಸ್ಸಾಂನಲ್ಲಿ 554, ತಮಿಳುನಾಡಿನಲ್ಲಿ 414, ಪಶ್ಚಿಮ ಬಂಗಾಳದಲ್ಲಿ 390, ಮಹಾರಾಷ್ಟ್ರದಲ್ಲಿ 185 ಬಾಲ್ಯ ವಿವಾಹಗಳು ವರದಿಯಾಗಿವೆ.

ಭಾರತದಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ಪ್ರಕರಣಗಳು

ಕರ್ನಾಟಕದ ಜೊತೆಜೊತೆಗೆ ಅರುಣಾಚಲ ಪ್ರದೇಶ, ಗೋವಾ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಲಡಾಖ್, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್‌ಗಳಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಯಾಗಿದೆ.

ಬಾಲ್ಯ ವಿವಾಹಗಳಿಗೆ ಕಾರಣಗಳು: ಬಡತನ, ಶಿಕ್ಷಣದ ಕೊರತೆ, ಮೂಢನಂಬಿಕೆಗಳು, ಗೊಡ್ಡು ಸಂಪ್ರದಾಯಗಳು ಮತ್ತು ತಪ್ಪು ಕಲ್ಪನೆಗಳು ಬಾಲ್ಯ ವಿವಾಹಗಳಿಗೆ ಕಾರಣಗಳಾಗಿವೆ.

ಸಾಕ್ಷರತೆಯ ತವರೂರು ಉಡುಪಿ ಜಿಲ್ಲೆಯಲ್ಲಿ ಬಹುತೇಕ ಶೂನ್ಯ!

ಆದರೆ, ಬಾಲ್ಯ ವಿವಾಹಗಳ ಸಂಖ್ಯೆ ಕರ್ನಾಟಕದಲ್ಲಿ ಉಡುಪಿ ಜಿಲ್ಲೆಯಲ್ಲಿ ಅತಿ ಕಡಿಮೆ. ಅಂದಹಾಗೆ, ಈ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿರುವವರು ಲಕ್ಷ್ಮೀ ಹೆಬ್ಬಾಳ್ಕರ್.  2018ರಿಂದ 2022ರ ನಡುವೆ ಯಾವುದೇ ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿಲ್ಲ. ಆದರೆ, 2023ರಲ್ಲಿ ಶಿರೂರಿನಲ್ಲಿ ಒಂದು ಬಾಲ್ಯ ವಿವಾಹ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಲ್ಳುವ ಮೂಲಕ ನಾಲ್ಕು ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಎಂದು ಡಾಯಜಿ ವರ್ಲ್ಡ್​​ ವರದಿ ಮಾಡಿದೆ.

ಇದನ್ನೂ ಓದಿ: ಕೋಟಾ ಗ್ರಾಮದ ಬಾಲಕನಿಗೆ 11 ವರ್ಷಕ್ಕೇ ಮದುವೆ, ಆತನೀಗ 6 ತಿಂಗಳ ಹೆಣ್ಣು ಮಗುವಿನ ತಂದೆ, 5ನೇ ಪ್ರಯತ್ನದಲ್ಲಿ NEET ಪರೀಕ್ಷೆಯಲ್ಲಿ ಯಶಸ್ಸು ಕಂಡ!

ಜನರಲ್ಲಿ ಜಾಗೃತಿ ಮೂಡಿಸಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಬೇಕಿದೆ. ಹೆಣ್ಣು ಮಕ್ಕಳ ವಿವಾಹ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಪ್ರಸ್ತಾವನೆಯೂ ಇದಕ್ಕೆ ಇಂಬು ನೀಡಲಿದೆ. ಬಾಲ್ಯ ವಿವಾಹದ ಮೇಲೆ ಗ್ರಾಮ ಪಂಚಾಯಿತಿಗಳು ನಿಗಾ ವಹಿಸಬೇಕು ಮತ್ತು ಅಂತಹ ಕುಟುಂಬಗಳಿಗೆ ಸರ್ಕಾರ ಸೌಲಭ್ಯಗಳನ್ನು ವಿಸ್ತರಿಸುವುದನ್ನು ನಿಲ್ಲಿಸಬೇಕು ಮತ್ತು ಬಾಲ್ಯ ವಿವಾಹ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

2011 ರಿಂದ ದೇಶದಲ್ಲಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಕಡಿತ:

2011 ರ ಜನಗಣತಿ ಪ್ರಕಾರ ದೇಶದಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. 2011ರ ಜನಗಣತಿಯ ಪ್ರಕಾರ ದೇಶದಲ್ಲಿ 1.53 ಕೋಟಿ ಹುಡುಗಿಯರು 18 ವರ್ಷ ತುಂಬುವ ಮುನ್ನವೇ ವಿವಾಹವಾಗಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಲ್ಲಿ 40 % ಮಹಿಳೆಯರು 18 ವರ್ಷಕ್ಕಿಂತ ಮುಂಚೆಯೇ ವಿವಾಹವಾಗಿದ್ದಾರೆ.

ಬಾಲ್ಯ ಮದುವೆಗಳು ನಡೆಯುತ್ತಿದ್ದರೂ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಅಂತಹ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿಲ್ಲ ಎಂಬುದು ಖಂಡನಾರ್ಹವಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಬಾಲ್ಯ ವಿವಾಹದ ಪ್ರಮಾಣವು 2006 ರಲ್ಲಿ ರಾಷ್ಟ್ರೀಯ ಸರಾಸರಿ 47 ಶೇಕಡಾಕ್ಕಿಂತ 10 ಶೇಕಡಾ ಹೆಚ್ಚಾಗಿದೆ ಮತ್ತು 2022 ರಲ್ಲಿ ಶೇಕಡಾ 23.3 ಕ್ಕೆ ಕುಸಿದಿದೆ ಎಂದು ಹೇಳುತ್ತಾರೆ.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ