Monkey park: ಮಂಗಗಳು ಊರಿನತ್ತ ಬರುತ್ತಿವೆ, ಉಡುಪಿ ಜಿಲ್ಲೆಯಲ್ಲಿ ಮಂಕಿ ಪಾರ್ಕ್ ನಿರ್ಮಿಸಲು ಜನಪ್ರತಿನಿಧಿಗಳು ವಿಫಲ

ಮುಖ್ಯವಾಗಿ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹಣ್ಣಿನ ಮರಗಳು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಕಾಡಿನಲ್ಲಿರುವ ಮಂಗಗಳು ಊರಿನತ್ತ ಬರುವಂತಾಗಿದೆ. ಅರಣ್ಯ ಇಲಾಖೆಯು ಕೂಡ ಕಾಡಿನಲ್ಲಿ ಹಣ್ಣಿನ ಮರಗಳನ್ನ ನೆಡುವ ನಿಟ್ಟಿನಲ್ಲಿ ಯಾವುದೇ ಯೋಜನೆ ಮಾಡದೆ ಇರುವುದು ಮಂಗಗಳು ಊರಿನತ್ತ ಬರಲು ಕಾರಣವಾಗಿದೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಕೂಡ ಮಂಕಿ ಪಾರ್ಕ್ ವಿಚಾರವಾಗಿ ಅನೇಕ ಬಾರಿ ಪ್ರಸ್ತಾಪಿಸಿದ್ದರು. ಆದರೆ ಇದುವರೆಗೆ ಅದಾಗಿಲ್ಲ. ಈ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನ ಮಂಗಗಳ ಕೈಗೆ ಕೊಡುವ ಪರಿಸ್ಥಿತಿ ಎದುರಾಗಿದೆ.

Monkey park: ಮಂಗಗಳು ಊರಿನತ್ತ ಬರುತ್ತಿವೆ, ಉಡುಪಿ ಜಿಲ್ಲೆಯಲ್ಲಿ ಮಂಕಿ ಪಾರ್ಕ್ ನಿರ್ಮಿಸಲು ಜನಪ್ರತಿನಿಧಿಗಳು ವಿಫಲ
ಮಂಗಗಳು ಊರಿನತ್ತ ಬರುತ್ತಿವೆ, ಉಡುಪಿಯಲ್ಲಿ ಮಂಕಿ ಪಾರ್ಕ್ ನಿರ್ಮಿಸಲು ವಿಫಲ
Updated By: ಸಾಧು ಶ್ರೀನಾಥ್​

Updated on: Mar 09, 2024 | 10:21 AM

ಉಡುಪಿ ಜಿಲ್ಲೆಯ ಪಶ್ಚಿಮಘಟ್ಟದ ಅಂಚಿನಲ್ಲಿರುವ ರೈತರು ಮಂಗಗಳ ಕಾಟದಿಂದ ಹೈರಾಣಾಗಿದ್ದಾರೆ. ಮುಖ್ಯವಾಗಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಕೃಷಿಕರು ಬೆಳೆಸುತ್ತಿರುವ ತೋಟಗಾರಿಕೆ ಬೆಳೆಗಳು ಮಂಗಗಳ ಪಾಲಾಗುತ್ತಿವೆ. ಮಂಗಗಳಿಗಾಗಿ ಮಂಕಿ ಪಾರ್ಕ್ ನಿರ್ಮಿಸುವ ಪ್ರಸ್ತಾವ ಈ ಹಿಂದೆ ಒಮ್ಮೆ ಕೇಳಿ ಬಂದಿದ್ದರು ಇದುವರೆಗೆ ಅದು ಅನುಷ್ಠಾನಕ್ಕೆ ಬಾರದ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಪಡುವಂತಾಗಿದೆ.

ಹೌದು ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಾದ ಕಾರ್ಕಳ, ಹೆಬ್ರಿ, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕೆಲವು ಭಾಗಗಳು ಮಂಗನ ಹಾವಳಿಗೆ ತುತ್ತಾಗಿರುವ ಪ್ರದೇಶಗಳು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರುವ ಈ ಪ್ರದೇಶದಲ್ಲಿ ಬಹು ಮುಖ್ಯವಾಗಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಅನಾನಸ್ ಮತ್ತು ಪಪ್ಪಾಯ ಬೆಳೆಗಳನ್ನ ಬೆಳಯಲಾಗುತ್ತದೆ. ಇದರ ಜೊತೆಗೆ ಐಸ್ ಕ್ರೀಮ್ ಮೊದಲಾದ ಉತ್ಪನ್ನಗಳಿಗೆ ಬಳಸಲಾಗುವ ವೆನಿಲ್ಲಾ ಬಳ್ಳಿಗಳನ್ನು ಕೂಡ ಈ ಭಾಗದಲ್ಲಿ ಅತಿ ಹೆಚ್ಚು ಬೆಳೆಯುವ ಪರಿಪಾಠವಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಮಂಗನ ಹಾವಳಿಯಿಂದಾಗಿ ಈ ಭಾಗದ ರೈತರು ತೋಟಗಾರಿಕಾ ಬೆಳೆಯನ್ನ ಹೇಗೆ ಬೆಳೆಯುವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಉತ್ತಮ ಇಳುವರಿ ಬಂದರೂ ಕೂಡ ಕಟಾವಿನ ಕೊನೆಯ ಕ್ಷಣದಲ್ಲಿ ಮಂಗಗಳು ಬಂದು ಬೆಳೆದ ಬೆಳೆಯನ್ನು ನಾಶ ಮಾಡುತ್ತಿವೆ.

ಇದನ್ನೂ ಓದಿ:    Shivaratri Special Recipe : ಮಹಾಶಿವರಾತ್ರಿಗೆ ಸಬ್ಬಕ್ಕಿಯ ಈ ರೆಸಿಪಿಗಳನ್ನು ಮಿಸ್ ಮಾಡ್ಲೆಬೇಡಿ, ಇಲ್ಲಿದೆ ಸಿಂಪಲ್ ರೆಸಿಪಿ

ಮುಖ್ಯವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾಡುಗಳಲ್ಲಿ ಹಣ್ಣಿನ ಮರಗಳು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಾಡಿನಲ್ಲಿರುವ ಮಂಗಗಳು ಊರಿನತ್ತ ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯು ಕೂಡ ಕಾಡಿನಲ್ಲಿ ಹಣ್ಣಿನ ಮರಗಳನ್ನ ನೆಡುವ ನಿಟ್ಟಿನಲ್ಲಿ ಯಾವುದೇ ಯೋಜನೆಯನ್ನು ಕೂಡ ಮಾಡದೆ ಇರುವುದು ಕೂಡ ಮಂಗಗಳು ಊರಿನತ್ತ ಬರಲು ಕಾರಣವಾಗಿದೆ. ಸದ್ಯ ಮಂಗಗಳ ಕಾಟ ತಡೆಗಟ್ಟುವ ನಿಟ್ಟಿನಲ್ಲಿ ಈ ಹಿಂದೆ ಡಾ. ವಿ ಎಸ್ ಆಚಾರ್ಯ ಅವರು ಸಚಿವರಾಗಿದ್ದಾಗ ಕಾರ್ಕಳದಲ್ಲಿ ಮಂಕಿ ಪಾರ್ಕು ನಿರ್ಮಿಸುವ ಯೋಜನೆಯನ್ನು ಹಾಕಲಾಗಿತ್ತು.

ಇದನ್ನೂ ಓದಿ: ನಮ್ಮ ಕರಾವಳಿ ಬೀಚ್​​ಗಳನ್ನು ಮಾಲ್ಡೀವ್ಸ್​ಗೆ ಪರ್ಯಾಯ ಮಾಡುವ ಮೊದಲು ಸ್ಥಳೀಯರ ಅಹವಾಲು ಕೇಳಿ

ಬಳಿಕ ಸಚಿವರಾದ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಕೂಡ ಮಂಕಿ ಪಾರ್ಕ್ ವಿಚಾರವಾಗಿ ಅನೇಕ ಬಾರಿ ಪ್ರಸ್ತಾಪಿಸಿದ್ದರು. ಆದರೆ ಇದುವರೆಗೆ ಯಾವುದೇ ಮಂಕಿ ಪಾರ್ಕ್ ನಿರ್ಮಾಣವಾಗದ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನ ಮಂಗಗಳ ಕೈಗೆ ಕೊಡುವ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದದ ದನಿಯಲ್ಲಿ ಹೇಳುತ್ತಾರೆ ಸ್ಥಳೀಯರಾದ ನಿತ್ಯಾನಂದ ಶೆಟ್ಟಿ.

ಒಟ್ಟಾರೆಯಾಗಿ ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆಯುವ ಯೋಜನೆಯನ್ನ ರೂಪಿಸಬೇಕಾದ್ದು ಅನಿವಾರ್ಯ ಎನ್ನುವಂತಿದೆ. ಇನ್ನು ಸರಕಾರ ಹೆಚ್ಚುವರಿಯಾಗಿ ಮಂಕಿ ಪಾರ್ಕ್ ನಿರ್ಮಾಣದತ್ತ ಹೆಚ್ಚಿನ ಆಸಕ್ತಿ ತೋರಿದರೆ ಇಲ್ಲಿನ ರೈತರು ಯಾವುದೇ ಆತಂಕವಿಲ್ಲದೆ ತಮ್ಮ ಕೃಷಿಯಲ್ಲಿ ತೊಡಗಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:21 am, Sat, 9 March 24