AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಸಂಸ್ಕೃತಿ, ದೇಶಕ್ಕೆ ಬೆಲೆ ಕೊಡುವ ಸರಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ: ಪೇಜಾವರ ಶ್ರೀ

ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನೆಲೆ ಚಿತ್ರದುರ್ಗದಿಂದ ಆರಂಭಿಸಿದ ಶೌರ್ಯ ಜಾಗರಣ ಯಾತ್ರೆ ಇಂದು ಉಡುಪಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವದ ಮೂಲಕ ಸಮಾರೋಪಗೊಂಡಿತು. ಸಮಾವೇಶದಲ್ಲಿ ಮಾತನಾಡಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮವನ್ನು ವಿದೇಶಿಗರು ಅಪ್ಪಿ ಒಪ್ಪಲು ವಿಹಿಂಪ ಕಾರಣ ಎಂದರು.

ನಮ್ಮ ಸಂಸ್ಕೃತಿ, ದೇಶಕ್ಕೆ ಬೆಲೆ ಕೊಡುವ ಸರಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ: ಪೇಜಾವರ ಶ್ರೀ
ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Oct 10, 2023 | 9:04 PM

Share

ಉಡುಪಿ, ಅ.10: ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನೆಲೆ ಚಿತ್ರದುರ್ಗದಿಂದ ಆರಂಭಿಸಿದ ಶೌರ್ಯ ಜಾಗರಣ ಯಾತ್ರೆ ಇಂದು ಉಡುಪಿಯಲ್ಲಿ (Udupi) ಬೃಹತ್ ಹಿಂದೂ ಸಮಾಜೋತ್ಸವದ ಮೂಲಕ ಸಮಾರೋಪಗೊಂಡಿತು. ಸಮಾವೇಶದಲ್ಲಿ ಮಾತನಾಡಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Theertha Swamiji) ಮಾತನಾಡಿ, ಸನಾತನ ಧರ್ಮವನ್ನು ವಿದೇಶಿಗರು ಅಪ್ಪಿ ಒಪ್ಪಲು ವಿಹಿಂಪ ಕಾರಣ ಎಂದರು.

ಶಿವಮೊಗ್ಗದಲ್ಲಿ ಹಿಂದೂಗಳ ಮನೆಗಳಿಗೆ ಕಲ್ಲು ಎಸೆದ ಮುಸ್ಲಿಂ ಪುಡಂರ ಕೃತ್ಯವನ್ನು ಖಂಡಿಸಿದ ಪೇಜಾವರ ಶ್ರೀಗಳು, ನಾವು ಹಿಂದೂಗಳು ಶಾಂತಿ ಪ್ರೀಯರು. ಧರ್ಮದ ಪ್ರತೀಕ ಶ್ರೀರಾಮ ಚಂದ್ರ, ಅವನೇ ನಮಗೆ ಆದರ್ಶ. ಈ ದೇಶದ ಕಣ ಕಣವೂ ಪವಿತ್ರ, ಮಾತೆಯರು ಸ್ವರ್ಗಕ್ಕೆ ಮಿಗಿಲು. ನಾವು ಕಲ್ಲೆಸೆಯಲ್ಲ, ಕೊಳ್ಳಿ ಇಡಲ್ಲ ತಲೆ ಒಡೆಯುವುದಿಲ್ಲ. ಒಳ್ಳೆ ವಿಚಾರದಲ್ಲಿ ನಮ್ಮ ಹೃದಯ ಮನೆ ತರೆದಿರುತ್ತದೆ. ಬಿರುಗಾಳಿ ಬೀಸಿದರೆ ಎದೆಯೊಡ್ಡಿ ನಿಲ್ಲಲೂ ನಾವು ಸಿದ್ಧ ಎಂದರು.

ಇದನ್ನೂ ಓದಿ: ಶಿವಮೊಗ್ಗ ಘಟನೆ ಮಂಗಳೂರಿನಲ್ಲಿ ಆಗುತ್ತಿದ್ದರೆ ದಂಗೆಕೋರರ ಮೈ ಹುಡಿಯಾಗುತ್ತಿತ್ತು: ಶರಣ್ ಪಂಪ್​ವೆಲ್

ಸನಾತನ ಧರ್ಮವನ್ನು ವಿದೇಶಿಗರು ಅಪ್ಪಿ ಒಪ್ಪಲು ವಿಹಿಂಪ ಕಾರಣ. ನಮ್ಮ ದೇಶವನ್ನು ಭಾರತ ಎನ್ನಲು ನಾಚಿಕೆ ಹೇಸಿಗೆ ಪಡುವವರರು ಇದ್ದಾರೆ. ದೇಶ ವಿರೋಧಿಗಳು ಒಟ್ಟಾಗುತ್ತಾರೆ ಎಂದರೆ ನಾವೂ ಒಂದಾಗಬೇಕು. ನಮ್ಮ ಸಂಸ್ಕೃತಿ, ದೇಶ, ವೇಷಭೂಷಣಕ್ಕೆ ಬೆಲೆ ಕೊಡುವ ಸರಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಹಿಂದೂ ಸಮಾಜೋತ್ಸವಕ್ಕೂ ಮುನ್ನ ಉಡುಪಿಯಲ್ಲಿ ಶೌರ್ಯ ಜಾಗರಣಾ ಯಾತ್ರಾ ಮೆರವಣಿಗೆ ನಡೆಯಿತು. ಇದಕ್ಕೆ ಬಿಜೆಪಿ ಮಾಜಿ ಸಚಿವ ಪ್ರಮೋದ್​​ ಮಧ್ವರಾಜ್​​ ಅವರು ಚಾಲನೆ ನೀಡಿದರು. ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಯಾತ್ರೆ ನಡೆಯಿತು. ಈ ವೇಳೆ ಹಿಂದೂ ಧರ್ಮದ ಶೌರ್ಯ ಸಾರುವ ಟ್ಯಾಬ್ಲೋ, ಭಜನಾ ತಂಡ, ಸ್ತಬ್ಧಚಿತ್ರಗಳು ಇದ್ದವು. ಜಾಥಾದಲ್ಲಿ ಶಾಸಕ ಕೋಟ ಶ್ರೀನಿವಾಸ್ ಪೂಜಾರಿ, ಯಶ್​ಪಾಲ್​​ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು, ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿಯಾದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?