AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿ ಶವದ ಜತೆ 4 ದಿನ ಕಳೆದ ಬುದ್ಧಿಮಾಂದ್ಯ ಪುತ್ರಿ: ಅನ್ನ, ನೀರಿಲ್ಲದೇ ದುರಂತ ಅಂತ್ಯ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ದಾಸನಹಾಡಿ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಮದುಮೇಹ, ರಕ್ತದೊತ್ತಡದಿಂದ ಬಳುತ್ತಿದ್ದ ತಾಯಿ ಮೃತಪ್ಪಟ್ಟಿದ್ದರೂ, ಇದನ್ನು ಅರಿಯದ ಬುದ್ಧಿಮಾಂದ್ಯ ಪುತ್ರಿ, ಜನ್ಮದಾತೆಯ ಶವದ ಜೊತೆ ನಾಲ್ಕು ದಿನ ಕಳೆದಿದ್ದಾಳೆ. ಮುಂದೇನಾಯ್ತು ಈ ಸ್ಟೋರಿ ಓದಿ.

ತಾಯಿ ಶವದ ಜತೆ 4 ದಿನ ಕಳೆದ ಬುದ್ಧಿಮಾಂದ್ಯ ಪುತ್ರಿ: ಅನ್ನ, ನೀರಿಲ್ಲದೇ ದುರಂತ ಅಂತ್ಯ
ಮಗಳು ಪ್ರಗತಿ ಶೆಟ್ಟಿ
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ವಿವೇಕ ಬಿರಾದಾರ

Updated on:May 19, 2024 | 1:58 PM

ಉಡುಪಿ, ಮೇ 19: ನಮ್ಮ ಜೀವನದಲ್ಲಿ ಸಂಬಂಧಗಳಿಗೆ ಬಹಳ ಪ್ರಾಮುಖ್ಯ ಇದೆ. ಅದರಲ್ಲಂತೂ ತಾಯಿ-ಮಗಳ ಸಂಬಂಧ ಅತ್ಯಂತ ಶ್ರೇಷ್ಠವಾದದ್ದು. ತಾಯಿ-ಮಗಳ (Mother-Doughter) ಸಂಬಂಧ ವಾತ್ಸಲ್ಯಪೂರ್ಣ ಸಂಬಂಧ ಎನ್ನುತ್ತಾರೆ. ಸಾವಿನಲ್ಲೂ ಒಂದಾದ ದಂಪತಿ, ಪ್ರೇಮಿಗಳು ಅಂತ ನಾವು ಕೇಳಿರುತ್ತೇವೆ, ನೋಡಿರುವುತ್ತೇವೆ ಅಥವಾ ಓದಿರುತ್ತೇವೆ. ಆದರೆ ಇಲ್ಲಿ ತಾಯಿ-ಮಗಳು ಸಾವಿನಲ್ಲೂ ಒಂದಾಗಿದ್ದಾರೆ. ಜನ್ಮಕೊಟ್ಟವಳ ಜೊತೆಗೆ ಮಗಳು ಕೂಡ ಸ್ವರ್ಗವಾಸಿಯಾಗಿದ್ದಾಳೆ. ಹೌದು ಉಡುಪಿ (Udupi) ಜಿಲ್ಲೆ ಕುಂದಾಪುರ (Kundapur) ತಾಲೂಕಿನ ದಾಸನಹಾಡಿ ಗ್ರಾಮದ ನಿವಾಸಿಗಳಾಗಿದ್ದ ತಾಯಿ ಜಯಂತಿ ಶೆಟ್ಟಿ (62), ಮಗಳು ಪ್ರಗತಿ ಶೆಟ್ಟಿ (32) ನಿಧನರಾಗಿದ್ದಾರೆ.

ಜಯಂತಿ ಶೆಟ್ಟಿ ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದರು. ಇನ್ನು ಪುತ್ರಿ ಪ್ರಗತಿ ಶೆಟ್ಟಿ ಬುದ್ಧಿಮಾಂದ್ಯರಾಗಿದ್ದರು. ಕಾಯಿಲೆಯಿಂದ ಬಳುತ್ತಿದ್ದ ಜಯಂತಿ ಶೆಟ್ಟಿ ನಾಲ್ಕು ದಿನದಿಂದೆ ಮನೆಯಲ್ಲಿ ಮೃತಪಟ್ಟಿದ್ದಾರೆ. ಇದನ್ನು ಅರಿಯದ ಬುದ್ಧಿಮಾಂದ್ಯ ಪುತ್ರಿ ಪ್ರಗತಿ ಶೆಟ್ಟಿ ತಾಯಿಯ ಶವದ ಜೊತೆಗೆ ನಾಲ್ಕು ದಿನ ಅನ್ನ, ನೀರಿಲ್ಲದೆ ಕಳೆದಿದ್ದಾರೆ. ಇಂದು (ಮೇ 19) ಶುವ ದುರ್ವಾಸನೆ ಬರಲು ಆರಂಭಿಸಿದೆ. ಅನುಮಾನಗೊಂಡ ಅಕ್ಕ-ಪಕ್ಕದ ಜನರು ಮನೆಯೊಳಗೆ ಹೋಗಿ ನೋಡಿದಾಗ ಜಯಂತಿ ಶೆಟ್ಟಿ ಶವ ಕಂಡಿದೆ.

ಇದನ್ನೂ ಓದಿ: ಚಾಮರಾಜನಗರದಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥರು ಗುಜರಾತ್​ನಲ್ಲಿ ಪತ್ತೆ

ಇನ್ನು ಅನ್ನ, ನೀರು ಇಲ್ಲದೆ ಅಲ್ಲೇ ಅಸ್ವಸ್ಥಗೊಂಡು ಬಿದ್ದಿದ್ದ ಪ್ರಗತಿ ಶೆಟ್ಟಿಯನ್ನು ನೋಡಿದ್ದಾರೆ. ಬಳಿಕ ಸ್ಥಳಿಯರು ಈ ವಿಚಾರವನ್ನು ಕುಂದಾಪುರ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ತೀವ್ರ ಅಸ್ವಸ್ಥಳಾಗಿ ಬಿದ್ದಿದ್ದ ಪ್ರಗತಿ ಶೆಟ್ಟಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಜಯಂತಿ ಶವವನ್ನು ಕೂಡ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನೆರವೇರಿದೆ.

ಇತ್ತ ಆಸ್ಪತ್ರೆಯಲ್ಲಿ ಪ್ರಗತಿ ಶೆಟ್ಟಿ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಬಳಿಕ ಪ್ರಗತಿ ಶೆಟ್ಟಿ ಅವರ ಮರಣೋತ್ತರ ಪರೀಕ್ಷೆ ನೆರವೇರಿದೆ. ನಂತರ ಕುಂದಾಪುರ ಪೊಲೀಸರು ಹೆಂಗವಳ್ಳಿಯಲ್ಲಿ ತಾಯಿ ಮತ್ತು ಮಗಳ ಅಂತ್ಯಸಂಸ್ಕಾರವನ್ನು ಒಟ್ಟಿಗೆ ನೆರವೇರಿಸಿದರು. ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:57 pm, Sun, 19 May 24