ಲಾಕ್ಡೌನ್ ಗಾಳಿಗೆ ತೂರಿ SSLC ತರಗತಿ ನಡೆಸಲು ಯತ್ನ! ಎಲ್ಲಿ?
ಉಡುಪಿ: ನಿಯಾಮವಳಿ ಉಲ್ಲಂಘಿಸಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಮುಂದಾದ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ. ಲಾಕ್ಡೌನ್, ನಿಷೇಧಾಜ್ಞೆಗಳನ್ನು ಮೀರಿ ಕಾರ್ಕಳ ಸರ್ಕಾರಿ ಬೋರ್ಡ್ ಹೈಸ್ಕೂಲ್ ಶಾಲೆಯ SSLC ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುವ ಪ್ರಯತ್ನ ನಡೆದಿತ್ತು. ಶುಕ್ರವಾರ ವಿದ್ಯಾರ್ಥಿಗಳಿಗೆ ಏಕಾಏಕಿ ತರಗತಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ವಿದ್ಯಾರ್ಥಿಗಳು ಹರಸಾಹಸ ಪಟ್ಟು ತರಗತಿಗಳಿಗೆ ಹಾಜರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಅದ ತೊಂದರೆ ಬಗ್ಗೆ ಮುಖ್ಯೋಪಾಧ್ಯಾಯರನ್ನು ವಿಚಾರಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್ ಸೂಚನೆಯಂತೆ ತರಗತಿಗಳನ್ನು ನಡೆಸಲಾಗಿದೆ ಎನ್ನುತ್ತಾರೆ. ಈ ಬಗ್ಗೆ ಜವಾಬ್ದಾರಿ […]
ಉಡುಪಿ: ನಿಯಾಮವಳಿ ಉಲ್ಲಂಘಿಸಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಮುಂದಾದ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ. ಲಾಕ್ಡೌನ್, ನಿಷೇಧಾಜ್ಞೆಗಳನ್ನು ಮೀರಿ ಕಾರ್ಕಳ ಸರ್ಕಾರಿ ಬೋರ್ಡ್ ಹೈಸ್ಕೂಲ್ ಶಾಲೆಯ SSLC ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುವ ಪ್ರಯತ್ನ ನಡೆದಿತ್ತು. ಶುಕ್ರವಾರ ವಿದ್ಯಾರ್ಥಿಗಳಿಗೆ ಏಕಾಏಕಿ ತರಗತಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.
ವಿದ್ಯಾರ್ಥಿಗಳು ಹರಸಾಹಸ ಪಟ್ಟು ತರಗತಿಗಳಿಗೆ ಹಾಜರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಅದ ತೊಂದರೆ ಬಗ್ಗೆ ಮುಖ್ಯೋಪಾಧ್ಯಾಯರನ್ನು ವಿಚಾರಿಸಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್ ಸೂಚನೆಯಂತೆ ತರಗತಿಗಳನ್ನು ನಡೆಸಲಾಗಿದೆ ಎನ್ನುತ್ತಾರೆ. ಈ ಬಗ್ಗೆ ಜವಾಬ್ದಾರಿ ಇಲ್ಲದಂತೆ ತಾಲೂಕು ಶಿಕ್ಷಣ ಅಧಿಕಾರಿಗಳು ವರ್ತಿಸಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಕಿಲೋ ಮೀಟರ್ ದೂರದಿಂದ ನಡೆದು ಬಂದ ಮಕ್ಕಳು: ಕಾರ್ಕಳ ತಾಲೂಕಿನ ಈ ಭಾಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲು ಖಾಸಗಿ ಸಾರಿಗೆ ಸಂಸ್ಥೆಗಳನ್ನೇ ಅವಲಂಬಿಸಿದ್ದು, ಖಾಸಗಿ ಬಸ್ಗಳು ರಸ್ತೆಗೆ ಇಳಿಯದ ಹಿನ್ನೆಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಕಿಲೋ ಮೀಟರ್ ಗಟ್ಟಲೆ ದೂರದಿಂದ ನಡೆದುಕೊಂಡು ಬಂದಿದ್ದಾರೆ. ಮತ್ತೆ ಕೆಲವರು ಸರಕು ಸಾಗಿಸುವ ಗೂಡ್ಸ್ ವಾಹನಗಳಲ್ಲಿ ಏರಿಕೊಂಡು ಶಾಲೆಗೆ ಬಂದು ತರಗತಿಗೆ ಹಾಜರಾಗಿದ್ದಾರೆ.
ಈ ಶಾಲೆಯಲ್ಲಿ ಇಂತಹದೊಂದು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಹೇಗೆ ಸಾಧ್ಯ? ಎಂದು ಅನೇಕ ಪೋಷಕರು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿ ಆದೇಶದಂತೆ ಮಕ್ಕಳನ್ನು ತರಗತಿಗೆ ಕರೆಸಿಕೊಳ್ಳದಂತೆ ನಾವು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದು ಡಿಡಿಪಿಐ ತಿಳಿಸಿದ್ದಾರೆ. SSLC ಪರೀಕ್ಷೆ ಘೋಷಣೆಯಾದ ಹಿನ್ನೆಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ನೀಡಲು ಮುಖ್ಯೋಪಾಧ್ಯಾಯರು ಮುಂದಾಗಿದ್ದಾರೆ. ಆದರೆ ಸರ್ಕಾರ ಈ ವಿಶೇಷ ತರಗತಿಗೆ ಅವಕಾಶ ನೀಡಿಲ್ಲ. ಸದ್ಯ ತರಗತಿ ರದ್ದುಮಾಡಲಾಗಿದೆ ಎಂದು ಡಿಡಿಪಿಐ ಶೇಷಶಯನ ಕಾರಿಂಜ ಹೇಳಿದ್ದಾರೆ.
Published On - 2:02 pm, Sat, 23 May 20