AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಪತರು ನಾಡಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು, ಬೆಚ್ಚಿ ಬಿದ್ದ ಜನತೆ

ತುಮಕೂರು: ಕಡು ಕತ್ತಲಿನಲ್ಲಿ ಮುಖಕ್ಕೆ ಮಾಸ್ಕ್​ ಧರಿಸಿ ಬೈಕ್​​ನಲ್ಲಿ ಎಂಟ್ರಿ ಕೊಟ್ಟ ಇಬ್ಬರು ಏಕಾಏಕಿ ಬಂದೂಕಿನಿಂದ ಬುಲೆಟ್ ಸಿಡಿಸಿದ್ದಾರೆ. ತಮ್ಮ ಏರಿಯಾದಲ್ಲಾದ ಬಂದೂಕಿನ ಸಪ್ಪಳ ಕೇಳಿ ಅಲ್ಲಿದ್ದ ಜನರು ನಡುಗಿ ಹೋದ್ರು. ಮಧ್ಯರಾತ್ರಿ ಏಕಾಏಕಿ ಗುಂಡು ಹಾರಿಸಿದ್ರು..!  ಅದೆಷ್ಟು ವೇಗವಾಗಿ ಬೆಳೀತಿದ್ಯೋ ಅಷ್ಟೇ ವೇಗವಾಗಿ ಕ್ರೈಂ ಸಪ್ಪಳ ಕೇಳಿಸ್ತಿದೆ. ಪಾತಕಲೋಕದ ಕರಿನೆರಳು ಆವರಿಸಿದೆ. ಮೇಲಿಂದ ಮೇಲೆ ಮರ್ಡರ್. ರಕ್ತಚರಿತ್ರೆ ನಡೀತಿರೋವಾಗ್ಲೇ ನಡುರಾತ್ರಿ ಬಂದೂಕಿನ ಘರ್ಜನೆ ಕೇಳಿಸಿದೆ. ನಗರದ ಬಟವಾಡಿ ಬಳಿಯ ಎಪಿಎಂಸಿ ಯಾರ್ಡ್​ ಹತ್ತಿರ ಎಂಟ್ರಿ ಕೊಟ್ಟಿದ್ದ […]

ಕಲ್ಪತರು ನಾಡಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು, ಬೆಚ್ಚಿ ಬಿದ್ದ ಜನತೆ
ಸಾಧು ಶ್ರೀನಾಥ್​
|

Updated on:Dec 03, 2019 | 8:48 AM

Share

ತುಮಕೂರು: ಕಡು ಕತ್ತಲಿನಲ್ಲಿ ಮುಖಕ್ಕೆ ಮಾಸ್ಕ್​ ಧರಿಸಿ ಬೈಕ್​​ನಲ್ಲಿ ಎಂಟ್ರಿ ಕೊಟ್ಟ ಇಬ್ಬರು ಏಕಾಏಕಿ ಬಂದೂಕಿನಿಂದ ಬುಲೆಟ್ ಸಿಡಿಸಿದ್ದಾರೆ. ತಮ್ಮ ಏರಿಯಾದಲ್ಲಾದ ಬಂದೂಕಿನ ಸಪ್ಪಳ ಕೇಳಿ ಅಲ್ಲಿದ್ದ ಜನರು ನಡುಗಿ ಹೋದ್ರು.

ಮಧ್ಯರಾತ್ರಿ ಏಕಾಏಕಿ ಗುಂಡು ಹಾರಿಸಿದ್ರು..!  ಅದೆಷ್ಟು ವೇಗವಾಗಿ ಬೆಳೀತಿದ್ಯೋ ಅಷ್ಟೇ ವೇಗವಾಗಿ ಕ್ರೈಂ ಸಪ್ಪಳ ಕೇಳಿಸ್ತಿದೆ. ಪಾತಕಲೋಕದ ಕರಿನೆರಳು ಆವರಿಸಿದೆ. ಮೇಲಿಂದ ಮೇಲೆ ಮರ್ಡರ್. ರಕ್ತಚರಿತ್ರೆ ನಡೀತಿರೋವಾಗ್ಲೇ ನಡುರಾತ್ರಿ ಬಂದೂಕಿನ ಘರ್ಜನೆ ಕೇಳಿಸಿದೆ. ನಗರದ ಬಟವಾಡಿ ಬಳಿಯ ಎಪಿಎಂಸಿ ಯಾರ್ಡ್​ ಹತ್ತಿರ ಎಂಟ್ರಿ ಕೊಟ್ಟಿದ್ದ ಇಬ್ಬರು ಪುಂಡರು ಡಬಲ್​ ಬ್ಯಾರೆಲ್ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ.

ಗುಂಡಿನ ಸಪ್ಪಳ ಕೇಳಿ ಬೆಚ್ಚಿ ಬಿದ್ದ ಜನತೆ..! ತುಮಕೂರಲ್ಲಿ ಎಪಿಎಂಸಿ ಮಳಿಗೆಯ ನಂದಿ ಟ್ರೇಡರ್ಸ್ ಅಂದ್ರೆ ಫುಲ್ ಫೇಮಸ್. ಅದ್ರಲ್ಲೂ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯೋ ಜಾಗ. ಹೀಗಾಗಿ ದರೋಡೆಗೆ ಹೊಂಚು ಹಾಕಿದ್ದ ಅಪರಿಚಿತ ಕ್ರಿಮಿಗಳು ಅಲ್ಲೇ ಸಮೀಪವಿದ್ದ ವಿದ್ಯುತ್​ ಕಂಬಕ್ಕೆ ಶೂಟ್ ಮಾಡಿ ಕತ್ತಲಾಗಿಸಿದ್ದಾರೆ. ಬಳಿಕ ನಂದಿ ಟ್ರೇಡರ್ಸ್​​ಗೆ ನುಗ್ಗಿ ಇರೋ ಬರೋದನೆಲ್ಲಾ ಕಳವು ಮಾಡೋಕೆ ಪ್ಲ್ಯಾನ್ ಮಾಡಿದ್ರು ಅನ್ನೋ ಅನುಮಾನ ಸ್ಥಳೀಯರದ್ದಾಗಿದೆ.

ಹತ್ತಿರದ ಅರಳಿ ಮರದಲ್ಲಿದ್ದ ಬಾವಲಿ ಬೇಟೆಯಾಡೋಕೆ ಬಂದಿದ್ರು ಅನ್ನೋದು ಪೊಲೀಸರ ಅನುಮಾನ. ಆದ್ಯಾವ ಗುಂಡಿನ ಸಪ್ಪಳ ಕೇಳ್ತೋ ಒಳಗಿದ್ದ ಕೆಲಸಗಾರರು ಹೊರಬಂದು ನೋಡ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಇದೀಗ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸಿ ಅಪರಿಚಿತರ ಬಂಧನಕ್ಕೆ ಬಲೆ ಬೀಸಿದ್ದಾರೆ.

Published On - 8:47 am, Tue, 3 December 19

ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್