ವೈರಲ್ ಆಗಿರುವ ಸೂಟ್ಕೇಸ್ ಯುವತಿಯ ವಿಡಿಯೋಗೂ ನಮಗೂ ಸಂಬಂಧವಿಲ್ಲ; ಮಣಿಪಾಲ ವಿವಿ ಸ್ಪಷ್ಟನೆ
ಟ್ವಿಟ್ಟರ್ನಲ್ಲಿ ಹರಿದಾಡುತ್ತಿರುವ ವಿಡಿಯೋ ನಮ್ಮದಲ್ಲ. ಅದು ಫೇಕ್ ವಿಡಿಯೋ ಎಂದು ಮಣಿಪಾಲ ವಿವಿಯ ಮಾಧ್ಯಮ ವಕ್ತಾರ ಸ್ಪಷ್ಟನೆ ನೀಡಿದ್ದಾರೆ.
ಉಡುಪಿ: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸೂಟ್ಕೇಸ್ನಲ್ಲಿ ತನ್ನ ಗೆಳತಿಯನ್ನು ತುಂಬಿಕೊಂಡು ಹಾಸ್ಟೆಲ್ ಒಳಗೆ ಕರೆದೊಯ್ದಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಆ ವಿಡಿಯೋ ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯದ್ದು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಆ ವಿಡಿಯೋ ಮಣಿಪಾಲ ವಿವಿಯ (Manipal University) ಎಂಐಟಿ ಕ್ಯಾಂಪಸ್ನಲ್ಲಿ ನಡೆದಿದ್ದಲ್ಲ ಎಂದು ಮಣಿಪಾಲ ವಿಶ್ವವಿದ್ಯಾಲಯ ಸ್ಪಷ್ಟನೆ ನೀಡಿದೆ. ಟ್ವಿಟ್ಟರ್ನಲ್ಲಿ ಹರಿದಾಡುತ್ತಿರುವ ವಿಡಿಯೋ ನಮ್ಮದಲ್ಲ. ಅದು ಫೇಕ್ ವಿಡಿಯೋ ಎಂದು ಮಣಿಪಾಲ ವಿವಿಯ ಮಾಧ್ಯಮ ವಕ್ತಾರ ಎಸ್ಪಿ ಕರ್ ( S P KAR) ಸ್ಪಷ್ಟನೆ ನೀಡಿದ್ದಾರೆ.
2019ರ ಮಾ. 20ರಲ್ಲಿ ಅಪ್ಲೋಡ್ ಆಗಿದ್ದ ಆ ವಿಡಿಯೋ ಈಗ ಮತ್ತೆ ವೈರಲ್ ಆಗಿದೆ. ಅದು ಮಣಿಪಾಲ ವಿವಿಯದಲ್ಲ. ಆ ವೈರಲ್ ವೀಡಿಯೋ ಮಣಿಪಾಲದ್ದಲ್ಲ. ಅದು ಡೆಹ್ರಾಡೂನ್ ಹಾಸ್ಟೆಲ್ ಒಂದರಲ್ಲಿ ನಡೆದ ಘಟನೆಯಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋದಲ್ಲಿರುವ ಹಾಸ್ಟೆಲ್ ಗೇಟ್ ಮಣಿಪಾಲದ ಕ್ಯಾಂಪಸ್ಸಿಗೆ ಹೋಲಿಕೆಯಾಗುವುದರಿಂದ ಅದು ಇಲ್ಲಿಯದ್ದೇ ವಿಡಿಯೋ ಎಂದು ಟ್ವಿಟ್ಟರ್ನಲ್ಲಿ ಟ್ರೆಂಡ್ ಮಾಡಲಾಗಿತ್ತು. ಆದರೆ ಈ ವಿಡಿಯೋಗೂ ಮಣಿಪಾಲದ ಕ್ಯಾಂಪಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ಮಣಿಪಾಲ ವಿವಿ ಸ್ಪಷ್ಟಪಡಿಸಿದೆ.
ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ತನ್ನ ಗೆಳೆತಿಯನ್ನು ಹಾಸ್ಟೆಲ್ನೊಳಗೆ ಕರೆದುಕೊಂಡು ಹೋಗಲು ಬ್ಯಾಗ್ನೊಳಗೆ ತುಂಬಿಕೊಂಡಿದ್ದ. ಹಾಸ್ಟೆಲ್ ಗೇಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಂದ ತಪಾಸಣೆ ನಡೆದಾಗ ಈ ವಿಷಯ ಗೊತ್ತಾಗಿತ್ತು. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲಾಣಗಳಲ್ಲಿ ವೈರಲ್ ಆಗಿದೆ. ಸೆಕ್ಯುರಿಟಿ ಗಾರ್ಡ್ ಬ್ಯಾಗ್ ತೆಗೆದು ನೋಡಲು ಪ್ರಯತ್ನಿಸುತ್ತಿದ್ದಂತೆ ಆತಂಕಗೊಂಡ ವಿದ್ಯಾರ್ಥಿ ಟ್ರಾವೆಲ್ ಬ್ಯಾಗ್ ಎತ್ತಿಕೊಂಡು ಓಡಲು ಯತ್ನಿಸಿದ್ದಾನೆ. ಈ ವೇಳೆ ಅನುಮಾನಗೊಂಡು ಬ್ಯಾಗ್ ಪರಿಶೀಲನೆ ವೇಳೆ ಆ ಬ್ಯಾಗ್ನೊಳಗೆ ಯುವತಿ ಇರುವುದು ಪತ್ತೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: Viral Video: ಗೆಳತಿಯನ್ನು ಸೂಟ್ಕೇಸ್ನಲ್ಲಿಟ್ಟು ಹಾಸ್ಟೆಲ್ನೊಳಗೆ ಕರೆದೊಯ್ದ ವಿದ್ಯಾರ್ಥಿ; ಮಣಿಪಾಲ್ ಗರ್ಲ್ ವಿಡಿಯೋ ವೈರಲ್
Viral Video: 300 ಹಾವುಗಳನ್ನು ಗೋಣಿಚೀಲದಲ್ಲಿ ತುಂಬಿ ಕಾಡಲ್ಲಿ ಸುರಿದ ವ್ಯಕ್ತಿ; ಈ ವಿಡಿಯೋ ನೋಡಿ ಶಾಕ್ ಆಗಬೇಡಿ!
Published On - 7:43 pm, Thu, 3 February 22