ಮೋದಿ ಹುಟ್ಟುಹಬ್ಬಕ್ಕೆ ಸ್ವಚ್ಛತಾ ಅಭಿಯಾನ; ಉಕ್ಕು ಕಾರ್ಖಾನೆಯಲ್ಲಿ ಕಸ ಗುಡಿಸಿದ ಹೆಚ್​ಡಿ ಕುಮಾರಸ್ವಾಮಿ

|

Updated on: Sep 17, 2024 | 5:55 PM

ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಇಲಾಖೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಉಕ್ಕು ಕಾರ್ಖಾನೆಯಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.

ಮೋದಿ ಹುಟ್ಟುಹಬ್ಬಕ್ಕೆ ಸ್ವಚ್ಛತಾ ಅಭಿಯಾನ; ಉಕ್ಕು ಕಾರ್ಖಾನೆಯಲ್ಲಿ ಕಸ ಗುಡಿಸಿದ ಹೆಚ್​ಡಿ ಕುಮಾರಸ್ವಾಮಿ
ಉಕ್ಕು ಕಾರ್ಖಾನೆಯಲ್ಲಿ ಕಸ ಗುಡಿಸಿದ ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನ. ಹೀಗಾಗಿ, ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಸ್ವಚ್ಛತಾ ಅಭಿಯಾನ ಕೈಗೊಂಡಿದ್ದಾರೆ. ಇದರ ಜೊತೆ ರಕ್ತದಾನ ಶಿಬಿರ, ಶ್ರಮ ದಾನ ಕೂಡ ನಡೆದಿದೆ. ಇಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್​ಡಿ ಕುಮಾರಸ್ವಾಮಿ ಕೂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು, ಮೋದಿಯವರ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ SAIL-ಭಿಲಾಯ್ ಸ್ಟೀಲ್ ಪ್ಲಾಂಟ್‌ಗೆ ಮೊದಲ ಬಾರಿಗೆ ಭೇಟಿ ನೀಡಿದ್ದು, ಯುನಿವರ್ಸಲ್ ರೈಲ್ ಮಿಲ್‌ನಿಂದ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದರು. ಅವರು ಇಸ್ಪತ್ ಭವನದಲ್ಲಿ ಸ್ವಚ್ಚತಾ ಪ್ರತಿಜ್ಞೆಯನ್ನು ತೆಗೆದುಕೊಂಡರು.


ಇದನ್ನೂ ಓದಿ: ನರೇಂದ್ರ ಮೋದಿ ವಿದೇಶಾಂಗ ನೀತಿ ಸೂಪರ್​ಹಿಟ್; ಭಾರತಕ್ಕೆ ಹೆಚ್ಚಾದ ಜಾಗತಿಕ ಮಾನ್ಯತೆ

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಹೆಚ್.ಡಿ. ಕುಮಾರಸ್ವಾಮಿ, ಭಾರತದ ಸ್ವಚ್ಛತೆಯನ್ನು ಪ್ರತಿಪಾದಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ. ಬಾಪೂಜಿ ಕನಸನ್ನು ನನಸು ಮಾಡಿದವರು ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿಯವರು. ಸ್ವಚ್ಚ ಭಾರತ ಎನ್ನುವುದು ಬರೀ ಅಭಿಯಾನವಷ್ಟೇ ಅಲ್ಲ, ಅದನ್ನು ನಿತ್ಯ ಆಚರಣೆಯಾಗಿ ಪರಿವರ್ತಿಸಿದ್ದು ನಮ್ಮ ಪ್ರಧಾನಿಗಳು ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.


ಇದನ್ನೂ ಓದಿ: Cabinet Meeting: ಕಲ್ಯಾಣ ಕರ್ನಾಟಕಕ್ಕೆ ಭರ್ಜರಿ ಕೊಡುಗೆ; ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ

ಮಾನ್ಯ ಪ್ರಧಾನಿಗಳ ಜನ್ಮದಿನವಾದ ಇಂದು ನಾನು ಬಿಲಾಯ್ ಉಕ್ಕು ಕಾರ್ಖಾನೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡೆ. ಕಾರ್ಖಾನೆಯ ಕಾರ್ಮಿಕರು, ಅಧಿಕಾರಿಗಳು ನನ್ನೊಂದಿಗೆ ಭಾಗಿಯಾದರು. ಮತ್ತೊಮ್ಮೆ ಪ್ರಧಾನಿಗಳಿಗೆ ಹೃದಯಪೂರ್ವಕವಾಗಿ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದು ಸಚಿವ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ