ಅಯೋಧ್ಯೆ ರಾಮನ ದರ್ಶನ ಮಾಡಿ ಇಹದ ಯಾತ್ರೆ ಮುಗಿಸಿದ ಪಾಂಡುರಂಗ ಶಾನುಭಾಗ್

ಉಡುಪಿ ಜಿಲ್ಲೆಯ ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಪಾಂಡುರಂಗ ಶಾನಬಾಗ್ ಅವರು ಅಯೋಧ್ಯೆಯಲ್ಲಿ ಭಾನುವಾರ ಮಧ್ಯಾಹ್ನ ರಾಮಮಂದಿರದ ಬಳಿ ಹೃದಯಾಘಾತದಿಂದ ನಿಧನರಾದರು. ಇಂದು ಬೆಳಗ್ಗೆಯಷ್ಟೇ ಶ್ರೀರಾಮನ ದರ್ಶನ ಪಡೆದ ನಂತರ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಕಲಶಾಭಿಷೇಕ ತೀರ್ಥ ಪ್ರಸಾದ ಸ್ವೀಕರಿಸಿ ಸಂತಸದಿಂದ ತೆರಳಿದ್ದರು.

ಅಯೋಧ್ಯೆ ರಾಮನ ದರ್ಶನ ಮಾಡಿ ಇಹದ ಯಾತ್ರೆ ಮುಗಿಸಿದ ಪಾಂಡುರಂಗ ಶಾನುಭಾಗ್
ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳೊಂದಿಗೆ ಪಾಂಡುರಂಗ ಶಾನುಭಾಗ್
Rakesh Nayak Manchi

Updated on: Mar 10, 2024 | 9:50 PM

ಉಡುಪಿ, ಮಾ.10: ಜಿಲ್ಲೆಯ (Udupi) ಹಿರಿಯ ಆರ್‌ಎಸ್‌ಎಸ್ (RSS) ಕಾರ್ಯಕರ್ತ ಪಾಂಡುರಂಗ ಶಾನಬಾಗ್ ಅವರು ಅಯೋಧ್ಯೆಯಲ್ಲಿ (Ayodhya) ಭಾನುವಾರ ಮಧ್ಯಾಹ್ನ ರಾಮಮಂದಿರದ ಬಳಿ ಹೃದಯಾಘಾತದಿಂದ ನಿಧನರಾದರು. ಆರ್​ಎಸ್​ಎಸ್ ಸಂಘದಲ್ಲಿ ಅತ್ಯಂತ ಸಕ್ರಿಯರಾಗಿದ್ದ ಶಾನುಭಾಗ್ ಅವರು ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆದು ರಾಮನ ಪಾದಮೂಲದಲ್ಲೇ ಜೀವನಯಾತ್ರೆ ಮುಗಿಸಿದರು.

ಇಂದು ಬೆಳಗ್ಗೆಯಷ್ಟೇ ಶ್ರೀರಾಮನ ದರ್ಶನ ಪಡೆದ ನಂತರ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಕಲಶಾಭಿಷೇಕ ತೀರ್ಥ ಪ್ರಸಾದ ಸ್ವೀಕರಿಸಿ ಸಂತಸದಿಂದ ತೆರಳಿದ್ದರು. ಸಂಜೆ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವ ವೇಳೆ ದೇವಸ್ಥಾನದ ಹೊರ ದ್ವಾರದ ಬಳಿ ಶಾನುಭಾಗ್ ಅವರಿಗೆ ಹೃದಯಾಘಾತವಾಗಿದೆ. ಅವರ ಸಂಬಂಧಿಕರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಾನುಭಾಗ್ ಅವರು ಕೊನೆಯುಸಿರೆಳೆದರು.

ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರದ ಸಂಕೀರ್ಣ ನಿರ್ಮಾಣ ಕಾರ್ಯ 2024ರ ಡಿಸೆಂಬರ್​ ವೇಳೆಗೆ ಪೂರ್ಣ

ಪಾಂಡುರಂಗ ಶಾನುಭಾಗ್ ಅವರ ನಿಧನದ ಬಗ್ಗೆ ಪೇಜಾವರ ಶ್ರೀ ದುಃಖ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ರಾಮನು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಶಾನುಭಾಗ್ ಅವರು ರಾಮನ ದರ್ಶನ ಪಡೆದ ನಂತರ ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದರು. ಶ್ರೀಗಳು ಶಾನುಭಾಗ್ ಅವರೊಂದಿಗೆ ಸಂಸ್ಕೃತದಲ್ಲೇ ಮಾತನಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us