AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯಲ್ಲಿ ಆಗಸ್ಟ್​ 30ರಂದು ಯೆಲ್ಲೋ ಅಲರ್ಟ್; ದಕ್ಷಿಣ ಕನ್ನಡದಲ್ಲಿ ಸೆಪ್ಟೆಂಬರ್ 1ರಿಂದ ದ್ವಿತೀಯ ಪಿಯು ತರಗತಿ ಆರಂಭ

ಪ್ರಥಮ ಪಿಯು ತರಗತಿಯನ್ನು ಸೆಪ್ಟೆಂಬರ್ 15 ರ ಬಳಿಕ ಜಂಟಿ ನಿರ್ದೇಶಕರ ಅನುಮತಿ ಪಡೆದು ಆರಂಭಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಉಡುಪಿಯಲ್ಲಿ ಆಗಸ್ಟ್​ 30ರಂದು ಯೆಲ್ಲೋ ಅಲರ್ಟ್; ದಕ್ಷಿಣ ಕನ್ನಡದಲ್ಲಿ ಸೆಪ್ಟೆಂಬರ್ 1ರಿಂದ ದ್ವಿತೀಯ ಪಿಯು ತರಗತಿ ಆರಂಭ
ಪ್ರಾತನಿಧಿಕ ಚಿತ್ರ (ಚಿತ್ರಕೃಪೆ: ದೈಜಿವರ್ಡ್)
TV9 Web
| Updated By: guruganesh bhat|

Updated on:Aug 29, 2021 | 3:23 PM

Share

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದಲೂ ವ್ಯಾಪಕ ಮಳೆಯಾಗುತ್ತಿದ್ದು, ಇಂದು (ಆಗಸ್ಟ್ 29) ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನಾಳೆ (ಆಗಸ್ಟ್ 30) ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 

ಸೆಪ್ಟೆಂಬರ್ 1ರಿಂದ ದಕ್ಷಿಣ ಕನ್ನಡದಲ್ಲಿ ದ್ವಿತೀಯ ಪಿಯು ಆರಂಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 1ರಿಂದ ದ್ವಿತೀಯ ಪಿಯುಸಿ ಭೌತಿಕ ತರಗತಿ ಆರಂಭಿಸಲು ನಿರ್ಣಯಿಸಲಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ 7 ದಿನ ಕ್ವಾರಂಟೈನ್ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದ್ದು, ವಸತಿ ನಿಲಯ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ನಡೆಸಲು ನಿರ್ಧರಿಸಲಾಗಿದೆ. ಕಾಲೇಜು ಹಾಸ್ಟೆಲ್‌ಗಳಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆಯಲಾಗುವುದು ಮತ್ತು ಕೊರೊನಾ ಸೋಂಕು ದೃಢವಾದರೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಪ್ರಥಮ ಪಿಯು ತರಗತಿಯನ್ನು ಸೆಪ್ಟೆಂಬರ್ 15 ರ ಬಳಿಕ ಜಂಟಿ ನಿರ್ದೇಶಕರ ಅನುಮತಿ ಪಡೆದು ಆರಂಭಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡುವಂತೆ ಜಾಗೃತಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮೈಸೂರಿನಲ್ಲಿ ನಡೆದ ಬಳಿಕ ಎಚ್ಚೆತ್ತುಕೊಂಡ ಮಂಗಳೂರು ಪೊಲೀಸರು, ಮಹಿಳಾ ಸುರಕ್ಷತೆಗಾಗಿ ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಇಆರ್​ಎಸ್​ಎಸ್​ ವಾಹನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡುವಂತೆ ಮತ್ತು ಕಮೀಷನರ್, ಡಿಸಿಪಿ ಸೇರಿದಂತೆ ಅಧಿಕಾರಿಗಳಿಗೆ‌ ಕರೆ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಲು ಜಾಗೃತಿ ಮೂಡಿಸಿದ್ದಾರೆ.  ಒಲಿಂಪಿಯನ್ ಎಂ.ಆರ್ ಪೂವಮ್ಮಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

100 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, 20 ಕ್ಕೂ ಹೆಚ್ಚು ತುರ್ತು ಪೊಲೀಸ್ ವಾಹನ ಬಳಕೆ ಮಾಡಲು ಈ ಸಂದರ್ಭದಲ್ಲಿ ಸೂಚಿಸಲಾಗಿದೆ. ಇನ್ನು ತುರ್ತು ಸಂದರ್ಭದಲ್ಲಿ 112 ನಂಬರ್​ಗೆ ಕರೆ ಮಾಡುವ ಬಗ್ಗೆಯೂ ಜಾಗೃತಿ ನೀಡಲಾಯಿತು. ಅಲ್ಲದೆ ಕರೆ ಬಂದ ಸ್ಥಳಕ್ಕೆ ಗರಿಷ್ಠ 15 ನಿಮಿಷದ ಒಳಗೆ ತಲುಪುವ ಇಆರ್​ಎಸ್​ಎಸ್ ವಾಹನದ ಬಗ್ಗೆ ಮಾಹಿತಿ ನೀಡಿದ್ದು, ನಗರ ವ್ಯಾಪ್ತಿಯಲ್ಲಿ 5 ನಿಮಿಷದಲ್ಲಿ ಸ್ಥಳಕ್ಕೆ ಬಂದು ಪ್ರತಿಕ್ರಿಯೆ ನೀಡುವ ಬಗ್ಗೆಯೂ ಪ್ರಾಯೋಗಿಕವಾಗಿ ಕರೆ ಮಾಡಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪರೀಕ್ಷೆ ನಡೆಸಿದ್ದಾರೆ. ಜತೆಗೆ ಮಹಿಳೆಯರು, ವಿದ್ಯಾರ್ಥಿನಿಯರು ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 

ದೇಶ ಬಿಟ್ಟು ಓಡಿಹೋದ ಮಾಜಿ ಅಧ್ಯಕ್ಷ ಅಶ್ರಫ್​ ಘನಿ ಅಫ್ಘಾನಿಸ್ತಾನಕ್ಕೆ ಬಂದು ತಾಲಿಬಾನ್​ ಸರ್ಕಾರವನ್ನು ಸೇರುವ ಸಾಧ್ಯತೆ: ಮೂಲಗಳು

11 ತಿಂಗಳ ಮಗು ಮತ್ತು 11 ವರ್ಷದ ಬಾಲಕಿಗೆ ಕಂಡುಬಂದಿದ್ದ 2 ಅನ್ನನಾಳದ ಸಮಸ್ಯೆ; ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ, ಗುಣಮುಖ

(Udupi Rain Yellow alert on August 30 2nd PUC classes commence on September 1)

Published On - 3:15 pm, Sun, 29 August 21