ಕರ್ನಾಟಕ ಆರು ಪೊಲೀಸರು ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ
ತನಿಖೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳು ಕೇಂದ್ರ ಗೃಹ ಸಚಿವರ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರು: ತನಿಖೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳು ಕೇಂದ್ರ ಗೃಹ ಸಚಿವರ ಪದಕಕ್ಕೆ ಆಯ್ಕೆಯಾಗಿದ್ದಾರೆ. ಎಸಿಪಿ ಎಚ್.ಎನ್.ಧರ್ಮೇಂದ್ರ, ಡಿವೈಎಸ್ಪಿಗಳಾದ ಪರಮೇಶ್ವರ ಹೆಗಡೆ, ಸಿ.ಬಾಲಕೃಷ್ಣ, ಇನ್ಸ್ಪೆಕ್ಟರ್ ಮನೋಜ್ ಹೂವಳೆ, ದೇವರಾಜ್, ಶಿವಪ್ಪ ಸತ್ತೆಪ್ಪಾ ಕಮಟಗಿ ಪದಕ ಪುರಸ್ಕೃತರು.
ದೇಶದ ವಿವಿಧ ರಾಜ್ಯಗಳ ಒಟ್ಟು 152 ಮಂದಿ ಗೃಹ ಸಚಿವರ ಪದಕ ಘೋಷಿಸಲಾಗಿದೆ. ಅಪರಾಧ ಪ್ರಕರಣಗಳ ತನಿಖೆಯಲ್ಲಿ ಅತ್ಯುನ್ನತ ಗುಣಮಟ್ಟ, ಮಾನದಂಡ ಕಾಪಾಡಿಕೊಳ್ಳುವ ಅಧಿಕಾರಿಗಳಿಗೆ ಈ ಪದಕ ಘೋಷಿಸಲಾಗುತ್ತದೆ. ಕೇಂದ್ರ ಸರ್ಕಾರವು 2018ರಿಂದ ಈ ಪದಕಗಳನ್ನು ನೀಡುವ ಪ್ರಕ್ರಿಯೆ ಆರಂಭಿಸಿದೆ.
ಈ ವರ್ಷ ಪದಕ ಪಡೆಯುತ್ತಿರುವವರ ಪೈಕಿ 15 ಮಂದಿ ಸಿಬಿಐ ಅಧಿಕಾರಿಗಳು ಎನ್ನುವುದು ವಿಶೇಷ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ತಲಾ 11, ಉತ್ತರ ಪ್ರದೇಶದ 10, ಕೇರಳ ಮತ್ತು ರಾಜಸ್ತಾನದ ತಲಾ 9, ತಮಿಳುನಾಡಿನ 8, ಬಿಹಾರದ 7, ಗುಜರಾತ್, ಕರ್ನಾಟಕ ಮತ್ತು ದೆಹಲಿಯ 6 ಮಂದಿ ಇದ್ದಾರೆ. ಉಳಿದವರು ಇತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದವರು. ಈ ಬಾರಿಯ ಪದಕ ಪುರಸ್ಕೃತರಲ್ಲಿ 28 ಮಂದಿ ಮಹಿಳಾ ಪೊಲೀಸ್ ಅಧಿಕಾರಿಗಳು.
“Union Home Minister’s Medal for Excellence in Investigation”, 2021 awarded
Press release- https://t.co/MXGWWcFgIg pic.twitter.com/8HLc1fo4Mn
— Spokesperson, Ministry of Home Affairs (@PIBHomeAffairs) August 12, 2021
(Union Home Ministers Medal for 6 Officers of Karnataka Police)
ಇದನ್ನೂ ಓದಿ: ಪೊಲೀಸ್ ವ್ಯವಸ್ಥೆ ಜನಸ್ನೇಹಿ ಆಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ಪೊಲೀಸ್ ಸ್ಟೇಷನ್ನಲ್ಲೇ ಬರ್ತಡೇ ಆಚರಣೆ; ಬಂಕಾಪುರ ಪಿಎಸ್ಐ ಅಮಾನತು