ಉಡುಪಿ: ಸಮಗ್ರ ಕೃಷಿ ವಿಧಾನ ಅನುಸರಿಸಿ ಯಶಸ್ಸು ಕಂಡ ರೈತ; ಇಲ್ಲಿದೆ ವಿವರ
ಇವರು ವೃತ್ತಿಯಲ್ಲಿ ಗೂಡ್ಸ್ ವಾಹನ ಹಾಗೂ ಶಾಲಾ ಬಸ್ ವಾಹನ ಚಾಲಕನೂ ಹೌದು. ಬಿಡುವಿಲ್ಲದ ಕೆಲಸದ ನಡುವೆ ಕೃಷಿ ಎಂದರೆ ಅತೀವವಾದ ಆಸಕ್ತಿ ಮತ್ತು ಶ್ರದ್ಧೆ. ಹೀಗಾಗಿ ಈ ಬಾರಿ ಹಠ ತೊಟ್ಟು ಕೃಷಿ ಮಾಡಿ ಸಾಧನೆ ಮಾಡಿದ್ದಾರೆ. ಇವರ ಕೃಷಿ ಪ್ರೀತಿಗೆ ಹಾಲು ಬೆಂಡೆಕಾಯಿ ಕೈ ಹಿಡಿದಿದ್ದು, ಸಾವಯವ ಕೃಷಿಯ ಮೂಲಕ ಸಾಧನೆ ಮಾಡಿದ್ದಾರೆ.
ಉಡುಪಿ, ಅ. 20: ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ತೆಂಕೋಳಿ ನಿವಾಸಿ ಉಮೇಶ್ ಕಾರ್ಕಡ ಅವರು ವೃತ್ತಿಯಲ್ಲಿ ಗೂಡ್ಸ್ ವಾಹನ ಚಾಲಕರಾಗಿದ್ದು, ಇದರ ಜೊತೆ ಜೊತೆಗೆ ಸ್ಥಳಿಯ ಶಾಲೆಯ ವಾಹನ ಚಾಲಕನಾಗಿ ಬೆಳಿಗ್ಗೆ ಮತ್ತು ಸಂಜೆ ಕೆಲಸ ಮಾಡುತ್ತಾರೆ ಉಮೇಶ್. ಬಿಡುವಿನ ವೇಳೆಯನ್ನು ಕೃಷಿ(Agricultre) ಕೆಲಸಕ್ಕೆ ಮೀಸಲಿಡುತ್ತಿದ್ದ ಉಮೇಶ್, ಈಗ ತಮ್ಮ ವಿಸ್ತಾರವಾದ ಕೃಷಿ ಭೂಮಿಯಲ್ಲಿ ಭರ್ಜರಿ ಫಸಲು ತೆಗೆಯುತ್ತಿದ್ದಾರೆ. ಪತ್ನಿ ಪೂರ್ಣಿಮಾ ಸಹಕಾರದೊಂದಿಗೆ, ಉಮೇಶ್ ಪೂಜಾರಿಯವರು ತಮ್ಮ ಪೂರ್ವಜರು ಬಿಟ್ಟು ಹೋದ ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಐರೋಡಿನ ಸಂಜೀವ ಪೂಜಾರಿಯವರ ಮಾರ್ಗದರ್ಶನ ಪಡೆದು ಕೃಷಿ ಆರಂಭಿಸಿ ಸಕ್ಸ್ಸ್ ಕಂಡಿದ್ದಾರೆ.
ಸಮಗ್ರ ಕೃಷಿಯಿಂದ ಯಶಸ್ಸು ಕಂಡ ರೈತ
ಕರಾವಳಿ ಪ್ರದೇಶದಲ್ಲಿ, ರೈತರು ಸಾಮಾನ್ಯವಾಗಿ ವಾರ್ಷಿಕವಾಗಿ ಒಂದು ಅಥವಾ ಎರಡು ಬೆಳೆಗಳನ್ನು ಬೆಳೆಯುತ್ತಾರೆ. ಆದಾಗ್ಯೂ, ಉಮೇಶ್ ಅವರು ಸಮಗ್ರ ಕೃಷಿ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಜೊತೆಗೆ ವರ್ಷವಿಡೀ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಾರೆ. ಜೂನ್‌ನಲ್ಲಿ ಭತ್ತ, ಬೆಂಡೆಕಾಯಿ, ಬೆಳೆಯುತ್ತಾರೆ. ಆಗಸ್ಟ್‌ನಲ್ಲಿ, ಅವರು ಗೆರ್ಕಿನ್ಸ್, ಬೂದಿ ಸೋರೆಕಾಯಿ ಮತ್ತು ಉದ್ದಿನ ಬೀನ್ಸ್‌ಗಳ ಮೇಲೆ ಕೇಂದ್ರೀಕರಿಸುತ್ತಾರೆ. ನವೆಂಬರ್‌ನಲ್ಲಿ ಅವರು ಕಡಲೆಕಾಯಿ, ದ್ವಿದಳ ಧಾನ್ಯಗಳು, ಹಸಿರು ಮತ್ತು ಕಲ್ಲಂಗಡಿ ಬೆಳೆಯುತ್ತಾರೆ.
ಮನೆಯಲ್ಲಿಯೇ ತಯಾರಿಸಿದ ಕೀಟನಾಶಕ ಬಳಕೆ
ಉಮೇಶ್ ಅವರು ತಮ್ಮ ಬೆಳೆಗಳಿಗೆ ಸಾವಯವ ಗೊಬ್ಬರವನ್ನು ಪ್ರತ್ಯೇಕವಾಗಿ ಬಳಸುತ್ತಾರೆ. ಕೀಟಗಳನ್ನು ಎದುರಿಸಲು ಮನೆಯಲ್ಲಿ ತಯಾರಿಸಿದ ಕೀಟನಾಶಕಗಳನ್ನು ಬಳಸುತ್ತಾರೆ. ಈ ಬಾರಿ ಸಾವಯವ ಹಾಲು ಬಂಡೆ ಕಾಯಿ ಕೃಷಿ ಮಾಡುವ ಮೂಲಕ ಉತ್ತಮ ಲಾಭ ಗಳಿಸಿದ ಉಮೇಶ್ ಸದ್ಯ ಈ ಭಾಗದಲ್ಲಿ ಸುದ್ದಿಯಲ್ಲಿದ್ದಾರೆ. ಒಟ್ಟಾರೆಯಾಗಿ ಚಾಲಕ ವೃತ್ತಿ ಮಾಡಿಕೊಟ್ಟಿದ್ದ ಉಮೇಶ್ ತಮ್ಮ ಕೃಷಿ ಆಸಕ್ತಿಯಿಂದ ಸಾವಯವ ಕೃಷಿಗೆ ಧುಮುಕಿ ಸದ್ಯ ಲಾಭ ಕಂಡಿದ್ದಾರೆ. ಇಬ್ಬರೂ ಬೆಳೆದ ಬೆಳೆಯನ್ನ ವೀಕ್ಷಿಸಲು ಜಿಲ್ಲೆಯ ನಾನಾ ಕಡೆಯಿಂದ ರೈತರು ಗದ್ದೆಗೆ ಭೇಟಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಮಾದರಿ ಕೃಷಿಕರಾಗಿ ಉಮೇಶ್ ಕಾರ್ಕಳ ನಮ್ಮ ಮುಂದೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ