ಎಕ್ಸಾಮ್ ಸೆಂಟರ್​ನಲ್ಲಿ ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾ; ಶಾಸಕ ರಘುಪತಿ ಭಟ್ ಆಕ್ರೋಶ

ಎಕ್ಸಾಮ್ ಸೆಂಟರ್​ನಲ್ಲಿ ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾ; ಶಾಸಕ ರಘುಪತಿ ಭಟ್ ಆಕ್ರೋಶ
ಉಡುಪಿ ಶಾಸಕ ರಘುಪತಿ ಭಟ್

ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಹೇಳಿದ್ದೇನೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದೇನೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 22, 2022 | 3:04 PM

ಉಡುಪಿ: ಇದೊಂದು ಷಡ್ಯಂತ್ರ ಅನ್ನುವುದು ಸಾಬೀತಾಗಿದೆ. ನಿನ್ನೆ ಸಂಜೆವರಿಗೆ ಫೋನ್ ಮಾಡಿ ಹಾಲ್ ಟಿಕೆಟ್ (Hall Ticket) ಪಡೆಯಲು ಹೇಳಿದ್ದೆವು. ಬೆಳಗಿನವರೆಗೂ ಹಾಲ್ ಟಿಕೆಟ್ ಪಡೆಯಲು ಬರಲಿಲ್ಲ. ಇಂದು ಬೆಳಿಗ್ಗೆ ಒಂಬತ್ತು ಮೂವತ್ತಕ್ಕೆ ಕಾಲೇಜಿಗೆ ಬಂದರು. ಹಿಜಬ್ ತೆಗೆದಿಟ್ಟು ಹೋದರೆ ಮಾತ್ರ ಹಾಲ್ ಟಿಕೆಟ್ ಕೊಡುವುದಾಗಿ ಪ್ರಾಂಶುಪಾಲರು ಹೇಳಿದ್ದರು. ಹಿಜಾಬ್ ತೆಗೆದು ಹಾಲ್ ಟಿಕೆಟ್ ಪಡದುಕೊಂಡು ಹೋಗಿದ್ದಾರೆ. ನಂತರ ಎಕ್ಸಾಮ್ ಸೆಂಟರ್​ಗೆ ಹೋಗಿ ಡ್ರಾಮಾ ಮಾಡಿದ್ದಾರೆ ಎಂದು ಹಿಜಾಬ್ ಹೋರಾಟಗಾರ್ತಿಯರ ಹೈಡ್ರಾಮಾಗೆ ಉಡುಪಿ ಶಾಸಕ ರಘುಪತಿ ಭಟ್ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ಮಾತನಾಡಿದ್ದೇನೆ. ನಾಳೆ ಮತ್ತೆ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಹೇಳಿದ್ದೇನೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದೇನೆ. ಇವರೇನು ಹುಡುಗಾಟಿಕೆ ಆಡುತ್ತಿದ್ದಾರಾ? ಇವರು ಮುಗ್ದ ಮಕ್ಕಳಲ್ಲ ಹೈಕೋರ್ಟ್ನ ಅರ್ಜಿದಾರರು. ಹಿಜಬ್ ಮತ್ತು ಪರೀಕ್ಷೆಗೆ ಸಂಬಂಧ ಇಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೂಡ ಹೇಳಿದ್ದಾರೆ.

ಈ ಮಕ್ಕಳ ಮೇಲೆ ಶಿಸ್ತುಮ, ಕ್ರಿಮಿನಲ್ ಕೇಸ್ ಹಾಕಬೇಕು. ತರಗತಿ ಅಟೆಂಡ್ ಆಗಿಲ್ಲ ಇವರೇನು ಪರೀಕ್ಷೆ ಬರೆಯುತ್ತಾರೆ? ಹಿಜಾಬ್ ಧರಿಸಲು ಬಿಟ್ಟರೂ ಪರೀಕ್ಷೆ ಬರೆಯುವುದಿಲ್ಲ. ನಮ್ಮ ಕಾಲೇಜಿನ ವಾತಾವರಣ ಕೆಡಿಸುವುದೇ ಇವರ ಉದ್ದೇಶ. ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದೇ ಇವರ ಉದ್ದೇಶ. ಈ ವಿದ್ಯಾರ್ಥಿನಿಯರು ಹೈಕೋರ್ಟ್​ಗಿಂತ ಮೇಲಾ? ನಾಳೆ ಮತ್ತೆ ಡ್ರಾಮಾ ಮಾಡಿದರೆ ಸಹಿಸುವುದಿಲ್ಲ. ನಾಳೆ ಬಂದು ಡ್ರಾಮಾ ಮಾಡಿದ್ರೆ ಕ್ರಿಮಿನಲ್ ಕೇಸ್ ಮಾಡುತ್ತೇವೆ ಎಚ್ಚರ. ಇವರು ಪುಂಡರು ದಾರಿಯಲ್ಲಿ ಬಿಟ್ಟವರು ಇವರಿಗೆ ಪರೀಕ್ಷೆ ಬೇಡ ಏನು ಬೇಡ. ಇವರಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ನನಗೆ ಅನೇಕ ಪೋಷಕರು ಕರೆ ಮಾಡಿದ್ದಾರೆ. ಯಾಕೆ ವಿದ್ಯಾರ್ಥಿನಿಯರಿಗೆ ಕಡಿವಾಣ ಹಾಕುವುದಿಲ್ಲ ಎಂದು ಕೇಳುತ್ತಿದ್ದಾರೆ. ನಮ್ಮ ಮಕ್ಕಳಿಗೆ ಪರೀಕ್ಷೆ ಬರೆಯಲು ಅಡ್ಡಿಯಾಗುತ್ತದೆ ಎಂದಿದ್ದಾರೆ. ಪೊಲೀಸ್, ಮೀಡಿಯಾ ಎದುರು ಇತರ ಮಕ್ಕಳು ಗಾಬರಿಯಾಗಿದ್ದಾರೆ. ಈ ಮಕ್ಕಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲ. ಮೀಡಿಯಾದ ಅಟೆನ್ಶನ್ ಪಡೆಯಲು ಹೀಗೆಲ್ಲ ಮಾಡುತ್ತಿದ್ದಾರೆ ಎಂದರು.

ಇನ್ನು ನಾವೇ ಕಾನೂನು ಕ್ರಮ ಕೈಗೊಳ್ಳಲು‌ ಮುಂದಾಗುತ್ತೇವೆ. ನ್ಯಾಯಾಂಗ ನಿಂದನೆಯ ಕೇಸು ಮಾಡುತ್ತೇವೆ. ಈವೆರೆಗೆ ಸಂಘಟನೆಯ ಕೈವಾಡ ಎಂದು ಹೇಳುತ್ತಿದ್ದೆವು. ಈ ಮಕ್ಕಳು, ಇವರ ಪೋಷಕರನ್ನ ತಿನ್ನುವುದಿಲ್ಲವಾ. ಈವರೆಗೂ ಹೆಣ್ಣು ಮಕ್ಕಳು ಮುಗ್ಧರು ಎಂದು ಭಾವಿಸಿದ್ದೆ. ನಾಳೆ ಸಂಘಟನೆಯವರು ಭಯೋತ್ಪಾದಕರಾಗಿ ಅಂತಾರೆ. ಗನ್ ಹಿಡಿದುಕೊಳ್ಳಿ ಅಂತಾರೆ, ಅದನ್ನು ಇವರು ಕೇಳುತ್ತಾರಾ? ಮಾನವ ಬಾಂಬ್ ಆಗಿ ಅಂತಾರೆ ಅದನ್ನೂ ಕೇಳ್ತಾರಾ? ಒಳ್ಳೆ ಇಂಗ್ಲೀಷಿನಲ್ಲಿ ದೊಡ್ಡ ಭಾಷಣ ಮಾಡುತ್ತಾರೆ ಭಾಷೆ ಬರಲ್ವಾ. ಇವರಿಗೆ ಸಾಮಾನ್ಯ ಜ್ಞಾನ ಇಲ್ಲವಾ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ;

ಕಾಂಗ್ರೆಸ್ ದೃಷ್ಟಿಯಲ್ಲಿ ಗಲಭೆ ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ: ಬಿಜೆಪಿ ಆಕ್ರೋಶ

Follow us on

Related Stories

Most Read Stories

Click on your DTH Provider to Add TV9 Kannada