AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಹಿಜಾಬ್ ವಿವಾದದ ಹಿಂದೆ ವಿದೇಶಿ ಕುಮ್ಮಕ್ಕು: ಉಡುಪಿ ಶಾಸಕ ರಘುಪತಿ ಭಟ್ ಆರೋಪ

MLA Raghupati Bhat: ಈ ಪ್ರಕರಣ ಮೊದಲು ಪಾಕಿಸ್ತಾನಕ್ಕೆ ತಲುಪಿದೆ. ಇದನ್ನು ದೊಡ್ಡ ವಿವಾದವಾಗಿ ಬೆಳೆಸಬೇಕು ಎಂದು ರಾಷ್ಟ್ರಮಟ್ಟದಲ್ಲಿ ಷಡ್ಯಂತ್ರ ನಡೆಸಲಾಯಿತು ಎಂದು ಶಾಸಕ ರಘುಪತಿ ಭಟ್ ಆರೋಪಿಸಿದರು.

ಉಡುಪಿ ಹಿಜಾಬ್ ವಿವಾದದ ಹಿಂದೆ ವಿದೇಶಿ ಕುಮ್ಮಕ್ಕು: ಉಡುಪಿ ಶಾಸಕ ರಘುಪತಿ ಭಟ್ ಆರೋಪ
ಉಡುಪಿ ಶಾಸಕ ರಘುಪತಿ ಭಟ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 09, 2022 | 3:54 PM

ಉಡುಪಿ: ನಗರದಲ್ಲಿ ಹಿಜಾಬ್​ ವಿವಾದ ದೊಡ್ಡಮಟ್ಟದಲ್ಲಿ ಬೆಳೆಯಲು ವಿದೇಶಿ ಕುಮ್ಮಕ್ಕು ಕಾರಣ ಎಂದು ಶಾಸಕ ರಘುಪತಿ ಭಟ್ (MLA Raghupati Bhat) ಗಂಭೀರ ಅರೋಪ ಮಾಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಈ ಪ್ರಕರಣ ಮೊದಲು ಪಾಕಿಸ್ತಾನಕ್ಕೆ ತಲುಪಿದೆ. ಇದನ್ನು ದೊಡ್ಡ ವಿವಾದವಾಗಿ ಬೆಳೆಸಬೇಕು ಎಂದು ರಾಷ್ಟ್ರಮಟ್ಟದಲ್ಲಿ ಷಡ್ಯಂತ್ರ ನಡೆಸಲಾಯಿತು. ಈ ಬಗ್ಗೆ ಸರ್ಕಾರ ಗುಪ್ತವಾಗಿ ತನಿಖೆ ಆರಂಭ ಮಾಡಿದೆ‌ ಎಂದು ತಿಳಿಸಿದರು. ಈ ವಿವಾದದ ಹಿನ್ನೆಲೆಯಲ್ಲಿ ಎಸ್​ಡಿಪಿಐ, ಸಿಎಫ್ಐ, ಪಿಎಫ್ಐ ಇರುವುದು ದೃಢಪಟ್ಟಿದೆ. ಇವರು ಮಣಿಪಾಲದ ಗುಪ್ತಸ್ಥಳದಲ್ಲಿ 12 ಹುಡುಗಿಯರಿಗೆ ತರಬೇತಿ ಕೊಟ್ಟಿದ್ದಾರೆ. ಗುಪ್ತಸ್ಥಳದಲ್ಲಿ ಅವರನ್ನು ಇರಿಸಿ ಪ್ರಚೋದನೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಮುಸ್ಲಿಂ ಹೆಣ್ಣುಮಕ್ಕಳನ್ನು ಒಂದೇ ಸ್ಥಳದಲ್ಲಿ ಇರಿಸಿ ವ್ಯವಸ್ಥಿತವಾಗಿ ತರಬೇತಿ ಕೊಟ್ಟಿದ್ದಾರೆ. ಸತತ ಪ್ರವಚನಗಳ ಮೂಲಕ ಅವರಿಗೆ ಹಿಂದೂ ಹೆಣ್ಣುಮಕ್ಕಳನ್ನು ನೋಡಿದಾಗ ಆಕ್ರೋಶ ಬರುವ ಮನಃಸ್ಥಿತಿ ರೂಪಿಸಿದ್ದಾರೆ. ಇಂಥದ್ದೊಂದು ತರಬೇತಿಯಲ್ಲಿ ಪಾಲ್ಗೊಂಡಿದ್ದ ಹುಡುಗಿಯೇ ಮಾಹಿತಿ ನೀಡಿದ್ದಾಳೆ ಎಂದರು. ಈ ತರಬೇತಿಯ ನಂತರವೇ ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭವಾಯಿತು ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಹಿಜಾಬ್ ಬೇಕೆಂದು ಹೋರಾಡುತ್ತಿರುವವರು ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಅಂಶದಿಂದ ಹಿಡಿದು ಹಣಕಾಸು ವ್ಯವಹಾರ, ಮೊಬೈಲ್ ಸಂಪರ್ಕಗಳ ಮಾಹಿತಿಯನ್ನು ತನಿಖೆ ವೇಳೆ ಪರಿಶೀಲಿಸಲಾಗುವುದು ಎಂದರು.

ಆರಂಭದಲ್ಲಿ ಹಿಜಾಬ್ ಕುರಿತು ಬೇಡಿಕೆ ಕೇಳಿಬಂದಾಗ ನಾವು ಒಪ್ಪಿರಲಿಲ್ಲ. ವಿವಾದ ಇಂದು ಈ ಹಂತಕ್ಕೆ ತಲುಪಿದೆ. ದೇಶ-ವಿದೇಶಗಳ ಮಾಧ್ಯಮಗಳು ಉಡುಪಿ ಹೆಸರು ಹೇಳುತ್ತಿವೆ. ವಾಸ್ತವ ಎಂದರೆ ಕಾಲೇಜಿನಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಎಂದು ಪರಿಗಣಿಸಲಾಗುತ್ತದೆ. ಯಾರನ್ನೂ ಅವರ ಧರ್ಮದ ಹಿನ್ನೆಲೆಯಿಂದ ಅಳೆಯುವುದಿಲ್ಲ. ಇಂದು ನಾವು ವಿವಾದ ಆರಂಭಿಸಿದ್ದು ಯಾರು ಎಂಬುದನ್ನು ಮೊದಲು ಪರಿಶೀಲಿಸಬೇಕಿದೆ ಎಂದರು.

ಉಡುಪಿಯಲ್ಲಿ ಹಿಜಾಬ್​ಗಾಗಿ ಮೊದಲು 12 ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಕಾಲೇಜು ಸಿಬ್ಬಂದಿ ಇವರ ಜೊತೆಗೆ ಮಾತುಕತೆ ನಡೆಸಿತ್ತು. ಅನಂತರ 6 ಮಂದಿ ಹಿಜಾಬ್ ಹೋರಾಟದಿಂದ ಹಿಂದೆ ಸರಿದಿದ್ದರು. ಆದರೆ ಈ ನಡುವೆ ಉಡುಪಿಯಲ್ಲಿ ನಡೆಯುತ್ತಿರುವ ಹಿಜಾಬ್ ಹೋರಾಟವನ್ನು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ ಅಷ್ಟು ಬೇಗ ಈ ವಿಚಾರ ಅಲ್ಲಿಗೆ ಹೋಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದರು.

ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಹೈಕೋರ್ಟ್ ನೀಡುವ ತೀರ್ಪಿನ ಪ್ರಕಾರವೇ ಸರ್ಕಾರ ಮುಂದಿನ ಹೆಜ್ಜೆ ಇರಿಸಲಿದೆ. ಮೇಲ್ಮನವಿ ಸಲ್ಲಿಸುವ ಅವಕಾಶಗಳೂ ಮುಕ್ತವಾಗಿವೆ ಎಂದು ವಿವರಿಸಿದರು.

ಇದನ್ನೂ ಓದಿ: ಉಡುಪಿಯಲ್ಲಿ ಹಿಜಾಬ್ ವಿವಾದ ನಿಯಂತ್ರಣಕ್ಕೆ ಶತಪ್ರಯತ್ನ ಮಾಡಿದ್ದೆ: ಶಾಸಕ ರಘುಪತಿ ಭಟ್

ಇದನ್ನೂ ಓದಿ: ಮಕ್ಕಳು ಕಾಲೇಜಿಗೆ ಹೋಗಲು ಏನು ಧರಿಸಬೇಕು ಏನು ಧರಿಸಬಾರದು ಅಂತ ಹೇಳಲು ರಘುಪತಿ ಭಟ್ ಯಾರು? ಸಿದ್ದರಾಮಯ್ಯ

Published On - 3:53 pm, Wed, 9 February 22

ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ