India Monkey Man: ಜೋಗದಲ್ಲಿ ಬೆನ್ನುಮೂಳೆಗೆ ಪೆಟ್ಟು ಮಾಡಿಕೊಂಡ ಎರಡೂವರೆ ವರ್ಷದ ಬಳಿಕ ಮತ್ತೊಂದು ಸಾಹಸಕ್ಕೆ ಕೈಯಿಟ್ಟ ಮಂಕಿಮ್ಯಾನ್ ಕೋತಿ ರಾಜ್!

Jyothi Raj Kothi Raj: ಭಾರತದ ಮಂಕಿಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಉಡುಪಿಯ ಬ್ರಹ್ಮಗಿರಿಯಲ್ಲಿ ಇರುವ 25 ಅಂತಸ್ತುಗಳ ವಸತಿ ಸಮುಚ್ಚಯವನ್ನು ಹತ್ತುವುದರ ಮೂಲಕ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ.

India Monkey Man: ಜೋಗದಲ್ಲಿ ಬೆನ್ನುಮೂಳೆಗೆ ಪೆಟ್ಟು ಮಾಡಿಕೊಂಡ ಎರಡೂವರೆ ವರ್ಷದ ಬಳಿಕ ಮತ್ತೊಂದು ಸಾಹಸಕ್ಕೆ ಕೈಯಿಟ್ಟ ಮಂಕಿಮ್ಯಾನ್ ಕೋತಿ ರಾಜ್!
ಜೋಗದಲ್ಲಿ ಬೆನ್ನುಮೂಳೆಗೆ ಪೆಟ್ಟು ಮಾಡಿಕೊಂಡ ಎರಡೂವರೆ ವರ್ಷದ ಬಳಿಕ ಮತ್ತೊಂದು ಸಾಹಸಕ್ಕೆ ಕೈಯಿಟ್ಟ ಮಂಕಿಮ್ಯಾನ್ ಕೋತಿ ರಾಜ್!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 04, 2023 | 12:00 PM

ಭಾರತದ ಮಂಕಿಮ್ಯಾನ್ (India Monkey Man) ಎಂದೇ ಖ್ಯಾತಿ ಪಡೆದಿರುವ ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ (Jyothi Raj – Kothi Raj) ಉಡುಪಿಯ (Udupi) ಬ್ರಹ್ಮಗಿರಿಯಲ್ಲಿ ಇರುವ 25 ಅಂತಸ್ತುಗಳ ವಸತಿ ಸಮುಚ್ಚಯವನ್ನು ಹತ್ತುವುದರ ಮೂಲಕ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ. ಉಡುಪಿ ಬ್ರಹ್ಮಗಿರಿ ಸಮೀಪದ ವುಡ್ಸ್ ವಿಲ್ಲಾ ವಸತಿ ಸಮುಚ್ಚಯವನ್ನು ಗುರುವಾರ ಬೆಳಗ್ಗೆ 10.17ಕ್ಕೆ ಹತ್ತಲು ಆರಂಭಿಸಿದ ಅವರು 10.44 ಕ್ಕೆ ಕೊನೆಯ ಮಹಡಿಯನ್ನು ತಲುಪಿ ಕನ್ನಡ ಬಾವುಟವನ್ನು ಹಾರಿಸುವುದರ ಮೂಲಕ ಸಂಭ್ರಮಿಸಿದರು. ತನ್ನ ಚಾಲೆಂಜ್ ಮುಗಿಸಿ ಕಟ್ಟಡದಿಂದ ಕೆಳಗಡೆ ಬಂದ ಜ್ಯೋತಿ ರಾಜ್ ಅವರನ್ನು ಪೊಲೀಸ್ ಇಲಾಖೆಯ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಹಾಜರಿದ್ದ ನಾಗರಿಕರು ಕರತಾಡನದ ಮೂಲಕ ಅಭಿನಂದಿಸಿದರು.

ಕಳೆದ ಎರಡೂ ವರ್ಷಗಳ ಹಿಂದೆ ಜೋಗದಲ್ಲಿ ಬಿದ್ದು ಬೆನ್ನುಮೂಳೆ ನೋವು ಮಾಡಿಕೊಂಡಿದ್ದ ಕೋತಿರಾಜು ಬಳಿಕ ಒಂದೂವರೆ ವರ್ಷ ವಿಶ್ರಾಂತಿ ಪಡೆದಿದ್ದರು. ಈ ವೇಳೆ ಸುಮಾರು 130 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಮತ್ತೆ ವ್ಯಾಯಾಮ ಮಾಡಿ ದೇಹದ ತೂಕ ತಗ್ಗಿಸಿ, ಕೋತಿ ರಾಜು ತಮ್ಮ ಸಾಹಸ ಕಾರ್ಯವನ್ನು ಮುಂದುವರೆಸಿದ್ದಾರೆ.

ಕ್ಲೈಂಬಿಂಗ್ ಫೌಂಡೇಶನ್ (Climbing Foundation) ಸ್ಥಾಪಿಸುವ ಉದ್ದೇಶ ಹೊಂದಿರುವ ಕೋತಿರಾಜು, ಇದಕ್ಕಾಗಿ ನಾಡಿನೆಲ್ಲೆಡೆ ತಿರುಗಿ ಸಾಹಸ ಮಾಡುವ ಗುರಿಯನ್ನು ಹೊಂದಿದ್ದಾರೆ. ದೇಶದೆಲ್ಲೆಡೆ ಈ ರೀತಿ ಬೆಟ್ಟ, ಗುಡ್ಡ ಹತ್ತಿ ಕನ್ನಡ ಬಾವುಟ ಹಾರಿಸುತ್ತೇನೆ. ವಿದೇಶದಲ್ಲೂ ಸಾಹಸ ಮಾಡಿ ರಾಷ್ಟ್ರ ಧ್ವಜ ಹಾರಿಸುತ್ತೇನೆ ಎಂದು ಕೋತಿರಾಜು ತನಗಿರುವ ಆಸೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಜನರು ನೀಡುವ ಧನ ಸಹಾಯದಿಂದ ಕ್ಲೈಂಬಿಂಗ್ ಫೌಂಡೇಶನ್ ಸ್ಥಾಪಿಸುತ್ತೇನೆ. ಆ ಫೌಂಡೇಶನ್ ಮೂಲಕ ಆಸಕ್ತಿ ಇರುವ ಯುವಕರಿಗೆ ತರಬೇತಿ ನೀಡಿ ಒಲಿಂಪಿಕ್ಸ್​​​ ಅಂತಹ ಕ್ರೀಡಾಕೂಟಗಳಿಗೆ ತಯಾರು ಮಾಡುತ್ತೇನೆ ಎಂದು ಕೋತಿರಾಜು ಹೇಳಿದ್ದಾರೆ.

ವರದಿ: ದಿನೇಶ್ ಯಲ್ಲಾಪುರ್, ಟಿವಿ9, ಉಡುಪಿ