ತನ್ನ ಜಮೀನಿನಲ್ಲಿ ಅನಧಿಕೃತ ನಿರ್ಮಾಣವಾದ ರಸ್ತೆ ಬಂದ್ ಮಾಡಿದ್ದ ರೈತನ ಮೇಲೆ ಕೇಸ್ ಹಾಕಿದ ಪಿಎಸ್ಐ
ಕೊಪ್ಪಳ(Koppala) ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೇನಕೊಪ್ಪದಲ್ಲಿ ಜಮೀನಿನಲ್ಲಿ ಅನಧಿಕೃತ ರಸ್ತೆ ಮಾಡಿದ್ದನ್ನ ಖಂಡಿಸಿ, ರಸ್ತೆ ಬಂದ್ ಮಾಡಿದ್ದಕ್ಕೆ ರೈತನ ಮೇಲೆ ಹಲ್ಲೆ ಮಾಡಿ ಆತನ ಮೇಲೆಯೇ ಪಿಎಸ್ಐ(PSI) ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಕೊಪ್ಪಳ, ಅ.20: ತಮ್ಮ ಜಮೀನಿನಲ್ಲಿ ಅನಧಿಕೃತ ರಸ್ತೆ ಮಾಡಿದ್ದನ್ನ ಖಂಡಿಸಿ, ರಸ್ತೆ ಬಂದ್ ಮಾಡಿದ್ದಕ್ಕೆ ರೈತನ ಮೇಲೆ ಹಲ್ಲೆ ಮಾಡಿ ಆತನ ಮೇಲೆಯೇ ಪಿಎಸ್ಐ(PSI) ಪ್ರಕರಣ ದಾಖಲಿಸಿದ ಘಟನೆ ಕೊಪ್ಪಳ(Koppala) ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೇನಕೊಪ್ಪದಲ್ಲಿ ನಡೆದಿದೆ. ಚಿಕ್ಕೇನಕೊಪ್ಪದ ರೈತ ಮಹಾಂತಯ್ಯ ಅಂಗಡಿ ಮೇಲೆ ಶಾಂತಿ ಸುವ್ಯವಸ್ಥೆ ಭಂಗ ಉಂಟು ಮಾಡಿರುವ ಆರೋಪದಡಿ ಕೇಸ್ ದಾಖಲು ಮಾಡಲಾಗಿದೆ. ಹೌದು, ರೈತರಿಗೆ ಹಾಗೂ ಪವನಶಕ್ತಿ ಕಂಪನಿಯವರಿಗೆ ಧಮ್ಕಿ ಹಾಕುತ್ತಿದ್ದಾನೆ ಎಂದು ಆರೋಪಿಸಿ ಜೊತೆಗೆ ಈತನ ವಿರುದ್ದ 2008 ರಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಉಲ್ಲೇಖಿಸಿ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರೈತರ ಟ್ರ್ಯಾಕ್ಟರ್ ಕಳ್ಳತನ ಮಾಡ್ತಿದ್ದ ಖದೀಮರ ಬಂಧನ
ಕೊಪ್ಪಳ: ಟ್ರ್ಯಾಕ್ಟರ್ ಕಳ್ಳತನ ಮಾಡುತ್ತಿದ್ದ ಕಿರಣ್ ಕುರ್ತಕೋಟಿ ಹಾಗೂ ರಮೇಶ್ ಬೂದಿಹಾಳನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆರೋಪಿಗಳ ಬಳಿ ಇದ್ದ 24 ಲಕ್ಷ ಮೌಲ್ಯದ 5 ಟ್ರ್ಯಾಕ್ಟರ್ ಇಂಜಿನ್ ಜಪ್ತಿ ಮಾಡಲಾಗಿದೆ. ಇವರು ಕೊಪ್ಪಳ, ಮಂಡ್ಯ, ಗದಗ ಹಾಗೂ ದಾವಣಗೆರೆಯಲ್ಲಿ ಕಳ್ಳತನ ಮಾಡಿದ್ದರು. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಈ ಹಿನ್ನಲೆ ಪ್ರಕರಣದ ಜಾಡು ಹಿಡಿದು ಹೋಗಿದ್ದ ಪೊಲೀಸರ ಬಲೆಗೆ ಖದೀಮರು ಬಿದ್ದಿದ್ದಾರೆ.
ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವೆ ದೊಣ್ಣೆಗಳಿಂದ ಬಡಿದಾಟ
ಹಾಸನ: ಆಸ್ತಿ ಹಂಚಿಕೆ ವಿಚಾರಕ್ಕೆ ಸಂಬಂದಿಕರು ಹೊಡೆದಾಟ ನಡೆಸಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಸಮೀಪದ ಕೋಡಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಕಾಂತರಾಜು, ಗಂಗಾಧರ್ ಹಾಗೂ ರತ್ನಾ ಸೇರಿ ನಾಲ್ವರಿಗೆ ಗಾಯವಾಗಿದೆ. ಇನ್ನು ಗಂಗಾಧರ್ ಸಹೋದರಿ ಗೀತಾ ಹಾಗೂ ಮಕ್ಕಳ ವಿರುದ್ಧ ಹಲ್ಲೆ ಮಾಡಿ, ಇದೇ ಈ ವೇಳೆ 5 ಲಕ್ಷ ರೂ ಹಣ ಕಳವು ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ನಿನ್ನೆ(ಅ.19) ತೆಂಗಿನಕಾಯಿ ವಿಚಾರಕ್ಕೆ ಜಗಳವಾಡಿದ್ದ ಗಂಗಾಧರ್ ಹಾಗೂ ತಂಗಿ ಗೀತಾ, ನಂತರ ಹಳೇಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೇ ವಿಚಾರಕ್ಕೆ ತಡರಾತ್ರಿ ಎರಡು ಕುಟುಂಬಗಳ ನಡುವೆ ಗಲಾಟೆ ಆಗಿದ್ದು, ಗಲಾಟೆ ವೇಳೆ ಗೀತಾ ಪುತ್ರ ಶ್ರೀಧರ್ಗೂ ಗಾಯವಾಗಿದೆ. ಕೂಡಲೇ ಇವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹಳೇಬೀಡು ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ