ಉಡುಪಿ: ನಾಳೆಯಿಂದ ರಾಜ್ಯಾದ್ಯಂತ ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಕೊರೊನಾ ಆತಂಕ ಮರೆಯಾಗಿದ್ದು, ಈ ಬಾರಿ ಎಲ್ಲ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಬಹುದಾಗಿದೆ. ಹಿಂದಿನ ಎರಡು ವರ್ಷಗಳ ಕೊರೊನಾ ಕಾಟ ಸದ್ಯಕ್ಕಂತೂ ಇಲ್ಲವೆಂದೇ ಹೇಳಬಹುದು. ಇತ್ತೀಚೆಗೆ ಮುಕ್ತಾಯವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯೂ ಕೊರೊನಾದಿಂದ ಮುಕ್ತವಾಗಿ ಯಶಸ್ವಿಯಾಗಿ ನಡೆದಿದೆ. ಯಾವೊಬ್ಬ ವಿದ್ಯಾರ್ಥಿಯನ್ನು ಬಾಧಿಸಿಲ್ಲ ಕೊರೊನಾ ಮಾರಿ. ಆದರೆ ನಾಳೆಯಿಂದ ಆರಂಭವಾಗಲಿರುವ ಪಿಯುಸಿ ಪರೀಕ್ಷೆಗೆ ಬೇರೆಯದ್ದೇ ಆದ ಮಾನವ ನಿರ್ಮಿತ ಕೂಗುಮಾರಿಗಳ ಕಾಟ ಎದುರಾಗಿದೆ. ರಾಜ್ಯದ ಮುಸಲ್ಮಾನ ವಿದ್ಯಾರ್ಥಿನಿಯರು ಶಾಲಾ ಕಾಲೇಜು ಆವರಣದಲ್ಲಿ ಕಳೆದ ಮೂರು ತಿಂಗಳಿಂದ ಹಿಜಾಬ್ ಧಾರಿಗಳಾಗಿ ಢಾಳಾಗಿ ಕಾಣಿಸತೊಡಗಿದ್ದಾರೆ. ಹಿಜಾಬ್ ಧರಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಕರ್ನಾಟಕ ಹೈಕೋರ್ಟ್ ಹಿಜಾಬ್ ನಖೋ ಎಂದಿದೆ (Hijab Verdict). ಹಾಗಾಗಿ ಹೈಕೋರ್ಟ್ ತೀರ್ಪನ್ನು ಕೈಯಲ್ಲಿ ಹಿಡಿದು ರಾಜ್ಯ ಆಡಳಿತಾರೂಢ ಬಿಜೆಪಿ ಸರ್ಕಾರವೂ ಸಹ ಹಿಜಾಬ್ ಗೆ ಅನುಮತಿ ನೀಡಿಲ್ಲ. ಕೇವಲ ಶಾಲಾ ಸಮವಸ್ತ್ರವಷ್ಟೇ! ಎಂದು ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಿದೆ. ಹಾಗಾಗಿ ನಾಳೆಯಿಂದ ಆರಂಭವಾಗಲಿರುವ ಪಿಯುಸಿ ಪರೀಕ್ಷೆ (Second PUC Exam) ಬರೆಯಲು ಹಿಜಾಬ್ ಗೆ ಸುತರಾಂ ಅವಕಾಶ ಇಲ್ಲವಾಗಿದೆ. ಆದರೆ ಅವರಿದ್ದಾರಲ್ಲ… ಆ ಆರು ಮಂದಿ ವಿದ್ಯಾರ್ಥಿನಿಯರು… ಹಿಜಾಬ್ ಬೇಕೇ ಬೇಕು. ಅದಕ್ಕಾಗಿ ಶಿಕ್ಷಣ ಬೇಕಾದರೂ ಬಿಡುತ್ತೇವೆ ಎಂದು ಪಟ್ಟುಹಿಡಿದಿದ್ದಾರಲ್ಲ. ಹಾಗೆಂದೇ ಕೋರ್ಟ್ ಮೆಟ್ಟಿಲು ಏರಿ, ಛೀಮಾರಿ ಹಾಕಿಸಿಕೊಂಡು ಬದರಲ್ಲ. ಅವರ ಪೈಕಿ ನಾಲ್ವರು ವಿದ್ಯಾರ್ಥಿನಿಯರಿಗೆ (Udupi Hijab students) ನಾಳೆಯಿಂದ ದ್ವಿತೀಯ ಪಿಯುಸಿ ’ಅಗ್ನಿ‘ ಪರೀಕ್ಷೆ. ಇಬ್ಬರು ವಾಣಿಜ್ಯ ವಿಭಾಗದವರು ಮತ್ತಿಬ್ಬರು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು. ಇವರು ಪರೀಕ್ಷೆ ಬರೀತಾರಾ, ಶಿಕ್ಷಣಕ್ಕೆ ಮಹತ್ವ ಮಣೆ ಹಾಕಿ ಪರೀಕ್ಷೆ ಬರೀತಾರಾ, ಇಲ್ಲ ಹಿಜಾಬು ಹಾಕಿಕೊಂಡು ಮನೆಯಲ್ಲೇ ಉಳಿಯುತ್ತಾರಾ? ಎಂಬುದನ್ನು ರಾಜ್ಯದ ಜನತೆ ಎದುರು ನೋಡುತಾ ಇದಾರೆ.
ಹಿಜಾಬ್ ಗಾಗಿ ನ್ಯಾಯಾಲಯದ ಮೊರೆ ಹೋಗಿದ್ದ ಆ ಆರು ವಿದ್ಯಾರ್ಥಿ ಹೋರಾಟಗಾರ್ತಿಯರು ಪರೀಕ್ಷೆ ಬರೀತಾರಾ? ಅವರ ಭವಿಷ್ಯವೇನು? ಎಂಬುದು ಆ ಮಕ್ಕಳ ಶಿಕ್ಷಣ ಭವಿಷ್ಯದ ಪ್ರಶ್ನೆಯಾಗಿದೆ. ಗಮನಾರ್ಹವೆಂದರೆ ಆ ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು. ಹಾಗಾಗಿ ಉಳಿದ ನಾಲ್ವರು ನಾಳೆಯಿಂದ ಏನು ಮಾಡುತ್ತಾರೆ ಎಂಬುದೇ ಪ್ರಶ್ನೆ. ಕುತೂಹಲಕಾರಿ ಸಂಗತಿಯೆಂದರೆ ಆ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ಅಂತಿಮ ಪರೀಕ್ಷೆ ಬರೆಯಲಿಲ್ಲ!
ನಾಲ್ಕು ಮಂದಿಗೆ ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಎದುರಾಗಿದ್ದು, ಈವರೆಗೆ ಆ ವಿದ್ಯಾರ್ಥಿನಿಯರು ಹಾಲ್ ಟಿಕೆಟ್ ಪಡೆದಿಲ್ಲ. ಹಾಲ್ ಟಿಕೆಟ್ ಪಡೆದು ನಾಳೆಯೂ ಪರೀಕ್ಷೆ ಬರೆಯಬಹುದು ಎಂಬ ಆಶಾಭಾವ ಉಳಿದಿದೆ. ಪರೀಕ್ಷೆ ಬರೆಯುವ ತಯಾರಿ ನಡೆಸಿರುವ ಆ ನಾಲ್ಕೂ ಹಿಜಾಬ್ ವಿದ್ಯಾರ್ಥಿನಿಯರು ‘ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಟ್ವೀಟ್ ಮಾಡಿದ್ದಾರೆ.
ಉಡುಪಿಯ ಹಿಜಾಬ್ ಹೋರಾಟಗಾರ್ತಿಯರಿಗೆ ಯಶಪಾಲ್ ಟಾಂಗ್:
ಉಡುಪಿ: ನಾಳೆಯಿಂದ ದ್ವಿತೀಯ ಪಿಯುಸಿ ಫೈನಲ್ ಎಕ್ಸಾಮ್. ಹಿಜಾಬ್ ಧರಿಸಿ ಬಂದರೂ, ಎಕ್ಸಾಮ್ ಬರೆಯಲು ಅದನ್ನು ತೆಗೆದಿಟ್ಟು ಬಂದರೆ ಸ್ವಾಗತ. ಇಲ್ಲವಾದರೆ ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಗಳತ್ತ ಬರಬೇಡಿ ಎಂದು ಟಿವಿ9 ಮೂಲಕ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಯಶಪಾಲ್ ಸುವರ್ಣ ಸೂಚಿಸಿದ್ದಾರೆ.
ಕ್ಯಾಂಪಸ್ ಗೆ ಹಿಜಾಬ್ ಧರಿಸಿ ಬಂದು ಗೊಂದಲ ಸೃಷ್ಟಿ ಮಾಡಬೇಡಿ. ಇದ್ರಿಂದ ಪರೀಕ್ಷಾ ಮೂಡ್ ನಲ್ಲಿ ಇರುವ ಇತರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತೆ. ವಿವಾದಕ್ಕೆ ಕಾರಣವಾಗಿದ್ದ ನಾಲ್ಕು ವಿದ್ಯಾರ್ಥಿನಿಯರು ಈವರೆಗೂ ಹಾಲ್ ಟಿಕೇಟ್ ಪಡೆದಿಲ್ಲ. ಅದನ್ನ ಅನ್ ಲೈನ್ ನಲ್ಲೂ ಪಡೆಯುವ ಅವಕಾಶವಿದೆ. ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶವಿಲ್ಲ ಎಂದು ಅರು ಸೂಚಿಸಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿನ ವ್ಯಕ್ತಿಗೆ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾರಿದ ಪ್ರಿಯಾಂಕಾ ಚೋಪ್ರಾ; ಕಾರಣ ಏನು?
ಗೊಂಬೆ ಜತೆ ಕೃಷ್ಣನ ಮೂರ್ತಿ; ವೈರಲ್ ಆಗುತ್ತಿದೆ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡ ಫೋಟೋ
Published On - 2:27 pm, Thu, 21 April 22