6 ಜನ ಹಿಜಾಬ್ ಹೋರಾಟಗಾರ್ತಿಯರು ಭಯೋತ್ಪಾದಕರು, ಮುಂದೆ ಸಾರ್ವಜನಿಕ ಸ್ಥಳದಲ್ಲೂ ಹಿಜಾಬ್ ಹಾಕಲು ಬಿಡಲ್ಲ -ಯಶ್ ಪಾಲ್ ಸುವರ್ಣ
ಮುಂದೊಂದು ದಿನ ಹಿಜಾಬ್ ಧರಿಸಿ ಹೋಗುವವರನ್ನು ನೋಡಿದ್ರೆ ಜನರು ಭಯಪಡುವ ವಾತಾವರಣ ಸೃಷ್ಟಿಯಾಗಬಹುದು ಎಂದು ಯಶ್ ಪಾಲ್ ಸುವರ್ಣ ಆಕ್ರೋಶ ಹೊರ ಹಾಕಿದ್ದಾರೆ.
ಉಡುಪಿ: ಆರು ಜನ ಹಿಜಾಬ್ ಹೋರಾಟಗಾರ್ತಿಯರು ಭಯೋತ್ಪಾದಕರು. ಅವರಿಂದ ಜನರು ಸಾಕಷ್ಟು ಜಾಗೃತರಾಗಿದ್ದಾರೆ. ಮುಂದೊಂದು ದಿನ ಹಿಜಾಬ್ ಧರಿಸಿ ಹೋಗುವವರನ್ನು ನೋಡಿದ್ರೆ ಜನರು ಭಯಪಡುವ ವಾತಾವರಣ ಸೃಷ್ಟಿಯಾಗಬಹುದು ಎಂದು ಯಶ್ ಪಾಲ್ ಸುವರ್ಣ ಆಕ್ರೋಶ ಹೊರ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲೂ ಹಿಜಾಬ್ ಹಾಕಲು ಬಿಡಲ್ಲ. ಶಾಲಾ ಕಾಲೇಜಿನಲ್ಲಿ ಮಾತ್ರವಲ್ಲ ಹಿಜಾಬನ್ನು ಹೊರಗಡೆ ಹಾಕದೇ ಇರೋ ಪರಿಸ್ಥಿತಿ ಬರುತ್ತೆ ಎಂದು ಯಶ್ ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ.
ಫ್ರಾನ್ಸ್ ಗೂ ಉಡುಪಿಯ ಹಿಜಾಬ್ ವಿಚಾರ ಪ್ರೇರಣೆಯಾಗಿದ್ದು ಖುಷಿಯ ವಿಚಾರ. ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ರಾಜ್ಯ, ರಾಷ್ಟ್ರ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಜಾಗೃತಿಗೆ ಕಾರಣವಾಗಿದೆ. ಫ್ರಾನ್ಸ್ ರಾಜಕೀಯ ಪಕ್ಷದ ಪ್ರಣಾಳಿಕೆ ಹಿಜಾಬ್ ಬ್ಯಾನ್ ಮತ್ತು ಹಲಾಲ್ ಬ್ಯಾನ್ ಆಗಿದೆ. ಇದು ಮುಂದೆ ಎಲ್ಲಾ ರಾಷ್ಟ್ರಗಳಲ್ಲೂ ಆಗುತ್ತೆ ಎಂದರು.
ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆ ಬರಿತಾರಾ? ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಇಂದು ಹಿಜಾಬ್ ಹೋರಾಟಗಾರ್ತಿಯರು ಪರೀಕ್ಷೆ ಬರಿತಾರಾ? ಹಿಜಾಬ್ಗಾಗಿ ನ್ಯಾಯಾಲಯದ ಮೊರೆ ಹೋಗಿದ್ದ 6 ವಿದ್ಯಾರ್ಥಿನಿಯರ ಪೈಕಿ ಇಬ್ಬರು ಪ್ರಥಮ ಪಿಯುಸಿ, ನಾಲ್ವರು ದ್ವಿತೀಯ ಪಿಯುಸಿ. ಇಬ್ಬರು ವಾಣಿಜ್ಯ ಮತ್ತು ಇಬ್ಬರು ವಿಜ್ಞಾನ ವಿಭಾಗ. ಆದ್ರೆ ನಾಲ್ವರು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಈವರೆಗೂ ಹಾಲ್ ಟಿಕೆಟ್ ಪಡೆದಿಲ್ಲ. ಸ್ಥಳದಲ್ಲೇ ಹಾಲ್ ಟಿಕೆಟ್ ಪಡೆದು ಪರೀಕ್ಷೆ ಬರೆಯಬಹುದು. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ವಿದ್ಯಾರ್ಥಿನಿಯರು ಸಿಎಂಗೆ ಟ್ವೀಟ್ ಮಾಡಿದ್ದಾರೆ.
ರಾಜ್ಯ ಸರ್ಕಾರ ಸುತ್ತೋಲೆ ಗೋಡೆಗೆ ಅಂಟಿಸಿದ ಪ್ರಾಂಶುಪಾಲರು ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ ಹಿನ್ನೆಲೆ ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ರಾಜ್ಯ ಸರ್ಕಾರ ಸುತ್ತೋಲೆ ಗೋಡೆಗೆ ಅಂಟಿಸಿದ್ದಾರೆ. ಒಟ್ಟು 11 ಅಂಶಗಳನ್ನು ಒಳಗೊಂಡ ಸರ್ಕಾರದ ಸುತ್ತೋಲೆ ಅಂಟಿಸಲಾಗಿದೆ. ಹಿಜಾಬ್ ಹೋರಾಟಗಾರ್ತಿಯರು ಪ್ರವೇಶಪತ್ರ ಪಡೆದುಕೊಂಡಿಲ್ಲ. ಕೊನೆ ಕ್ಷಣದವರೆಗೂ ಪ್ರವೇಶಪತ್ರ ಪಡೆಯಲು ಅವಕಾಶವಿದೆ ಎಂದು ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಮಾಹಿತಿ ನೀಡಿದ್ದಾರೆ.
ಹಾಲ್ ಟಿಕೆಟ್ ಪಡೆದ ಆಲಿಯಾ ಅಸಾದಿ ಸದ್ಯ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆ ಹಿಜಾಬ್ ಹೋರಾಟದ ಮುಂಚೂಣಿಯಲ್ಲಿದ್ದ ಆಲಿಯಾ ಅಸಾದಿ ಹಾಲ್ ಟಿಕೆಟ್ ಪಡೆದಿದ್ದಾರೆ.
Published On - 10:02 am, Fri, 22 April 22