ನಾನು ಟ್ವೀಟ್ ಮಾಡದಿದ್ದರೆ ಪ್ರಕರಣ ಹೊರಗೆ ಬರುತ್ತಿರಲಿಲ್ಲ: ಮಹಿಳಾ ಹೋರಾಟಗಾರ್ತಿ ರಶ್ಮಿ ಸಾಮಂತ್
ಉಡುಪಿ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಹೋರಾಟಗಾರ್ತಿ ರಶ್ಮಿ ಸಾಮಂತ್ ಟಿವಿ9 ಜೊತೆ ಮಾತನಾಡಿದ್ದು, ನಾನು ಟ್ವೀಟ್ ಮಾಡದಿದ್ದರೆ ಪ್ರಕರಣ ಹೊರಗೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಉಡುಪಿ, ಆಗಸ್ಟ್ 03: ಉಡುಪಿ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಚಿತ್ರೀಕರಣ ಪ್ರಕರಣಕದ ತನಿಖೆ ಸದ್ಯ ತೀವ್ರಗೊಂಡಿದೆ. ಆರೋಪಿತ ವಿದ್ಯಾರ್ಥಿನಿಯರ ಸ್ನೇಹಿತರ ಮೊಬೈಲ್ಗಳನ್ನು ಕೂಡ ಸೀಜ್ ಮಾಡಲಾಗಿದೆ. ಇದರ ಮಧ್ಯೆ ಪ್ರಕರಣ ಕುರಿತಾಗಿ ಟ್ವೀಟ್ ಮಾಡಿದ್ದ ಮಹಿಳಾ ಹೋರಾಟಗಾರ್ತಿ ರಶ್ಮಿ ಸಾಮಂತ್ (Rashmi Samant) ಪ್ರತಿಕ್ರಿಯಿಸಿದ್ದು, ನಾನು ಟ್ವೀಟ್ ಮಾಡದಿದ್ದರೆ ಪ್ರಕರಣ ಹೊರಗೆ ಬರುತ್ತಿರಲಿಲ್ಲ ಎಂದಿದ್ದಾರೆ.
ನಾನು ಧ್ವನಿ ಎತ್ತದಿದ್ದರೆ ಪೊಲೀಸರು ಪ್ರಕರಣ ದಾಖಲಿಸುತ್ತಿರಲಿಲ್ಲ: ರಶ್ಮಿ ಸಮಂತ್
ಉಡುಪಿಯಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ನಾನು ಧ್ವನಿ ಎತ್ತದಿದ್ದರೆ ಪೊಲೀಸರು ಪ್ರಕರಣ ದಾಖಲಿಸುತ್ತಿರಲಿಲ್ಲ. ಸಮಾಜದಲ್ಲಿ ತಪ್ಪು ನಡೆದಾಗ ಪ್ರತಿಭಟಸಲೇಬೇಕು. ಪೊಲೀಸರು ನಿರ್ಲಕ್ಷ್ಯಿಸಿದರೆ ನಾಗರಿಕರು ಪ್ರತಿಭಟನೆ ಮಾಡಲೇಬೇಕು. ಘಟನೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ಆಗಿದೆ ಎಂದರು.
ಇದನ್ನೂ ಓದಿ: ಪೊರಕೆ ಹಿಡಿಯುವ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿಯಲು ಸಿದ್ಧರಾಗಿ; ಉಡುಪಿಯಲ್ಲಿ ಮಹಿಳೆಯರಿಗೆ ಶರಣ್ ಪಂಪ್ವೆಲ್ ಕರೆ
ಉನ್ನತ ಮಟ್ಟದ ತನಿಖೆಯಾಗಬೇಕು
ಪೊಲೀಸರ ತನಿಖೆ ಚುರುಕಾಗಬೇಕಾದರೆ ಪ್ರತಿಭಟನೆ ಮಾಡಬೇಕು. ಇಲ್ಲದಿದ್ದರೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುವುದಿಲ್ಲ. ಪ್ರಕರಣದ ಬಗ್ಗೆ ಧ್ವನಿ ಎತ್ತಿದವರ ಮನೆಗೆ ಪೊಲೀಸರನ್ನು ಕಳಿಸಲಾಗಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಹೇಳಿದರು.
ಸದ್ಯ ಪ್ರಕರಣ ರಾಜ್ಯ, ದೇಶದಾದ್ಯಂತ ಸಂಚಲನವನ್ನೇ ಸೃಷ್ಟಿಸಿದೆ. ಪ್ರತಿಪಕ್ಷ ಬಿಜೆಪಿ ಕಾರ್ಯಕರ್ತರು ಈಗಾಗಲೇ ಪ್ರತಿಭಟನೆಗಳ ಮೇಲೆ ಪ್ರತಿಭಟನೆ ಮಾಡುತ್ತಾ, ಸರ್ಕಾರದ ಮೇಲೆ ಸಮಗ್ರ ತನಿಖೆಗಾಗಿ ಒತ್ತಡ ಹೇರಿತ್ತು. ಪ್ರಕರಣದ ಸಂಬಂಧ ಈಗಾಗಲೇ ತನಿಖಾ ತಂಡ ರಚಿಸಿರುವ ಪೊಲೀಸ್, ತನಿಖೆಯನ್ನು ತೀವ್ರಗೊಳಿಸಿದೆ. ಆರೋಪಿತ ವಿದ್ಯಾರ್ಥಿಗಳನ್ನು ಈಗಾಗಲೇ ವಿಚಾರಣೆಗೆ ಒಳಪಿಡಿಸಲಾಗಿದ್ದು, ಅವರ ಮೊಬೈಲ್ಗಳನ್ನ ಸೀಜ್ ಮಾಡಿ ಎಫ್ಎಸ್ಎಲ್ಗೆ ರವಾನಿಸಿತ್ತು.
ರಜೆ ಮುಂದೂಡಿಕೆ
ಆರೋಪಿತ ವಿದ್ಯಾರ್ಥಿನಿಯರು ಸ್ನೇಹಿತರಿಗೆ ಖಾಸಗಿ ವಿಡಿಯೋಗಳನ್ನು ಕಳುಹಿಸಿದ್ದಾರೆ ಎಂಬ ಆರೋಪ ಇರುವ ಹಿನ್ನೆಲೆ, ಸ್ನೇಹಿತರ ಮೊಬೈಲ್ನ್ನು ಸೀಜ್ ಮಾಡಲಾಗಿದೆ. ಈ ನಡುವೆ ವಿವಾದ ಕೇಂದ್ರ ಬಿಂದುವಾಗಿರುವ ಖಾಸಗಿ ಶಾಲೆಗಳಿಗೆ ಅನಿರ್ದಿಷ್ಟ ಅವಧಿಗೆ ರಜೆ ಮುಂದೂಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:06 pm, Thu, 3 August 23