ಸಿದ್ದರಾಮಯ್ಯನವರೇ, ತಲವಾರು ಹಿಡಿದು ಹಟ್ಟಿಗೆ ನುಗ್ಗಿ ಗೋಕಳ್ಳತನ ಮಾಡಲಾಗ್ತಿತ್ತು; ಆಗ ಯಾಕೆ ಮೌನವಾಗಿದ್ದಿರಿ? ಭಜರಂಗದಳ ಪ್ರಶ್ನೆ
Former CM Siddaramaiah: ಸಿದ್ದರಾಮಯ್ಯ ವಿರುದ್ಧ ಭಜರಂಗದಳ ತೀವ್ರ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯಗೆ ಮುಸಲ್ಮಾನರ ಬಗ್ಗೆ ಅನುಕಂಪ ಕಾಳಜಿ ಶುರುವಾಗಿದೆ. ನಿಮ್ಮ ಅನುಕಂಪ ಗಂಗೊಳ್ಳಿಯ ಮೀನುಗಾರರ ಮೇಲೆ ಯಾಕೆ ಇಲ್ಲ? ಗಂಗೊಳ್ಳಿಯ ಮುಸಲ್ಮಾನರ ಬಹಿಷ್ಕಾರದ ಬಗ್ಗೆ ನೀವು ಯಾಕೆ ಮಾತನಾಡಿಲ್ಲ? ಎಂದು ಭಜರಂಗದಳ ಪ್ರಾಂತ ಸಂಚಾಲಕ ಸುನೀಲ್ಎ ಚ್ಚರಿಕೆಯ ಧ್ವನಿಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ
ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ಭಜರಂಗದಳ ತೀವ್ರ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯಗೆ ಮುಸಲ್ಮಾನರ ಬಗ್ಗೆ ಅನುಕಂಪ ಕಾಳಜಿ (Sympathy) ಶುರುವಾಗಿದೆ. ನಿಮ್ಮ ಅನುಕಂಪ ಗಂಗೊಳ್ಳಿಯ ಮೀನುಗಾರರ ಮೇಲೆ ಯಾಕೆ ಇಲ್ಲ? ಗಂಗೊಳ್ಳಿಯ ಮುಸಲ್ಮಾನರ ಬಹಿಷ್ಕಾರದ ಬಗ್ಗೆ ನೀವು ಯಾಕೆ ಮಾತನಾಡಿಲ್ಲ? ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣದ ನಡೆ ಯಾಕೆ ಸಿದ್ದರಾಮಯ್ಯನವರೇ. ನೀವು ರಾಜಕಾರಣಿ, ರಾಜಕೀಯ ಮಾಡಿ. ಹಿಂದುತ್ವದ ವಿಚಾರದಲ್ಲಿ ನೀವು ದೂರ ಇರುವುದೇ ಒಳ್ಳೆಯದು ಎಂದು ಉಡುಪಿಯಲ್ಲಿ ಭಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್. ಎಚ್ಚರಿಕೆಯ ಧ್ವನಿಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ (Bajrang Dal leader Sunil in Udupi).
ಕರಾವಳಿಯಲ್ಲಿ ನಿರಂತರವಾಗಿ ಗೋ ಕಳ್ಳ ಸಾಗಣೆ ನಡೆಯುತ್ತಿದೆ. ತಲವಾರು ಹಿಡಿದು ಹಟ್ಟಿಗೆ ನುಗ್ಗಿ ಗೋಕಳ್ಳತನ ಮಾಡಲಾಗುತ್ತಿದೆ. ಗೋವು ಹತ್ಯೆ ವಿರುದ್ಧ ಗಂಗೊಳ್ಳಿಯಲ್ಲಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯ ಮರುದಿನವೇ ಮುಸಲ್ಮಾನರು ಮೀನು ಖರೀದಿಗೆ ಬಹಿಷ್ಕಾರ ಹಾಕಿದರು. ಹಿಂದೂಗಳ ಜೊತೆ ವ್ಯವಹಾರ ಮಾಡುವುದಿಲ್ಲ ಎಂದು ತೀರ್ಮಾನಿಸಿದರು. ಮುಸಲ್ಮಾನ ವ್ಯಾಪಾರಿಗಳ ಮಾನಸಿಕತೆ ಏನು ಎಂಬುದು ನಮಗೆ ಗೊತ್ತಾಗಿದೆ. ಬಹಿಷ್ಕಾರದ ನಡೆ ಆರಂಭವಾಗಿದ್ದೇ ಮುಸಲ್ಮಾನರಿಂದ ಎಂದು ಉಡುಪಿಯಲ್ಲಿ ಭಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ. ಆರ್. ವಾಗ್ದಾಳಿ ನಡೆಸಿದ್ದಾರೆ.
Also Read: Sri Vishnu Sahasranama Stotram: ಶ್ರೀ ವಿಷ್ಣು ಸಹಸ್ರನಾಮ ಸ್ತುತಿಸುವುದರ ಫಲಶ್ರುತಿ ಮತ್ತು ಅದರ ಮಹತ್ವ ಹೀಗಿದೆ
Also Read: ನೆಲದ ಮೇಲೆ ಕುಳಿತು ಊಟ ಮಾಡುವುದು ಸಂಪ್ರದಾಯವಷ್ಟೇ ಅಲ್ಲ, ಅದು ಯೋಗ ಸಾಧನೆಯ ಒಂದು ಆಸನ! ಹೇಗೆ?
Published On - 1:33 pm, Thu, 24 March 22